More

    ಜನನ-ಮರಣ ಪ್ರಮಾಣಪತ್ರ ಅಧಿಕಾರ ಎಸಿಗೆ ಬೇಡ

    ಭಾಲ್ಕಿ: ಜನನ ಮತ್ತು ಮರಣ ನೋಂದಣಿ ಅಧಿನಿಯಮದಡಿ ಪ್ರಮಾಣಪತ್ರ ನೀಡುವ ಅಧಿಕಾರ ವಿಭಾಗೀಯ ದಂಡಾಧಿಕಾರಿಗಳಿಗೆ ನೀಡಿರುವ ಸಕರ್ಾರದ ಸುತ್ತೋಲೆಯನ್ನು ವಿರೋಧಿಸಿದ ತಾಲೂಕು ನ್ಯಾಯಾವಾದಿಗಳ ಸಂಘ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೀತರ್ಿ ಚಾಲಕ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಜನನ ಮತ್ತು ಮರಣ ಪ್ರಮಾಣಪತ್ರ ನೀಡುವ ಅಧಿಕಾರ ಪ್ರಥಮ ದಜರ್ೆ ನ್ಯಾಯಾಲಯಗಳಿಗೆ ಪ್ರದತ್ತವಾಗಿತ್ತು. ಆದರೆ ತಿದ್ದುಪಡಿ ಅನುಸಾರ ಎಸಿಗಳಿಗೆ ವಗರ್ಾಯಿಸಿರುವುದು ಕಾನೂನು ಮತ್ತು ಜನರ ಹಿತದೃಷ್ಟಿಯಿಂದ ಸಮಂಜಸವಲ್ಲ ಎಂದ ಪ್ರತಿಭಟನಾಕಾರರು, ನ್ಯಾಯಾಲಯಗಳು ಪ್ರಮಾಣಪತ್ರ ನೀಡುವ ಮುನ್ನ ಅಜರ್ಿದಾರನ ಪೂವರ್ಾಪರ ವಿಚಾರಿಸಿ, ಕಾನೂನು ರೀತಿಯಲ್ಲಿ ಪರಿಶೀಲಿಸಿ ಯೋಗ್ಯವೆನಿಸಿದಲ್ಲಿ ಮಾತ್ರ ಪ್ರಮಾಣಪತ್ರ ನೀಡುವಂತೆ ಸಂಬಂಧಿತರಿಗೆ ಆದೇಶ ನೀಡುತ್ತವೆ ಎಂದರು.

    ಆದರೆ ಹೊಸ ನಿಯಮದಿಂದ ಇಲಾಖೆಯಲ್ಲಿ ಅಕ್ರಮ ಮಾರ್ಗದಿಂದ ಪ್ರಮಾಣಪತ್ರ ಪಡೆಯುವ ಸಾಧ್ಯತೆ ಇದ್ದು, ಕಾನೂನಾತ್ಮಕ ಸಮಸ್ಯೆಗಳು ಉದ್ಭವಿಸುತ್ತವೆ. ಅಲ್ಲದೆ ಈಗಾಗಲೇ ಉಪ ವಿಭಾಗಾಧಿಕಾರಿಗಳಿಗೆ ವಿಭಾಗದ ಸಂಪೂರ್ಣ ಜವಾಬ್ದಾರಿ ಮತ್ತು ಕಂದಾಯ ವ್ಯಾಜ್ಯಗಳ ಅಧಿಕ ಹೊರೆ ಇದೆ. ಹೀಗಾಗಿ ತಿದ್ದುಪಡಿ ನಿಯಮ ಹಿಂಪಡೆದು ಈ ಮೊದಲಿನಂತೆ ನ್ಯಾಯಾಲಯಗಳಿಗೆ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

    ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ಪಾಟೀಲ್, ಉಪಾಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಧಾನ ಕಾರ್ಯದಶರ್ಿ ಮಹೇಶ ರಾಚೋಟೆ, ಶಿವಕುಮಾರ ಕೇರುರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts