More

    ಜಲಾವೃತಗೊಂಡ ಕೊಂಕಲ್ ಪ್ರೌಢಶಾಲಾ ಆವರಣ

    ವಡಗೇರಾ : ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ನಡೆದಾಡಲೂ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಶಾಲಾ ಆವರಣದಲ್ಲಿ ಪ್ರೌಢಶಾಲೆಯಿದ್ದು, ೮ರಿಂದ ೧೦ನೇ ತರಗತಿವರೆಗೆ ೨೯೯ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾಭಾಸ ಮಾಡುವ ಆವರಣ ಸುಂದರ, ಸ್ವಚ್ಛವಾಗಿರಬೇಕು. ಆದರೆ ಇಲ್ಲಿ ಮಾತ್ರ ಅಧೋಗತಿಗೆ ತಲುಪಿದೆ.

    ಅನೇಕ ವರ್ಷಗಳಿಂದಲೂ ಈ ಸಮಸ್ಯೆಯಿದ್ದು, ನಿರ್ವಹಣೆ ಕೊರತೆ ಇದಕ್ಕೆ ಕಾರಣ. ಮಳೆ ನೀರು ಮುಂದೆ ಸಾಗಿಸಿ ಶಾಲಾ ಆವರಣದಲ್ಲಿ ಮರಂ ಹಾಕುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಪಾಲಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗೊಂದೆನೂರ, ಕುರಿಹಾಳ, ಅನಕಸೂಗೂರ, ಚನ್ನೂರ ಹಾಗೂ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ, ಕೂಡಲೇ ಅಧಿಕಾರಿಗಳು ಶಾಲೆ ಕಡೆ ಗಮನಹರಿಸಿ ನೀರು ನಿಲ್ಲದಂತೆ ಮಾಡಿಕೋಡಬೇಕು. ಇಲ್ಲದಿದ್ದರೆ ಗ್ರಾಪಂ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts