More

    ಜಾಗತಿಕ ಸಂಪರ್ಕ ಭಾಷೆಯಾಗಿದೆ ಇಂಗ್ಲಿಷ್

    ಬೆಳಗಾವಿ: ಒಂದು ಭಾಷೆಯನ್ನು ಮಾತನಾಡುವ ಜನರ ಪ್ರಮಾಣ, ಆ ಭಾಷೆಯ ಸರಳೀಕರಣ ಮತ್ತು ಪ್ರಭುತ್ವದಿಂದಾಗಿ ಆ ಭಾಷೆಯು ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಇಂಗ್ಲಿಷ್‌ಗೆ ಈ ಎಲ್ಲ ಅಂಶಗಳು ಪೂರಕವಾಗಿವೆ. ಹಾಗಾಗಿ, ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಇಂಗ್ಲಿಷ್ ಸ್ಥಾನ ಪಡೆದು ಜಾಗತಿಕ ಭಾಷೆಯಾಗಿದೆ ಎಂದು ಪ್ರಾಚಾರ್ಯ ಡಾ.ಎಂ.ಜಯಪ್ಪ ಅಭಿಪ್ರಾಯಪಟ್ಟರು.

    ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ‘ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಗ್ಲಿಷ್ ವ್ಯಾಕರಣ’ ಎಂಬ ವಿಷಯದ ಕುರಿತು ಸೋಮವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಇಂಗ್ಲಿಷ್ ಜಾಗತಿಕ ಭಾಷೆಯಾಗಿ ಪ್ರಸಿದ್ಧಿ ಪಡೆದ ಮೇಲೆ ಅದರ ಪ್ರಾಮುಖ್ಯತೆ ಹೆಚ್ಚಾಯಿತು. ಇಂಗ್ಲಿಷ್ ಇಂದು ಉದ್ಯೋಗ ಮತ್ತು ಜಾಗತಿಕ ಸಂಪರ್ಕದ ಭಾಷೆಯಾಗಿ ಸ್ಥಾನ ಪಡೆದುಕೊಂಡಿದೆ ಎಂದರು.

    ಕಾರ್ಯಾಗಾರ ಉದ್ಘಾಟಿಸಿದ ರಾಣಿ ಚನ್ನಮ್ಮ ವಿವಿ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ವಿ.ಎಫ್.ನಾಗಣ್ಣವರ ಮಾತನಾಡಿ, ಮಕ್ಕಳು ಹಲವಾರು ಚಟುವಟಿಕೆಗಳನ್ನು ಸಹಜವಾಗಿ ಕಲಿಯುತ್ತಾರೆ. ಆದರೆ, ಭಾಷೆ ಮಾತ್ರ ಪ್ರಯತ್ನದ ಮೂಲಕ ಕಲಿಯಬೇಕಾಗುತ್ತದೆ. ಮಕ್ಕಳಿಗೆ ಅನೇಕ ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ. ಜಾಗತೀಕರಣದಿಂದ ಇಡೀ ಜಗತ್ತು ಒಂದು ಹಳ್ಳಿಯಾಗಿದೆ.

    ಇಂಗ್ಲಿಷ್ಜ ಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾತನಾಡುವ ಭಾಷೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಇಂಗ್ಲಿಷ್ ಬಹು ಮುಖ್ಯ. ಮೊದಲು ಮಾತನಾಡಲು ಕಲಿಯಬೇಕು. ನಂತರ ಬರವಣಿಗೆ ಸಹಜವಾಗಿ ಬರುತ್ತದೆ ಎಂದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಪ್ರಾಧ್ಯಾಪಕಿ ಡಾ.ಮಧುಶ್ರೀ ಕಳ್ಳಿಮನಿ, ಡಾ.ನಾಗರತ್ನಾ ಪರಾಂಡೆ, ಡಾ.ಫಯಾಜ್‌ಅಹ್ಮದ್ ಎಚ್.ಇಳಕಲ್ ಮತ್ತು ಪೂಜಾ ಹಳ್ಯಾಳ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಯೋಜಕ ಡಾ. ಕವಿತಾ ಕುಸುಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ನಾಯಿಕ ಪ್ರಾರ್ಥಿಸಿದರು. ಉಪನ್ಯಾಸಕಾರಾದ ಸುರೇಶ ಗಂಗೋತ್ರಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಷಫನಾಜ ಬುಖಾರಿ ನಿರೂಪಿಸಿದರು. ಚಂದ್ರಿಕಾ ಕಾಂಬ್ಳೆ ವಂದಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts