More

    ಜನ ಮೆಚ್ಚುವ ಕಾರ್ಯ ಮಾಡಿದ ಗವಿಸಿದ್ದಪ್ಪ

    ಬೆಳಗಾವಿ: ಹಿಂದುಳಿದ ಸಮಾಜದ ಧ್ವನಿಯಾಗಿದ್ದ ದಿ. ಗವಿಸಿದ್ದಪ್ಪ ಬೆಳವಡಿ ಅವರು ಹಿಂದುಳಿದ ಸಮಾಜದ ಶಕ್ತಿಯಾಗಿದ್ದರು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

    ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಹಾಗೂ ಗವಿಸಿದ್ದಪ್ಪಾ ಗವೆಪ್ಪ ಬೆಳವಡಿ ಮೆಮೊರೇಬಲ್ ೌಂಡೇಷನ್ ಸಂಯುಕ್ತಾಶ್ರಯದಲ್ಲಿ ದಿ. ಗವಿಸಿದ್ದಪ್ಪ ಬೆಳವಡಿ ಅವರ 110ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

    ಗವಿಸಿದ್ದಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿಯ ಪ್ರಮುಖ ಭಾಗಗಳಲ್ಲಿ ತಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಅಂದಿನ ಮೈಸೂರು ರಾಜ್ಯದ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಜನ ಮೆಚ್ಚುವ ಕಾರ್ಯ ಮಾಡಿದರು. ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಗಾಂಧೀಜಿಯವರ ಗ್ರಾಮೋದ್ಧಾರದ ಕನಸನ್ನು ಸಹಕಾರಗೊಳಿಸಿದರು. ಸ್ವಾತಂತ್ರ್ಯ ಹೋರಾಟ ಕುರಿತು ಸಮಾಜ ಸಂಘಟನೆಯಲ್ಲಿ ತೊಡಗಿ ಕುರುಬ ಸಮಾಜವನ್ನು ಸಂಘಟಿಸಿದರು. ಅವರ ಪ್ರಮುಖ ಉದ್ಯೋಗವಾದ ಕುರಿ ಸಾಕಾಣಿಕೆ ಹಾಗೂ ಕಂಬಳಿ ಕೇಂದ್ರಗಳನ್ನು ಸ್ಥಾಪಿಸಿ ಈ ಭಾಗದ ಜನರು ಅರ್ಥಿಕವಾಗಿ ಸಬಲರಾಗಲು ಕಾರಣರಾದರು. ಇಂದಿನ ಪೀಳಿಗೆಗೆ ಗವಿಸಿದ್ದಪ್ಪ ಬೆಳವಡಿ ಅವರ ಸ್ವಾತಂತ್ರ್ಯ ಹೋರಾಟದ ಕ್ಷಣಗಳು ಹಾಗೂ ಅವರ ಸಮಾಜ ಸಂಘಟನೆಯ ವಿಚಾರಧಾರೆಗಳು ಪ್ರಸಾರವಾಗುವಂತೆ ಸಾಹಿತ್ಯ ಲೋಕ ಪ್ರಯತ್ನಿಸಬೇಕು. ಅವರ ಹೆಸರಿನಲ್ಲಿ ಸಮುದಾಯ ಭವನ ಮತ್ತು ವಾಚನಾಲಯಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದರು.

    ಮಾಜಿ ಸಂಸದ ಅಮರಸಿಂಹ ಪಾಟೀಲ ಮಾತನಾಡಿ, ಗವಿಸಿದ್ದಪ್ಪ ಬೆಳವಡಿ ಅವರು ಬಡ ಹಾಗೂ ಹಿಂದುಳಿದ ವರ್ಗಗಳ ಜನರ ಏಳಿಗೆಗಾಗಿ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು ಎಂದರು.

    ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಅಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ಗವಿಸಿದ್ದಪ್ಪ ಅವರ ವ್ಯಕ್ತಿತ್ವ ಪ್ರಸಾರವಾಗುವಂತೆ ಸಮಾಜದ ಮುಖಂಡರು ಸೇರಿ ಪ್ರಯತ್ನಿಸಲಾಗುವುದು ಎಂದರು. ಉನ್ನತ ಶಿಕ್ಷಣ ಪರಿಷತ್‌ನ ವಿಶೇಷಾಧಿಕಾರಿ ಪ್ರೊ. ಎಂ. ಜಯಪ್ಪ ಮಾತನಾಡಿದರು.

    ಅಶೋಕ ಸದಲಗಿ, ದಿಗ್ವಿಜಯ್ ಸಿದ್ನಾಳ, ಸಂಜೀವ ಬಾನೆ, ಸುಧೀರ ಗಡ್ಡೆ, ಸೋಮಶೇಖರ ಹಿಟ್ಟಣಗಿ, ನಸಲಾಪುರ, ಶಂಕರ ಹೆಗಡಿ ವೇದಿಕೆಯಲ್ಲಿದ್ದರು. ಫೌಂಡೇಷನ್‌ನ ಬೆಳಗಾವಿ ಗೌರವಾಧ್ಯಕ್ಷೆ ಸರೋಜಿನಿ ಈಟಿ ಅಧ್ಯಕ್ಷತೆ ವಹಿಸಿದ್ದರು. ವಿಜೇತ ಬೆಳವಲ ಪ್ರಾರ್ಥಿಸಿದರು. ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಬಿ.ಜಿ. ಧಾರವಾಡ ಪರಿಚಯಿಸಿದರು. ಪ್ರೊ. ಡಿ.ಎಚ್. ನಾಯ್ಕ ನಿರೂಪಿದರು. ಬಿ.ಎಂ ಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts