More

    ಜನಪದ ಕಲಾವಿದರಿಗೆ ಆರ್ಥಿಕ ಸಹಾಯ

    ಗದಗ: ಹಾಡುಗಳ ಮೂಲಕ ಕೋವಿಡ್-19 ಕುರಿತು ಜಾಗೃತಿ ಮೂಡಿಸಿದ ಜನಪದ ಕಲಾವಿದರಿಗೆ ತಾಲೂಕಿನ ನಾಗಾವಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಪಾಟೀಲ ಅವರು ತಮ್ಮ ಮಗ ದಿ. ಸೋಮೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ತಲಾ ಸಾವಿರ ರೂ. ನೀಡಿ ಮಾದರಿಯಾಗಿದ್ದಾರೆ.

    ನಗರದ ಮಲ್ಲಸಮುದ್ರಗಿರಿಯ ಓಂಕಾರೇಶ್ವರ ಹಿರೇಮಠದಲ್ಲಿ ಸೋಮೇಶ್ವರಯ್ಯ ಜನಕಲ್ಯಾಣ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಹಣ ವಿತರಿಸಿ ಮಾತನಾಡಿದ ಮಠದ ಪೀಠಾಧಿಪತಿ ಫಕೀರೇಶ್ವರ ಸ್ವಾಮೀಜಿ, ಮಾನವನ ಜೀವನದಲ್ಲಿ ಮೂರು ಅಕ್ಷರಗಳು ಹಾಸು ಹೊಕ್ಕಾಗಿವೆ. ಜನನ ಎಂಬ ಮೂರು ಅಕ್ಷರಗಳಿಂದ ಆರಂಭವಾಗಿ ಮರಣ ಎಂಬ ಮೂರು ಅಕ್ಷರದವರೆಗೆ ಜೀವನ ಪಯಣ ಸಾಗುತ್ತದೆ. ಅದನ್ನು ಗೆಲ್ಲುವುದಕ್ಕಾಗಿ ಉತ್ತಮ ಕಾರ್ಯ ಮಾಡಬೇಕು. ಶಿವಲಿಂಗಮ್ಮ ಪಾಟೀಲ ಅವರು ಕರೊನಾ ಜಾಗೃತಿ ಮೂಡಿಸಿದ ಜನಪದ ಕಲಾವಿದರಿಗೆ ತಮ್ಮ ಪುತ್ರನ ನೆನಪಿನಲ್ಲಿ ಆರ್ಥಿಕ ಸಹಾಯ ನೀಡಿರುವುದು ಶ್ಲಾಘನೀಯ ಎಂದರು.

    ಕಲಾವಿದರಾದ ವೀರಣ್ಣ ಅಂಗಡಿ, ಮುತ್ತು ನಾಯ್ಕರ, ಮುತ್ತಣ್ಣ ಅಂಗಡಿ, ಲಕ್ಷ್ಮಣ ಕೊಡ್ಲಿವಾಡ ಹಾಗೂ ಸೋಮೇಶ್ವರಯ್ಯ ಅವರ ಕುರಿತು ವಿಡಿಯೋ ಸಂಯೋಜಿಸಿದ ಸದಾಶಿವ ಆನಿ ಅವರಿಗೆ ತಲಾ ಒಂದು ಸಾವಿರ ರೂ. ನೀಡಿ ಪುರಸ್ಕರಿಸಲಾಯಿತು.

    ಶಿವಲಿಂಗಶಾಸ್ತ್ರಿ ಸಿದ್ದಾಪೂರ, ನಾಗಾವಿ ಗ್ರಾಪಂ ಅಧ್ಯಕ್ಷ ಜಗದೀಶ ಚಿಂಚಲಿ ಶಾರಮ್ಮ ಪಾಟೀಲ, ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಪಾಟೀಲ, ವಿಶಾಲಾಕ್ಷಮ್ಮ ಪಾಟೀಲ, ಮಹೇಶ ದಾಸರ, ಶಾಂತೇಶ ಮುತ್ತಿನಪೆಂಡಿಮಠ, ಪರಶುರಾಮ ಬಂಕದಮನಿ, ವೆಂಕಟೇಶ ಬೇಲೂರ, ಯಲ್ಲಪ್ಪ ಕೆಂಚಣ್ಣವರ, ಬಸವರಾಜ ಛಬ್ಬಿ, ಮಾರ್ತಾಂಡಪ್ಪ ಹಾದಿಮನಿ, ದೇವೇಂದ್ರನಾಥ ಕರಿಗೌಡ್ರ, ಪಂಚಾಕ್ಷರಿ ಹಿರೇಮಠ ಇತರರು ಉಪಸ್ಥಿತರಿದ್ದರು.

    ಗುಡಿಸಲುವಾಸಿಗಳಿಗೆ ದಿನಸಿ ವಿತರಣೆ

    ಲಕ್ಷ್ಮೇಶ್ವರ: ಗೋವಾದಲ್ಲಿರುವ ತಾಲೂಕಿನ ಮಾಕನೂರ ಗ್ರಾಮದ ಪರಶುರಾಮ ವಿ. ಕಲಿವಾಳ ಕೊಡಮಾಡಿದ 25 ಸಾವಿರ ರೂ. ಮೌಲ್ಯದ ದಿನಸಿ ಕಿಟ್​ಗಳನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪಟ್ಟಣದ ದೊಡ್ಡೂರ, ಮಂಜಲಾಪುರ ರಸ್ತೆ ಬದಿಯ ಗುಡಿಸಲುವಾಸಿಗಳು, ಕಮ್ಮಾರರು, ವಲಸೆ ಕಾರ್ವಿುಕರಿಗೆ ಗುರುವಾರ ವಿತರಿಸಿದರು.

    ಪ್ರತಿಯೊಬ್ಬರೂ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು ಬಡವರು, ನಿರ್ಗತಿಕರಿಗೆ ದಾನ ಮಾಡಬೇಕು. ಕರೊನಾ ಸಂಕಷ್ಟ ಕಾಲದಲ್ಲಿ, ಪ್ರವಾಹ, ಬರಗಾಲ ಸಂದರ್ಭಗಳಲ್ಲಿ ಸರ್ಕಾರದೊಂದಿಗೆ ಕೈಲಾದಷ್ಟು ಅಳಿಲು ಸೇವೆ ಮಾಡಬೇಕು. ಗೋವಾದಲ್ಲಿರುವ ಪಿ.ಎಂ. ಕಲಿವಾಳ ಅವರು ಇಲ್ಲಿನ ಗುಡಿಸಲು ವಾಸಿಗಳ ಕಷ್ಟಕ್ಕೆ ಸ್ಪಂದಿಸಿರುವುದು ಪ್ರಶಂಸನೀಯ ಎಂದರು. ಪಿಎಸ್​ಐ ಶಿವಯೋಗಿ ಲೋಹಾರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಪಶುಪತಿಹಾಳದ ದೇವರಾಜ ಜಾಡರ, ಬಸವರಾಜ ಮೆಣಸಿನಕಾಯಿ, ಮಂಜುನಾಥ ಮಾಗಡಿ, ಇತರರಿದ್ದರು.

    ಆರೋಗ್ಯ ರಕ್ಷಣೆ ಎಲ್ಲರ ಹೊಣೆ

    ನರೇಗಲ್ಲ: ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭಾನುವಾರ ಹೊಳೆಆಲೂರ ಎಪಿಎಂಸಿ ವತಿಯಿಂದ ಹಮಾಲರಿಗೆ ಕಿಟ್ ವಿತರಿಸಲಾಯಿತು.

    ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ ಮಾತನಾಡಿ, ಲಾಕ್​ಡೌನ್​ನಿಂದಾಗಿ ಹಮಾಲಿ ಕಾರ್ವಿುಕರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಬಹುತೇಕ ಹಮಾಲಿಗಳು ಬಡವರಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಹ ಪರಿಸ್ಥಿತಿ ನಿರ್ವಣವಾಗಿದೆ ಎಂದರು. ಎಪಿಎಂಸಿ ಸದಸ್ಯ ಬಸನಗೌಡ ಪೊಲೀಸ್​ಪಾಟೀಲ ಮಾತನಾಡಿ, ಮಹಾಮಾರಿ ಕೋವಿಡ್-19 ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದ್ದು ಲೆಕ್ಕವಿಲ್ಲದಷ್ಟು ಸಾವು ನೋವುಗಳು ಆಗುತ್ತಿವೆ. ಆರೋಗ್ಯ ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದರು.

    ಎಪಿಎಂಸಿ ಸದಸ್ಯ ಚಂದ್ರಶೇಖರ ಗ್ಯಾನಪ್ಪನವರ, ಹಮಾಲರ ಸಂಘದ ಅಧ್ಯಕ್ಷ ಶಿವಪ್ಪ ಗೋಡಿ, ಎಂ.ಎ. ಅಬ್ಬಿಗೇರಿ, ಮಾಬುಸಾಬ್ ಪಲ್ಲೇದ, ಯಲ್ಲಪ್ಪ ಕಲಾಲ, ಷಣ್ಮುಖಪ್ಪ ಶಿದ್ನೇಕೊಪ್ಪ, ವೀರಯ್ಯ ಸಂಶಿಮಠ, ಕೆ.ಪಿ. ಗುರುವಡೇಯರ, ದುರಗಪ್ಪ ಚಳ್ಳಮರದ ಜಕ್ಕಲಿ, ಅಬ್ಬಿಗೇರಿ, ಸವಡಿ ಗ್ರಾಮದ 96 ಹಮಾಲರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts