More

    ಜಾಗ ನೀಡಿದರೆ ಕಿತ್ತೂರಲ್ಲಿ ಪಿಜಿ ಸೆಂಟರ್

    ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರಿನಲ್ಲಿ ಭೂಮಿ ಮತ್ತು ಮೂಲ ಸೌಕರ್ಯ ಒದಗಿಸಿಕೊಟ್ಟರೆ, ಅಲ್ಲೊಂದು ಸ್ನಾತಕೋತ್ತರ ಕೇಂದ್ರ ಹಾಗೂ ಕಿತ್ತೂರು ಚನ್ನಮ್ಮಳ ಚರಿತ್ರೆ ಕುರಿತು ವಸ್ತು ಸಂಗ್ರಹಾಲಯ ಆರಂಭಿಸಲಾಗುವುದು ಎಂದು ಆರ್‌ಸಿಯು ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಹೇಳಿದರು.

    ವಿಶ್ವ ವಿದ್ಯಾಲಯದ ಆವರಣಕ್ಕೆ ಸೋಮವಾರ ಆಗಮಿಸಿದ ಕಿತ್ತೂರು ಉತ್ಸವದ ವೀರ ಜ್ಯೋತಿ ಸ್ವಾಗತಿಸಿ ಮಾತನಾಡಿದ ಅವರು, ಕಿತ್ತೂರಿನ ಇತಿಹಾಸವನ್ನು ಇನ್ನಷ್ಟು ಪ್ರಚುರಪಡಿಸುವಲ್ಲಿ ವಿಶ್ವವಿದ್ಯಾಲಯ ಚನ್ನಮ್ಮ ಹಾಗೂ ರಾಯಣ್ಣ ಅಧ್ಯಯನ ಪೀಠ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಕಿತ್ತೂರು ಉತ್ಸವವು ಹಿಂದೆಂದಿ ಗಿಂತಲೂ ವೈಭವೋಪೇತವಾಗಿ ಈ ವರ್ಷ ಜರುಗಲಿದ್ದು, ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕಾಕತಿಯ ಕಿತ್ತೂರು ಚನ್ನಮ್ಮ ವೀರಜ್ಯೋತಿ ಯಾತ್ರೆ ನೇತೃತ್ವ ವಹಿಸಿದ್ದ ಡಾ.ವಿ.ಪಾಟೀಲ ಮಾತನಾಡಿ, ಚನ್ನಮ್ಮ ಜನ್ಮದಿನವು ನ.14 ಆಗಿದ್ದು, ಅಕ್ಟೋಬರ್ 23 ಕಿತ್ತೂರಿನ ವಿಜಯೋತ್ಸವ ದಿನವಾಗಿದೆ. ವಿದ್ಯಾರ್ಥಿಗಳು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಉತ್ಸವದ ವಿಜಯೋತ್ಸವದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ.ಎಸ್.ಎಂ.ಗಂಗಾಧರಯ್ಯ, ಕುಲಸಚಿವರಾದ ಕೆ.ಟಿ.ಶಾಂತಲಾ,
    ಪ್ರೊ.ಶಿವಾನಂದ ಗೋರನಾಳೆ, ಹಣಕಾಸು ಅಕಾರಿ ಪ್ರೊ.ಡಿ.ಎನ್.ಪಾಟೀಲ ಸೇರಿ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts