More

    ಜನರ ರಕ್ಷಣೆಗೆ ಪ್ರಾಣ ಪಣಕ್ಕಿಡುವ ಪೊಲೀಸ್

    ಬಾಗಲಕೋಟೆ: ಕಾನೂನು ಸುವ್ಯವಸ್ಥೆ ಕಾಪಾಡುವದರ ಜೊತೆಗೆ ಜನರ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟು ಕಾರ್ಯನಿರ್ವಹಿಸುವಲ್ಲಿ ಪೊಲೀಸ್ ಸನ್ನದ್ದವಾಗಿದೆ ಎಂದು ನಿವೃತ್ತ ಡಿ.ಎಸ್.ಪಿ ರವೀಂದ್ರ ಶಿರೂರ ಹೇಳಿದರು.

    ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನೆಲೆಸಿದ ೬ ಕೋಟಿಗೂ ಅಧಿಕ ಜನರ ನೆಮ್ಮದಿ ಜೀವನಕ್ಕಾಗಿ ಪೊಲೀಸ್ ಇಲಾಖೆ ಹಗಲಿರುಳು ಎನ್ನದೇ ವಿಶ್ರಾಂತಿ ದಿನದ ೨೪ ಗಂಟೆ ಕಾಲ ಕಾರ್ಯನಿರ್ವಹಿಸುತ್ತಿದೆ. ಕಳ್ಳ ಕಾಕರನ್ನು, ದುಷ್ಟರನ್ನು, ಕೊಲೆಗಡುಕರನ್ನು ಮಟ್ಟ ಹಾಕಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮಹತ್ವರ ಕಾರ್ಯ ಮಾಡುತ್ತಿದೆ ಎಂದರು.

    ಪೊಲೀಸ್ ಇಲಾಖೆಯಲ್ಲಿ ಮಾಹಿತಿ ನೀಡುವ ಒಬ್ಬ ಬಾತ್ಮಿದಾರರಿಂದ ಹಿಡಿದು ಅಪಘಾತ ಅವಘಡ ಪ್ರವಾಹದಂತಹ ಸಮಯದಲ್ಲಿ ಮಾಹಿತಿ ನೀಡುವ ಪ್ರಜ್ಞಾವಂತ ಜನರೊಂದಿಗೆ ಈ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಅನೇಕ ಮಹತ್ತರ ಕಾರ್ಯ ಮಾಡಿ ಹೆಸರು ಮಾಡಿದೆ. ತಂತ್ರಜ್ಞಾನ ಅಳವಡಿಕೆ ಸೂಕ್ಷö್ಮ ಪ್ರದೇಶದಲ್ಲಿ ಡಿ.ಎನ್.ಎ ಕೇಂದ್ರ ಸ್ಥಾಪನೆ, ತನಿಖಾದಿಕಾರಿಗಳಿಗೆ ಸಹಾಯವಾಗುವಂತೆ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಅನೇಕ ಕಾರ್ಯಗಳಿಗೆ ಅನುಕೂಲವಾಗುವಂತಹ ತಂತ್ರಜ್ಞಾನದ ಕಾರ್ಯವಿಧಾನವನ್ನು ಪ್ರಾರಂಭಿಸಿದೆ ಎಂದರು.

    ತಂತ್ರಜ್ಞಾನ ಹೆಚ್ಚಿದಂತೆಲ್ಲ ಅಪರಾಧಿಗಳ ಮನೋವಿಕಾರ ಕೂಡಾ ಹೆಚ್ಚಾಗುತ್ತಿವೆ. ಇದರಿಂದ ತಿನಿಖಾಧಿಕಾರಿಗಳಿಗೆ ತಲೆನೋವಾಗಿದೆ. ಇದಕ್ಕೆ ಉದಾಹರಣೆ ಎಂಬAತೆ ಇತ್ತೀಚೆಗೆ ನಡೆದ ಬಿಟ್ ಕ್ವಾನ್ ಪ್ರಕರಣ. ಇಂತಹ ಪ್ರಕರಣಗಳಲ್ಲಿ ತಾತ್ವಿಕ ಅಂತ್ಯ ಹಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಿಬ್ಬಂದಿಗಳಿಗೆ ಅತ್ಯುನ್ನದ ಸುಧಾರಿಸಿದ ತರಬೇತಿ ಕೂಡಾ ಅಗಶ್ಯವಾಗಿದೆ ಎಂದರು.

    ರಾಜ್ಯದ ಜನಸಂಖ್ಯೆ ಬೆಳೆದಂತೆ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕಾಗಿ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದು ಅನಿವಾರ್ಯವಾಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೈವೆ ಪೆಟ್ರೋಲಿಯಂ, ಚೆನ್ನಮ್ಮ ಪಡೆ, ಚಿತಾ, ೧೧೨ ಮುಂತಾದ ನವೀನ ಮಾದರಿಯ ಸೇವೆ ಜಾರಿಗೆ ತಂದಿದ್ದು, ಅದಕ್ಕೆ ತಕ್ಕಂತೆ ಸಿಬ್ಬಂದಿ ಇಲ್ಲ. ಈ ಕುರಿತು ಸಂಬAಧ ಪಟ್ಟ ಮೇಲಾಧಿಕಾರಿಗಳ ಸಭೆಯಲ್ಲಿ ಗಮನಕ್ಕೆ ತರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ವಿನಂತಿಸಿಕೊAಡರು.

    ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ನಂತರ ಕವಾಯತು ಪರಿವೀಕ್ಷಣೆ ನಡೆಯಿತು. ಕಾರ್ಯಕ್ರಮದಲ್ಲಿ ಕಮಾಂಡಿAಗ್ ಅಧಿಕಾರಿ ಸಂಜಯ ಕಡೆ ಉಪಸ್ಥಿತರಿದ್ದರು. ಕೊನೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts