More

    ಜ್ಞಾನವೇ ಜೀವನಕ್ಕೆ ಮಾರ್ಗ

    ಅಳವಂಡಿ: ಜ್ಞಾನಕ್ಕೆ ಮತ್ತೊಂದು ಹೆಸರೇ ನಿಜಗುಣ ಶಿವಯೋಗಿಗಳು. ಅವರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಇದನ್ನೂ ಓದಿ: ಆತ್ಮಪ್ರಭೆಗೆ ಜೀವನಾನುಭವ ಸೇರಿದಾಗ ಜ್ಞಾನದ ಪ್ರತಿಫಲನ

    ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನದಿಂದ ಅಜ್ಞಾನವನ್ನು ಹೊಡೆದೋಡಿಸಿ ಸುಜ್ಞಾನದ ದಾರಿಗೆ ಬರಲು ನಿಜಗುಣ ಶಿವಯೋಗಿಗಳ ತತ್ವಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ಪ್ರತಿಯೊಬ್ಬರು ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಬೇಕು. ಜ್ಞಾನವೇ ಜೀವನದ ಹಾದಿ ತೋರಿಸುತ್ತದೆ ಮತ್ತು ಗುರಿ ಮುಟ್ಟಿಸುತ್ತದೆ ಎಂದರು.

    ಶಿಕ್ಷಕ ರಮೇಶ ಪೂಜಾರ ಮಾತನಾಡಿ, ಗುರುಗಳ ವಚನ ಹಾಗೂ ನುಡಿ ಮುತ್ತುಗಳಿಂದ ಜೀವನದ ಮಾರ್ಗ ಸಿಗುತ್ತದೆ. ಸಂಸಾರವೆಂಬ ಭಾವ ಸಾಗರ ದಾಟಲು ಭಾವ ವೈದ್ಯನಾಗಿರುವ ಸದ್ಗುರುವಿನ ಆಶೀರ್ವಾದಬೇಕು ಎಂದರು.

    ಕಲಾವಿದೆ ಅಂಬಿಕಾ ಪೂಜಾರ ಹಾಗೂ ತಬಲಾಜಿ ಸೋಮನಾಥ ಗವಾಯಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭೀಮರಡ್ಡಿ ಗದ್ದಿಕೇರಿ, ಜಗನ್ನಾಥರಡ್ಡಿ, ನಾಗಪ್ಪ ಸವಡಿ, ಅಶೋಕ ಬಂಡಿ, ರಮೇಶ ಭಾವಿಹಳ್ಳಿ, ಚಿಕ್ಕವೀರಜ್ಜ ಕವಡಿಮಟ್ಟಿ, ಗಿರೀಶ ಕಣವಿ,

    ಗವಿಸಿದ್ದಪ್ಪ ಗದ್ದಿಕೇರಿ, ಬಸಯ್ಯ, ಬಸವರಾಜ ಟುಬಾಕಿ, ಬಸವರಾಜ ಶರಭಯ್ಯನಮಠ, ಗವಿ ಮಾಳೆಕೊಪ್ಪ, ಬಸಯ್ಯ, ಶಂಭುಲಿಂಗ, ಶಾಂತಯ್ಯ, ಈಶಪ್ಪ ಜೋಳದ, ಅನ್ವರ್ ಗಡಾದ, ಮಂಜುನಾಥ ಹಿರೇಮಠ, ನೀಲಪ್ಪ ಹಕ್ಕಂಡಿ, ರವಿ ಇನಾಮದಾರ, ಮಂಜುನಾಥಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts