More

    ಜನ ಚದುರಿಸಲು ಬೆತ್ತದ ರುಚಿ

    ಕಲಬುರಗಿ: ನಿರಂತರ ಸೂಚನೆ ಮಧ್ಯೆಯೂ ಬೈಕ್ಗಳಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ, ಬಸ್ಕಿ ಹೊಡೆಸುವುದು, ಕಸಗುಡಿಸುವ ಕೆಲಸ, ಮಹಾರಾಷ್ಟ್ರದಲ್ಲಿ ಹೋಮ್ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲು. ಕರೊನಾ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗುರುವಾರ ಕಂಡು ಬಂದ ದೃಶ್ಯಗಳು.
    ಕರೊನಾ ಶಂಕಿತರು ಕಲಬುರಗಿಗೆ ತಪ್ಪಿಸಿಕೊಂಡು ಬಂದಿದ್ದು ಎರಡನೇ ಪ್ರಕರಣ. ಈಗಾಗಲೇ ಶಂಕಿತ ವ್ಯಕ್ತಿಯೊಬ್ಬ ಆಳಂದ ತಾಲೂಕಿನ ಹಿತ್ತಲಶಿರೂರಗೆ ಬಂದ ವಿಷಯ ಅರಿಯುತ್ತಲೇ ಕೇಸ್ ದಾಖಲಿಸಲಾಗಿದೆ. ಇದೀಗ ಮಹಾರಾಷ್ಟ್ರ ನಾಂದೇಡ್ ಜಿಲ್ಲೆ ಮಾಲಕುಲಿ ಗ್ರಾಮದ ವ್ಯಕ್ತಿಯೊಬ್ಬ ಕಲಬುರಗಿಗೆ ಆಗಮಿಸಿ ಹೊರಗಡೆ ಸಂಚಾರ ನಡೆಸಿದ್ದ. 14 ದಿನ ಮನೆಯಲ್ಲೇ ಇರುವಂತೆ ಸೂಚಿಸಿ ಕೈ ಮೇಲೆ ಸೀಲ್ ಹಾಕಿದರೂ ಈತ ಮಹಾಗಾಂವ್ ಗ್ರಾಮದಲ್ಲಿ ಓಡಾಡಿಡಿದ್ದನ್ನು ಪತ್ತೆ ಹಚ್ಚಲಾಗಿದೆ. ಮಹಾಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಎಸ್ಐ ಆಸ್ಪತ್ರೆ ಐಸೋಲೇಶನ್ ವಾರ್ಡ ದಾಖಲಿಸಿದ್ದಾರೆ.
    ಇಡೀ ದೇಶ ಲಾಕ್ಡೌನ್ ಆದ ನಂತರ ಮನೆಯಿಂದ ಹೊರಬರಬೇಡಿ ಎಂಬ ನಿರಂತರ ಸೂಚನೆ ಮಧ್ಯೆಯೂ ಬೈಕ್ನಲ್ಲಿ ಓಡಾಡಿಕೊಂಡಿದ್ದ ಜನರನ್ನು ಹಿಡಿದ ಪೊಲೀಸರು ಅವರ ಕೈಯಿಂದ ಕಸಗೂಡಿಸಿದರು, ಬಸ್ಕಿ, ಊಟ್ಬೈಟ್ ಮಾಡಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದರು. ಕಳೆದ ಎರಡು ದಿನಗಳಿಂದು ಸುಮಾರು 300 ಜನರಿಂದ ಕಸ ಗುಡಿಸುವುದು ಮತ್ತು ಬಸ್ಕಿ ಹೊಡೆಸುವುದನ್ನು ಮಾಡಲಾಗಿದೆ.
    ಮೂರು ದಿನಗಳಿಂದ ಕಣ್ಣಿ ಮಾರ್ಕೆಟ್ನಲ್ಲಿ ತರಕಾರಿ ಖರೀದಿಯಲ್ಲಿ ಜನ ತೊಡಗಿದ್ದರು. ಆಗ ಅಂಥ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಗುರುವಾರ ಎಚ್ಚೆತ್ತುಕೊಂಡ ಪೊಲೀಸರು ನಸುಕಿನಲ್ಲೇ ಈ ಮಾರ್ಕೆಟ್ಗೆ ಆಗಮಿಸಿ ಮುಂಜಾಗ್ರತಾ ಕ್ರಮಗಳ ಮೂಲಕ ಜನ ಗುಂಪು ಸೇರದಂತೆ ನೋಡಿಕೊಂಡರು.
    ಗುರುವಾರ ಲೋಹಾರ ಗಲ್ಲಿಯಲ್ಲಿ ಪೊಲೀಸ್ ಆಯುಕ್ತಾಲಯದ ಚೌಕ್ ಪೊಲೀಸರು ಹಿಡಿದು ನಿಲ್ಲಿಸಿ ಬುದ್ದಿ ಹೇಳುತ್ತಿದ್ದರು. ಕೆಲವರಿಗೆ ಲಾಠಿ ರುಚಿ ತೋರಿದರು. ಇಷ್ಟಿದ್ದರೂ ಬೈಕ್ಗಳು ಹಾಗೆ ಬರುತ್ತಲೇ ಇರುವುದರಿಂದ ಬೇಸತ್ತು. ಬಂದವರನ್ನು ಹಿಡಿದು ನಿಲ್ಲಿಸಿ ಕಸಬರಿಗೆ ನೀಡಿ ರಸ್ತೆಯಲ್ಲಿ ಕಸ ಗುಡಿಸಲು ಹಚ್ಚಿದರು. ನಿರಾಕರಿಸಿದರೆ ಲಾಠಿ ಏಟು ಮೇಲೆ ನೀಡುತ್ತಿದ್ದರು. ಇದರಿಂದ ಯುವಕರು ತೆಪ್ಪಗೆ ಬಾಯಿ ಮುಚ್ಚಿಕೊಂಡು ಕಸ ಗೂಡಿಸಿದರು.
    ಇನ್ನು ಪೊಲೀಸ್ ಅಧಿಕಾರಿಯೊಬ್ಬರು ಯುವಕರನ್ನು ಒಂದೆಡೆ ಸೇರಿಸಿ ಕರೊನಾದಿಂದ ಬಚಾವಾಗಲು ನಾವು ಮನೆಯಿಂದ ಹೊರಗೆ ಬರುವುದಿಲ್ಲ. ಪ್ರಧಾನಿ ಮೋದಿಯವರ ಆದೇಶ ಪಾಲಿಸುತ್ತೇವೆ ಎಂದು ಪ್ರತಿಜ್ಞೆ ಬೋಧಿಸಿದ್ದು ಗಮನ ಸೆಳೆಯಿತು.
    ಔಷಧ ಸಿಂಪಡಣೆ
    ಕರೊನಾ ತಡೆಗಟಲು ನಗರದೆಲ್ಲೆಡೆ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಡಿಸ್ಇನ್ಫೆಕ್ಷನ್ ಮತ್ತು ಹೈಪೊಫ್ಲೋರೈಡ್ ಔಷಧ ಸಿಂಪಡಣೆ ಮಾಡುತ್ತಿದ್ದು, ಇದೀಗ ಅಗ್ನಿಶಾಮಕ ಇಲಾಖೆ ತಂಡ ಕೈಜೋಡಿಸಿದೆ. ಇಎಸ್ಐ ಆಸ್ಪತ್ರೆ ಎದುರಿನ ಜ್ಞಾನಗಂಗಾ ಕಾಲನಿಯಲ್ಲಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೂಚನೆಯಂತೆ ಫೈರ್ ತಂಡ ಫಾಗಿಂಗ್ ಕಾರ್ಯದಲ್ಲಿ ತೊಡಗಿದೆ.
    ಇದಕ್ಕೂ ಮುನ್ನ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಲಕ್ಕಪ್ಪ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಪರಶುರಾಮ ಅವರು ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಜತೆ ಫಾಗಿಂಗ್ ಬಗ್ಗೆ ಚಚರ್ಿಸಿದರು.
    ಸೋಂಕಿತನ ನೇರ ಸಂಪರ್ಕದಲ್ಲಿ ಬರುವವರಿಗೆ ಅಥವಾ ಕೋವಿಡ್-19 ಪಾಸಿಟಿವ್ ಇರುವ ವ್ಯಕ್ತಿ ಕೆಮ್ಮುವುದರಿಂದ ಬರುವ ಡ್ರಾಪ್ಲೆಟ್ ಮೂಲಕ ಇನ್ಬೊಬ್ಬರಿಗೆ ಸೋಂಕು ಹರಡುತ್ತದೆ. ಇಂತಹ ಸೋಂಕು ಸಾರ್ವಜನಿಕ ಸ್ಥಳದಲ್ಲಿ ಇನ್ನೊಬ್ಬರಿಗೆ ತಗುಲದಂತೆ ಮುನ್ನೆಚರಿಕೆ ಕ್ರಮವಾಗಿ ಪಾಲಿಕೆಯಿಂದ ಪ್ರಮುಖ ರಸ್ತೆ, ಬೀದಿ, ಪ್ರದೇಶ, ಆಸ್ಪತ್ರೆ, ಸಾರ್ವಜನಿಕ ಕಚೇರಿಗಳ ಸುತ್ತಮುತ್ತ ಔಷಧ ಸಿಂಪಡಣೆ ಎರಡ್ಮೂರು ಯುದ್ಧೋಪಾದಿಯಲ್ಲಿ ಮಾಡಲಾಗುತ್ತಿದೆ.ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣದ ಡಿಸ್ಇನ್ಫೆಕ್ಷನ್ ಔಷಧ ಮತ್ತು ನೀರು, ಬ್ಲೀಚಿಂಗ್ ಪೌಡರ್ ಮಿಶ್ರಣದ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಮಾಡಲಾಗುತ್ತಿದೆ.

    ಗಮನ ಸೆಳೆದ ಘಟನೆಗಳು
    *ನಗರದ ಕೆಲವು ಕಡೆ ಒಬ್ಬ ಪೊಲೀಸ್ ಅಧಿಕಾರಿ ಇದ್ದ ಜೀಪು ಮುಂದೆ ಮುಂದೆ ಹೋಗುತ್ತಿತ್ತು. ಅದರ ಹಿಂದೆ ಎರಡು ದ್ವಿಚಕ್ರ ವಾಹನಗಳ ಮೇಲೆ ನಾಲ್ವರು ಕುಳಿತು ಹೋಗುತ್ತಿದ್ದರು. ಅವರು ಅಲ್ಲಲ್ಲಿ ಕಾಣುವ ಪೊಲೀಸ್ ಸಿಬ್ಬಂದಿಗೆ ನೀರು ಕೊಡುತ್ತಿದ್ದರು.
    *ಕೆಲವರಿಗೆ ಪೊಲೀಸ್ರು ಒಂದೇ ರಿತಿಯ ಶಿಕ್ಷೆ ವಿಧಿಸಲಿಲ್ಲ. ಬದಲಿಗೆ ಲಾಠಿಯಿಂದ ಹೊಡೆಯುವುದು ಮತ್ತು ಬಸ್ಕಿ ಹೊಡೆಸುವುದು ಹೀಗೆ ಎರಡೆರಡು ಶಿಕ್ಷೆ ನೀಡಿದರು.
    *ಪೊಲೀಸ್ರು ಲಾಠಿ ಬೀಸುವಾಗ ಮೊದಲು ಮಾಹಿತಿ ಅರಿತುಕೊಳ್ಳುತ್ತಿರಲಿಲ್ಲ. ಮೊದಲು ಹೊಡೆದು ನಂತರವೇ ನೀವಾರು? ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸುವುದು ನಡೆದಿತ್ತು. ಪತ್ರಿಕೆಗಳನ್ನು ಹಂಚುವವರಿಗೂ ಬೆತ್ತದ ರುಚಿ ತಪ್ಪಲಿಲ್ಲ. ಎಲ್ಲವನ್ನು ವಿಚಾರಿಸಿ ಕ್ರಮ ಕೈಕೊಳ್ಳುವುದು ಸೂಕ್ತ ಎನ್ನುವ ಮನವಿ ಹಲವರಿಂದ ಬಂದಿತು.

    • ವಾಹನಗಳೂ ಇಲ್ಲ, ವ್ಯಾಪಾರವೂ ಇಲ್ಲದ್ದರಿಂದ ಅನೇಕ ಜನತೆ ಪರಿತಪಿಸಬೇಕಾಯಿತು. ಇಂದೂ ಸಹ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳು ಝಳ ಝಳ ಕಾಣುತ್ತಿದ್ದವು.
      *ಜನತೆಗೆ ಕರೊನಾ ಬಗ್ಗೆ ತಿಳಿಸಿ ಹೇಳುವ ಮೂಲಕ ಪ್ರಜ್ಞೆ ಮೂಡಿಸಬೇಕಾದ ಜನಪ್ರತಿನಿಧಿಗಳು ಅಂತರವನ್ನು ಕಾಯ್ದುಕೊಂಡರು. ಹೀಗಾಗಿ ಅನೇಕ ಜನಪ್ರತಿನಿಧಿಗಳ ಮನೆ ಮುಂದೆ ಖಾಲಿ ಖಾಲಿ ವಾತಾವರಣ ಕಂಡು ಬಂದಿತು.
      *ನಗರದಲ್ಲಿ ದ್ವಿಚಕ್ರ ಮೇಲೆ ಹೊರಟಿದ್ದ ಒಬ್ಬ ವೈದ್ಯರೂ ಸಹ ತೊಂದರೆ ಎದುರಿಸಬೇಕಾಯಿತು.
      *ಕರೊನಾ ವಿರುದ್ಧ ಅಧಿಕಾರಿಗಳ ಜತೆ ನಿರಂತರವಾಗಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಪ್ರಯತ್ನಿಸುತ್ತಿದ್ದರೆ,
      ಉತ್ತರ ಕ್ಷೇತ್ರದ ಶಾಸಕರು ಕಣ್ಣಿಗೆ ಬೀಳಲೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts