More

    ಜನ್ಮಾಷ್ಟಮಿ ಸಂಭ್ರಮ: ಕೃಷ್ಣ-ರುಕ್ಮಿಣಿ ವೇಷ ಧರಿಸಿ ಮಕ್ಕಳ ಸಡಗರ

    ಹೊಳೆಹೊನ್ನೂರು: ಮಕ್ಕಳಿಗೆ ವೇಷಭೋಷಣ ಹಾಕುವುದರಿಂದ ಜೀವನದಲ್ಲಿ ಶಿಸ್ತು, ಸಂಯಮ ಕಲಿಯುತ್ತಾರೆ ಎಂದು ಪ್ರಾಚಾರ್ಯ ಶ್ರೀಕಾಂತ ಎಂ ಹೆಗಡೆ ಹೇಳಿದರು. ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷ್ಣ-ರುಕ್ಮಿಣಿ ವೇಷಭೂಷಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಪೌರಾಣಿಕ ಪಾತ್ರಗಳನ್ನು ವೇಷದೊಂದಿಗೆ ಅನುಭವಿಸಿದಾಗ ಅತ್ಯುತ್ತಮ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಭಾರತದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಹೊಂದಲು ಸಹಾಯಕವಾಗುತ್ತದೆ ಎಂದರು. ಮುಖ್ಯಶಿಕ್ಷಕಿ ವಾಣಿ ಕೃಷ್ಣಪ್ರಸಾದ, ಸಂಯೋಜಕಿ ರೂಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts