More

    ಜನರ ಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದನೆ

    ಕೋಲಾರ: ಕರೊನಾ ಕಷ್ಟ ಕಾಲದಲ್ಲೂ ಬೆಲೆ ಏರಿಕೆ ಮಾಡದೆ ಎಲ್ಲ ವರ್ಗಗಳ ಹಿತ ಬಯಸುವ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಯುಪಿಎ ಆಡಳಿತವಿದ್ದಾಗ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಯಾವುದೇ ಹಗರಣ ನಡೆದಿಲ್ಲ. ರೈತ, ಕಾರ್ಮಿಕ, ಮಹಿಳೆ, ದುರ್ಬಲರಿಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಎರಡು ವರ್ಷದಿಂದ ಆರ್ಥಿಕ ನಷ್ಟ ಉಂಟಾಗಿದ್ದರೂ 39.45 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದೇವೆ. ಜಗತ್ತೆ ಕರೊನಾ ಹೊಡೆತಕ್ಕೆ ನಲುಗಿರುವಾಗ ರಾಷ್ಟ್ರ್ರದಲ್ಲಿ ಉಚಿತ ಆಹಾರ ಸಾಮಗ್ರಿ ವಿತರಿಸಿ ಜನರ ಕಷ್ಟದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದರು.

    ರೈಲು ಬಿಡಲ್ಲ, ವಾಡಿ ತೋರಿಸ್ತೇನೆ: ಈ ಹಿಂದೆ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದವರು ಹಳಿಗಳಿಲ್ಲದೆ ರೈಲು ಬಿಡುತ್ತಿದ್ದರು. ಆದರೆ ನಾನು ಹೇಳುವುದಕ್ಕಿಂತ ವಾಡಿ ತೋರಿಸುತ್ತೇನೆ. ಕೋಲಾರ ಮತ್ತು ವೈಟ್‌ಫೀಲ್ಡ್(52.9 ಕಿ.ಮಿ), ಮದನಪಲ್ಲಿ ಮತ್ತು ಶ್ರೀನಿವಾಸಪುರ(76 ಕಿ.ಮಿ). ಕೋಲಾರ ಮತ್ತು ಮುಳಬಾಗಿಲು ಮತ್ತು ವಾದಟ್ಟ(45ಕಿ.ಮಿ) ವಾರ್ಗಗಳ ನಿರ್ವಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ವಾಡುವುದರ ಜತೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಬಸವರಾಜ ಬೊವ್ಮಾಯಿ ಅವರ ಬಳಿ ಚರ್ಚಿಸಲಾಗಿದೆ. ವಾಲೂರು ರೈಲ್ವೆ ಮೇಲ್ಸೇತುವೆ ವಿಸ್ತರಣೆ, ಬಂಗಾರಪೇಟೆ ಮತ್ತು ಬೂದಿಕೋಟೆ ವಾರ್ಗದ ರೈಲ್ವೆ ಮೇಲ್ಸೇತುವೆ ನಿರ್ವಾಣಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದೆ. ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಶ್ರೀನಿವಾಸಪುರ ಬಳಿ ಈಗಾಗಲೇ ಜಮೀನು ಗುರುತಿಸಿ ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದು, ಅವರು ಸಹ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

    ಹೆದ್ದಾರಿ ವಿಸ್ತರಣೆ: ರಾಷ್ಟ್ರೀಯ ಹೆದ್ದಾರಿ 276ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ 4 ಪಥದಿಂದ 6 ಪಥ ರಸ್ತೆಯನ್ನಾಗಿಸಲು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಸಲ್ಲಿಸಿ 394 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಪ್ರಸ್ತುತ ಟೆಂಡರ್ ಹಂತದಲ್ಲಿದೆ. ಮುಳಬಾಗಿಲು ಮತ್ತು ವಿ.ಕೋಟೆ, ವಿ.ಕೋಟೆ ಮತ್ತು ವಾಲೂರು, ವಾಲೂರು ಮತ್ತು ಹೊಸೂರು ಸೇರಿ ಹಲವು ವಾರ್ಗಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಹೈವೆ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡರೆ ಜಿಲ್ಲೆಯ ಅಭಿವೃದ್ಧಿ ದಿಕ್ಕು ಬದಲಾಗಲಿದೆ ಎಂದು ಸಂಸದರು ತಿಳಿಸಿದರು.

    ಟೆಕ್ಸ್‌ಟೈಲ್ ಪಾರ್ಕ್ ತರುವೆ: ಜಿಲ್ಲೆಯ ವಾಲೂರು, ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆಟೋಮೊಬೈಲ್ ಸೇರಿ ವಿವಿಧ ಕಂಪೆನಿಗಳ ಉತ್ಪನ್ನಗಳನ್ನು ತಯಾರಿಸಿ ಇಲ್ಲಿದ ದೇಶ ವಿದೇಶಗಳಿಗೆ ರಫ್ತು ವಾಡುತ್ತಿವೆ. ರಸ್ತೆ, ನೀರು ಮತ್ತಿತರ ಮೂಲ ಸೌಕರ್ಯವಿರುವುದರಿಂದ ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ವಾಡಲು ರಾಜ್ಯ ಸರ್ಕಾರದ ಜತೆ ಚರ್ಚಿಸಲಾಗಿದೆ ಎಂದು ಮುನಿಸ್ವಾಮಿ ಹೇಳಿದರು.

    ರಾಜ್ಯ ಬಜೆಟ್‌ನಲ್ಲಿ ಅನುದಾನಕ್ಕೆ ಮನವಿ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಕೆಜಿಎಫ್‌ನಲ್ಲಿ ಬಿಜಿಎಂಎಲ್ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಅಂಬೇಡ್ಕರ್ ಅಧ್ಯಯನ ಮತ್ತು ವಸ್ತು ಸಂಗ್ರಹಾಲಯ, ಕಾಮಸಮುದ್ರ ಮತ್ತು ಮೂತನೂರು ಅರಣ್ಯ ಪ್ರದೇಶದಲ್ಲಿ ಆನೆ ಹಾವಳಿ ತಡೆಗೆ ರೈಲು ಹಳಿಗಳ ಬ್ಯಾರಿಕೇಡ್ ನಿರ್ವಾಣ, ಕೃಷಿ ಉತ್ಪನ್ನಗಳ ಸಂಗ್ರಹಕ್ಕಾಗಿ ಕೋಲ್ಡ್ ಸ್ಟೋರೇಜ್, ನಗರ ಸುತ್ತ ಹೊರವರ್ತುಲ ರಸ್ತೆ ನಿರ್ವಾಣ, ಟೊವ್ಯಾಟೊ, ವಾವು ಹೆಚ್ಚಿಗೆ ಬೆಳೆಯುವುದರಿಂದ ಆಹಾರ ಸಂಸ್ಕರಣಾ ಟಕ ಮಂಜೂರಿಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಒದಗಿಸಲು ಒತ್ತಾಯಿಸಲಾಗುವುದು ಎಂದು ಮುನಿಸ್ವಾಮಿ ವಿವರಿಸಿದರು.  ಎಂ.ನಾರಾಯಣಸ್ವಾಮಿ, ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ನಾಗರಾಜ, ಗುರುನಾಥರೆಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts