More

    ಜಾಗೃತಿಯೂ ಇಲ್ಲ, ಲಸಿಕೆಯೂ ಇಲ್ಲ

    ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕಾರಣ ಪ್ರಾರಂಭವಾಗಿ ನಾಲ್ಕು ತಿಂಗಳಾದರೂ, ಅಂಗವಿಕಲರಿಗೆ ಲಸಿಕೆ ವಿತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ 44,256 ಅಂಗವಿಕಲರಲ್ಲಿ ಕೇವಲ 2,056 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. 42 ಸಾವಿರಕ್ಕೂ ಅಧಿಕ ಅಂಗವಿಕಲರಿಗೆ ಲಸಿಕೆ ವಿತರಿಸಿಲ್ಲ.

    ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ 2016ರ ಕಾಯ್ದೆ ಪ್ರಕಾರ ಅಂಗವಿಕಲರಿಗೆ ಯಾವುದೇ ಲಸಿಕೆ ವಿತರಿಸಬೇಕಾದರೆ ಮೊದಲ ಆದ್ಯತೆ ನೀಡಬೇಕು ಎಂಬ ಕಾನೂನಿದೆ. ಆದರೂ ಅಂಗವಿಕಲರಿಗೆ ಲಸಿಕೆ ನೀಡಿಲ್ಲ. ಇಲಾಖೆಯ ಅಂಕಿ ಅಂಶಗಳ ಪ್ರಕಾರ 36 ಸಾವಿರ ಅಂಗವಿಕಲರು 18 ವರ್ಷ ಮೇಲ್ಪಟ್ಟವರಿದ್ದಾರೆ. 8 ಸಾವಿರ ಅಂಗವಿಕಲರು 18 ವರ್ಷದೊಳಗಿನವರಿದ್ದಾರೆ. ಇದರಲ್ಲಿ ಶೇ.16 ಜನ ಅಂಧರಿದ್ದಾರೆ. ಇವರೆಲ್ಲ ಲಸಿಕೆ ಹಾಕಿಸಿಕೊಳ್ಳಲು ಕಾಯುತ್ತಿದ್ದಾರೆ.

    ಜಾಗೃತಿ ಮೂಡಿಸಿದ ಇಲಾಖೆ: ಕಾಯ್ದೆ ಪ್ರಕಾರ ಅಂಗವಿಕಲರು ಲಸಿಕೆ ಪಡೆಯಲು ಕಾಯಬಾರದು. ಸ್ಥಳೀಯ ಸರ್ಕಾರಿ ಆಸ್ಪತ್ರೆ ಮತ್ತು ಲಸಿಕಾಕರಣ ಕೇಂದ್ರಗಳಲ್ಲಿ ಅವರು ತನ್ನ ಯುಡಿಐಡಿ ಗುರುತಿನ ಚೀಟಿ ತೋರಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ, ಈ ಮಾಹಿತಿಯನ್ನು ಅಂಗವಿಕಲರ ಕಲ್ಯಾಣ ಇಲಾಖೆ ನೀಡಿಲ್ಲ. ಕರೊನಾ ಲಸಿಕೆ ಬಗ್ಗೆ ಬಹಳ ಜನರಲ್ಲಿ ತಪ್ಪು ಕಲ್ಪನೆ ಇತ್ತು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂಜರಿಯುತ್ತಿದ್ದರು.

    ಈಗಲೂ ಕೆಲ ಅಂಗವಿಕಲರು ಲಸಿಕೆ ಪಡೆಯಲು ಭಯಗೊಳ್ಳುತ್ತಿದ್ದಾರೆ. ಆದರೆ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂಬ ವಿಚಾರವಾಗಿ ಅಂಗವಿಕಲರ ಕಲ್ಯಾಣ ಇಲಾಖೆ ಜಾಗೃತಿಯನ್ನೂ ಮೂಡಿಸುತ್ತಿಲ್ಲ ಎಂದು ಆರೋಪಿಸುತ್ತಾರೆ ಲಸಿಕೆ ವಂಚಿತ ಅಂಗವಿಕಲರು.

    ಸರ್ಕಾರದ ಪ್ರಯೋಜನ ಪಡೆಯಲು ನನ್ನ ಬಳಿ ಯುಡಿಐಡಿ ಕಾರ್ಡ್ ಇದೆ. ಕೋವಿಡ್ ಎರಡನೇ ಅಲೆ ಹಾವಳಿ ಹೆಚ್ಚಾಗಿದೆ. ಭಯಭೀತರಾಗಿದ್ದೇವೆ. ಸರ್ಕಾರ ನಮಗೆ ಯಾವಾಗ ಲಸಿಕೆ ನೀಡುತ್ತದೆಯೋ ಏನೋ ತಿಳಿದಿಲ್ಲ. ಅಧಿಕಾರಿಗಳು ಲಸಿಕೆ ವಿತರಣೆ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.
    | ಸಿದ್ಧಲಿಂಗ ನಾಗನೂರಿ ಬೆಳಗಾವಿಯ ಅಂಗವಿಕಲ (35 ವರ್ಷ)

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts