More

    ಜಮೀನು ವರ್ಗಾಯಿಸಿಕೊಂಡವರ ವಿರುದ್ಧ ಕ್ರಮ, ಉಪವಿಭಾಗಾಧಿಕಾರಿ ರಘುನಂದನ್ ಭರವಸೆ, ಅನಿರ್ದಿಷ್ಟಾವಧಿ ಧರಣಿ ಹಿಂಪಡೆದ ದಸಂಸ

    ಬಾಗೇಪಲ್ಲಿ: ಸರ್ಕಾರದಿಂದ ಸಾಲ-ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನುಗಳ ಕ್ರಯ ಮಾಡಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗ ಕಳೆದ 6 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಅಂತ್ಯವಾಗಿದೆ.

    ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ರಘುನಂದನ್ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಭರವಸೆ ನೀಡಿದ್ದರಿಂದ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಹಿಂಪಡೆದರು.

    ತಾಲೂಕಿನ ದೇವರಗುಡಿಪಲ್ಲಿ ಪಂಚಾಯಿತಿಯ ವಿವಿಧ ಗ್ರಾಮಗಳ ದಲಿತರಿಗೆ ವಿವಿಧ ಯೋಜನೆಗಳಲ್ಲಿ ಸಾಲ ವಾಡಿಸಿಕೊಡುವುದಾಗಿ ನಂಬಿಸಿ 80 ಎಕರೆ ಕೃಷಿ ಜಮೀನನ್ನು ಗೂಳೂರಿನ ವೆಂಕಟರಾಮಯ್ಯಶೆಟ್ಟಿ 15 ವರ್ಷಗಳ ಹಿಂದೆ ಬಾಗೇಪಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ವಾಡಿಸಿ ಖಾತೆ ವರ್ಗಾವಣೆ ವಾಡಿಸಿಕೊಂಡಿದ್ದಾರೆ. ಅವರು ಮೃತಪಟ್ಟ ನಂತರ ಅವರ ಮಕ್ಕಳಾದ ಸತ್ಯನಾರಾಯಣಬಾಬು ಮತ್ತು ವೆಂಕಟೇಶ್‌ಬಾಬು ಹೆಸರಿಗೆ 80 ಎಕರೆ ಪೌತಿ ಖಾತೆ ಆಗಿದೆ ಎಂದು ದಸಂಸ ಸಂಟನಾ ಸಂಚಾಲಕ ಬಿ.ವಿ.ವೆಂಕಟರವಣ ಆರೋಪಿಸಿದರು.ದಲಿತರಿಗೆ ಅರಿವಿಲ್ಲದ ಕಾರಣ ಜಮೀನು ಕ್ರಯ ವಾಡಿಕೊಟ್ಟಿದ್ದಾರೆ. ಹಾಗಾಗಿ ಜಮೀನಿನ ಕ್ರಯ ಮತ್ತು ಖಾತೆಯನ್ನು ರದ್ದುಗೊಳಿಸಿ ಮೂಲ ಖಾತೆದಾರರಿಗೆ ಮಂಜೂರು ವಾಡಿಕೊಡಬೇಕೆಂದು ಮನವಿ ಮಾಡಿದರು.

    ಜಮೀನು ಖಾತೆದಾರರು ಕ್ರಯದ ಮೂಲಕ ಪಡೆದುಕೊಂಡಿರುವ ಕಾರಣ ದಾಖಲೆಗಳನ್ನು ಪರಿಶೀಲಿಸಿ ಪಿಟಿಸಿಎಲ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ. ತಹಸೀಲ್ದಾರ್ ಕಚೇರಿಯಿಂದ ವರದಿ ತರಿಸಿಕೊಂಡು ತೀರ್ವಾನ ತೆಗೆದುಕೊಳ್ಳುವುದಾಗಿ ಉಪವಿಭಾಗಾಧಿಕಾರಿ ರುನಂದನ್ ತಿಳಿಸಿದರು.

    ತಾಲೂಕು ದಲಿತ ಸಂರ್ಷ ಸಮಿತಿ ಸಂಚಾಲಕ ಪೈಪಾಳ್ಯರವಿ, ಪದಾಧಿಕಾರಿಗಳಾದ ಎಲ್.ಎನ್.ನರಸಿಂಹಯ್ಯ, ಕೋಟಪ್ಪ, ಎಚ್.ಎನ್.ಗೋಪಿ, ಪಿ.ನಾಗಪ್ಪ, ಗಂಗಾಧರ, ಪ್ರಕಾಶ್, ಶ್ರೀನಿವಾಸ್, ನರಸಿಂಹಪ್ಪ, ಮಂಜುನಾಥ ಮತ್ತಿತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts