More

    ಜಕ್ಕಲಮಡಗು ಡ್ಯಾಂಗೆ ಒಂದೇ ದಿನ ನಾಲ್ಕು ಅಡಿ ನೀರು ಸಂಗ್ರಹ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಜಕ್ಕಲಮಡಗು ಜಲಾಶಯಕ್ಕೆ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ 4ಅಡಿಗೂ ಹೆಚ್ಚು ನೀರು ಹರಿದು ಬಂದಿದೆ.

    ಜಿಲ್ಲೆಯ ವಿವಿಧೆಡೆ,ಅದರಲ್ಲೂ ಜಕ್ಕಲಮಡಗು ಜಲಾಶಯದ ಪ್ರದೇಶದಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು,ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಮುಂಬರುವ ದಿನಗಳಲ್ಲಿ ಇದೇ ರೀತಿ ಮಳೆಯಾದರೆ ಎರಡು ನಗರಗಳಿಗೆ ಕನಿಷ್ಠ ನಾಲ್ಕೈದು ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎನ್ನಲಾಗುತ್ತಿದೆ.

    ಜಕ್ಕಲಮಡಗು ಜಲಾಶಯದ ನೀರಿನ ಪಾಲಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಶೇ.8ರಷ್ಟು ಮತ್ತು ದೊಡ್ಡಬಳ್ಳಾಪುರಕ್ಕೆ ಶೇ.2ರಷ್ಟು ಒಪ್ಪಂದದ ಬಳಿಕ ವಿವಾದಿತ ಜಲಾಶಯವನ್ನು ಮೇಲ್ದರ್ಜೆಗೇರಿಸಲಾಗಿದೆ.ಪ್ರಸ್ತುತ 430ದಶಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿದೆ.ಇದರಲ್ಲಿ ಚಿಕ್ಕಬಳ್ಳಾಪುರ ನಗರ ಮತ್ತು ಜಲಾಶಯದ ಸಮೀಪದ 9ಹಳ್ಳಿಗಳಿಗೆ 3ಸಾವಿರ ದಶಲಕ್ಷ ಲೀಟರ್ ನೀರು,ಉಳಿದಂತೆ ದೊಡ್ಡಬಳ್ಳಾಪುರಕ್ಕೆ ಹೆಚ್ಚುವರಿ ನೀರನ್ನು ಪೂರೈಸಲಾಗುತ್ತಿದೆ.

    ಕಳೆದ ಸಾಲಿನಲ್ಲಿ ವಾಡಿಕೆಗಿಂತಲೂ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ 8ತಿಂಗಳು ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಿರಲಿಲ್ಲ,ಈ ವರ್ಷದ ಬೇಸಿಗೆಯಲ್ಲಿ ಜಲಾಶಯ ಬರಿದಾಗಿದ್ದರಿಂದ ಎರಡೂ ನಗರಗಳಲ್ಲಿ ಮಿತವ್ಯಯ ಸೂತ್ರ ಪಾಲಿಸಲಾಗುತ್ತಿತ್ತು.ಇದೀಗ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿರುವುದು ನೀರಿಗಾಗಿ ಪರಿತಪಿಸುತ್ತಿದ್ದ ನಗರಗಳ ನಿವಾಸಿಗಳು ಹಾಗೂ ಸಮಸ್ಯೆ ನೀಗಿಸುವಲ್ಲಿ ಹೆಣಗಾಡುತ್ತಿದ್ದ ಅಧಿಕಾರಿಗಳಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.

    ಒಂದೇ ದಿನ ಉತ್ತಮ ಮಳೆ : ಸೋಮವಾರ ಉತ್ತಮ ಮಳೆಯಾಗಿದೆ.ರಾತ್ರಿ 1 ರ ಬಳಿಕ ಪ್ರಾರಂಭವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ.ಜೂನ್‌ನಲ್ಲಿ 6. ಮಿ.್ವಾಡಿಕೆ ಮಳೆಗೆ 7. ಮಿ.್ಮಳೆ ಬಿದ್ದಿದ್ದು ಶೇ.8ರಷ್ಟು ಹೆಚ್ಚಾಗಿದೆ.ಮೇ ನಲ್ಲಿ 6. ಮಿ.್ಪೈಕಿ 3 ಮಿ.್ಮಳೆಯಾಗಿ ಶೇ.6ಕೊರತೆ ಕಂಡು ಬಂದಿತ್ತು.ಇಲ್ಲಿಯವರೆಗೂ (2ಕ್ಕೆ)112ಮಿ.್ವಾಡಿಕೆ ಮಳೆಗೆ 114ಮಳೆಯಾಗಿದೆ.ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಜುಲೈನಲ್ಲಿ ಮತ್ತಷ್ಟು ಎನ್ನಲಾಗಿದೆ. ಜೂನ್‌ನಲ್ಲಿ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ ಮತ್ತು ಗೌರಿಬಿದನೂರಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು ಉಳಿದಂತೆ ಚಿಂತಾಮಣಿ,ಗುಡಿಬಂಡೆ ಮತ್ತು ಬಾಗೇಪಲ್ಲಿಯಲ್ಲಿ ಕೊರತೆ ಕಂಡು ಬಂದಿದೆ.

    ಜಕ್ಕಲಮಡಗು ಜಲಾಶಯ ತುಂಬಿದಾಗ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳ ಕುಡಿಯುವ ನೀರಿನ ಸಮಸ್ಯೆ ದೂರವಾಗುತ್ತದೆ.ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
    ಲೋಹಿತ್,ಪೌರಾಯುಕ್ತ,ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts