More

    ಜಮೀನು ಸರ್ವೆಗೆ ವಿಶೇಷ ತಂಡ ರಚನೆ

    ಮುಂಡಗೋಡ: ಹಂಗಾಮಿ ಲಾಗಣಿ ಮತ್ತು ಸ್ಕೀಂ ಜಮೀನುಗಳ ಕೆಜಿಎಫ್ ತಯಾರಿಸುವ ಬಗ್ಗೆ ಈಗಾಗಲೇ ಮಂಜೂರಾದ ಜಮೀನು, ಹಂಗಾಮಿ ಲಾಗಣಿ ಜಮೀನು ಸರ್ವೆಗೆ ವಿಶೇಷ ತಂಡ ರಚನೆ ಕುರಿತು ಜಿಲ್ಲಾಧಿಕಾರಿ ಜತೆ ರ್ಚಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನಲ್ಲಿ ಸರ್ಕಾರಿ ಉದ್ದೇಶಿತ ಬಳಕೆಗೆ ಲಭ್ಯವಿರುವ ಜಮೀನುಗಳ ಮಾಹಿತಿ ಕುರಿತು ಇಲ್ಲಿನ ಮಿನಿ ವಿಧಾನಸೌಧದ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ಭೂ ಸ್ವಾಧೀನದಿಂದ ನಿರಾಶ್ರಿತರಾದವರ ಸ್ಥಿತಿ-ಗತಿ ಕುರಿತು ವಿಶೇಷ ವರದಿ ತಯಾರಿಸಿಕೊಡಲು ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ಸರ್ಕಾರಿ ಜಮೀನು ಲಭ್ಯದ ಕುರಿತು ಸ್ಥಾನಿಕ ಚೌಕಾಶಿ ನಡೆಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಸೂಚಿಸಿದರು.ಪ.ಪಂ.ನ ಆಶ್ರಯ ಮತ್ತು ಅಂಬೇಡ್ಕರ್ ಯೋಜನೆಯಡಿ ಬಿಲ್ ಆಗದ ಫಲಾನುಭವಿಗಳ ಯಾದಿ ಮತ್ತು ಸ್ಲಂ-ಬೋರ್ಡ್ ಯೋಜನೆಯಲ್ಲಿ 14 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಪ್ರಸ್ತಾವನೆಯನ್ನು ಮುಖ್ಯಾಧಿಕಾರಿ ಸಂಗನಬಸಯ್ಯ ಅವರು ಸಚಿವರಿಗೆ ಸಲ್ಲಿಸಿದರು. 24ಗಿ7 ಯೋಜನೆ ಕುರಿತು ಯಲ್ಲಾಪುರವನ್ನು ಕೇಂದ್ರ ಸ್ಥಾನವಾಗಿ ಇಟ್ಟುಕೊಂಡು ಯಲ್ಲಾಪುರ ಮತ್ತು ಮುಂಡಗೋಡ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು. ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಪ.ಪಂ. ಅಧ್ಯಕ್ಷೆ ರೇಣುಕಾ ಹಾವೇರಿ, ಉಮೇಶ ಬಿಜಾಪುರ, ರವಿ ಹಾವೇರಿ, ಫಕೀರಸ್ವಾಮಿ ಗುಲ್ಯಾನವರ, ತುಕಾರಾಮ ಇಂಗಳೆ, ಎಂ.ಪಿ. ಕುಸೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts