More

    ಜನಜಾಗೃತಿಯಿಂದ ಬದಲಾವಣೆ

    ಅಥಣಿ: ಆಧ್ಯಾತ್ಮಿಕ ಚಿಂತನೆಗಳ ಮೂಲಕ ಆರೂಢ ಸಂಪ್ರದಾಯವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸುವ ಜತೆಗೆ ಭಕ್ತರ ಹದಯದಲ್ಲಿ ಚಿರಸ್ಥಾಯಿಯಾದವರು ಲಿಂಗೈಕ್ಯ ಅಭಿನವ ಶಿವಪುತ್ರ ಸ್ವಾಮೀಜಿಗಳು ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

    ಸಮೀಪದ ರಡ್ಡೇರಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ವಿಜಯಪುರದ ಷಣ್ಮುಖಾರೂಢಮಠ ಹಾಗೂ ಹುಬ್ಬಳ್ಳಿ ಶಾಂತಾಶ್ರಮದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರ ಧಾರ್ಮಿಕ ಜಾಗತಿ, ಯೋಗ ಮತ್ತು ತತ್ತ್ವಾಮತ ಪ್ರವಚನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾನಸಿಕ ನೆಮ್ಮದಿ ಹೊಂದಲು ಮಹಾತ್ಮರ ಚಿಂತನೆ ಅವಶ್ಯ. ಧಾರ್ಮಿಕ ಜನಜಾಗತಿಯಿಂದ ಜನರಲ್ಲಿ ಬದಲಾವಣೆ ತರಬಹುದು, ಆರೋಗ್ಯವಂತ ಸಮಾಜ ನಿರ್ಮಿಸಬಹುದು ಎಂದರು. ಸಾನ್ನಿಧ್ಯ ವಹಿಸಿದ್ದ ವಿಜಯಪುರದ ಷಣ್ಮುಖಾರೂಢಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಇತಿಹಾಸ ಕಾಲದಿಂದಲೂ ಭಾರತೀಯ ಸಂಸ್ಕೃತಿ, ಸಂಸ್ಕಾರಕ್ಕೆ ವಿಶೇಷ ಮನ್ನಣೆ ಇದೆ. ಧಾರ್ಮಿಕ ಚಿಂತನೆಗಳು ಬದುಕಿನ ಮೌಲ್ಯಗಳನ್ನು ತಿಳಿಪಡಿಸುವ ಜತೆಗೆ ಸನ್ಮಾರ್ಗದತ್ತ ಮುನ್ನಡೆಸುತ್ತವೆ ಎಂದು ಹೇಳಿದರು.

    ಬಸಪ್ಪ ನಾಗಪ್ಪ ಖೋತ, ಅದೃಶ್ಯಪ್ಪ ಗಲಗಲಿ, ಸಹದೇವ ಅರಗೊಡ್ಡಿ, ನಿಂಗಪ್ಪ ಖೋತ, ಪಾಂಡು ಭೋಸಲೆ, ದುರಂಧರ ಭೋಸಲೆ, ಬಸಪ್ಪ ಚನ್ನಾಪುರ, ಬಾಬಣ್ಣ ಸಾರವಾಡ, ಮಂಜುನಾಥ ನಾಯಿಕ, ಸಚಿನ ನಾಯಿಕ, ಜಿ.ಎಂ. ತೆವರಮನಿ, ತಮ್ಮಣ್ಣ ತೇಲಿ, ರಾಮಣ್ಣ ಚೌಗಲಾ, ನಿಜಗುಣಿ ಸಾವಂತ್ರಿ, ಗಿರೀಶ ನಾಯಿಕ, ಚಿದಾನಂದ ದೇವರೆಡ್ಡಿ, ಅಶೋಕ ನಾಯಿಕ, ಮುರಿಗೆಪ್ಪ ಬಾವಿ, ಶಿವಗೊಂಡ ಸಾರವಾಡ, ಸಂಜು ನಾಯಿಕ, ಮಹಾದೇವ ನಾಯಿಕ, ಭೀಮಣ್ಣ ಶಿರಗೂರ, ಸಂಗಮೇಶ ಖೋತ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts