More

    ಜಮೀನಿನ ಸ್ವಲ್ಪ ಭಾಗ ಸಿರಿಧಾನ್ಯ ಬೆಳೆಸಿ-ತಿಪ್ಪೇಸ್ವಾಮಿ

    ದಾವಣಗೆರೆ: ವಿಷಮುಕ್ತ ಆಹಾರ ಹಾಗೂ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಅವಶ್ಯಕವಾಗಿದ್ದು, ರೈತರು ತಮ್ಮ ಜಮೀನಿನ ಸ್ವಲ್ಪ ಭಾಗವಾದರೂ ಸಿರಿಧಾನ್ಯ ಬೆಳೆಯಬೇಕು ಎಂದು ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹೇಳಿದರು.
    ದಾವಣಗೆರೆ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಹಾಗೂ ಪೌಷ್ಟಿಕ ಭದ್ರತೆ ಮತ್ತು ಆತ್ಮ ಯೋಜನೆಯಡಿ ಆಲೂರು ಗ್ರಾಮದ ಪ್ರಗತಿಪರ ರೈತ ಧ್ರುವಕುಮಾರ್ ಜಮೀನಿನಲ್ಲಿ ಸಿರಿಧಾನ್ಯ (ಊದಲು) ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾಯನಾಡಿದರು.
    ಸಿರಿಧಾನ್ಯ ಬೆಳೆಸಲು ಹೆಚ್ಚು ನೀರಿನ ಅವಶ್ಯಕತೆಯಿಲ್ಲ. ಅತಿ ಕಡಿಮೆ ಗೊಬ್ಬರ ಬಳಸಿದರೂ ಸಾಕು. ಕೀಟ-ರೋಗಗಳ ಭಾದೆ ಇರುವುದಿಲ್ಲ ಎಂದು ಹೇಳಿದರು.
    ಹಿಂದೆಲ್ಲ ಬಡವರು, ಕೂಲಿಕಾರರು ಮಾತ್ರವೇ ನವಣೆ, ಸಾಮೆ, ಊದಲು, ಹಾರಕ, ಬರಗು ಧಾನ್ಯಗಳನ್ನು ಆಹಾರವಾಗಿ ಬಳಸುತ್ತಿದ್ದರು. ಆಗ ನೆಲ್ಲಕ್ಕಿ ಅನ್ನ ಉಣ್ಣುತ್ತಿದ್ದ ಸಿರಿವಂತರು, ದೊಡ್ಡ ಕಂಪನಿ ಉದ್ಯೋಗಿಗಳು ಇದೀಗ ಸಾವೆ, ಹಾರಕ, ಬರಗು, ಊದಲು, ಕೊರಲೆ ಮತ್ತು ನವಣೆ ಮೊದಲಾದ ಸಿರಿಧಾನ್ಯಗಳನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ತಿಳಿಸಿದರು.
    2023 ಸಿರಿಧಾನ್ಯಗಳ ವರ್ಷ ಎಂದು ಜಾಗತಿಕವಾಗಿ ಘೋಷಣೆಯಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಜನವರಿ ಅಂತ್ಯಕ್ಕೆ ಸಿರಿಧಾನ್ಯ ಮೇಳ ನಡೆಯುತ್ತಿದೆ. ಅದರ ಭಾಗವಾಗಿ ಪ್ರತಿ ಜಿಲ್ಲೆಗಳಲ್ಲೂ ಸಿರಿಧಾನ್ಯ ಬೆಳೆಗಳಿಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಿವೆ ಎಂದರು.
    ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಸಿರಿಧಾನ್ಯದ ಬಗ್ಗೆ ಜಾಗೃತಿ ಸಂಬಂಧ ದಾವಣಗೆರೆ ತಾಲ್ಲೂಕಿನಲ್ಲಿ ಜಾಥಾ, ಶಾಲಾ ಮಕ್ಕಳಿಗೆ ರಸಪ್ರಶ್ನೆ, ಕಿಸಾನ್‌ಗೋಷ್ಠಿ, ಕ್ಷೇತ್ರೋತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
    ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಲಲಿತಾಬಾಯಿ, ದಾವಣಗೆರೆ ನೇಗಿಲಸಿರಿ ರೈತ ಉತ್ಪಾದಕ ಕಂಪನಿ ಸಿಇಒ ರಾಘವೇಂದ್ರ, ಪ್ರಗತಿಪರ ರೈತ ಧ್ರುವಕುಮಾರ್ ಮಾತನಾಡಿದರು.
    ಸಿರಿಧಾನ್ಯ ರಸಪ್ರಶ್ನೆ ಪರೀಕ್ಷೆಯಲ್ಲಿ ಕ್ರಮವಾಗಿ ಹೆಚ್ಚು ಅಂಕ ಪಡೆದ ಎಸ್.ಬಿ.ಸಂಜನಾ, ಕೆ.ಎಸ್.ರಾಕೇಶ್ ಹಾಗೂ ಎಚ್.ಯು. ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.
    ನೇಗಿಲಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಟಿ.ಎಂ. ಸಿದ್ದಯ್ಯ, ಗ್ರಾಪಂ ಸದಸ್ಯರಾದ ಡಿ. ಬಸವರಾಜ, ಶಂಕರಪ್ಪ, ಮಂಜಣ್ಣ,, ಕೃಷಿ ಅಧಿಕಾರಿ ಆರ್. ಶ್ರೀನಿವಾಸ್, ಸಹಾಯಕ ಕೃಷಿ ಅಧಿಕಾರಿ ಸುರೇಶ್, ಆತ್ಮ ಸಿಬ್ಬಂದಿಗಳಾದ ವೆಂಕಟೇಶ್, ರೇಷ್ಮಾ, ಅನುವುಗಾರರಾದ ಸಿದ್ದಲಿಂಗಪ್ಪ, ಜಲಾನಯನ ಸಹಾಯಕ ಗಣೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts