More

    ಜಂತ್ರಡಿ ದುರಸ್ತಿ, ಮೂಡಿದ ಖುಷಿ

    ಗೋಕರ್ಣ: ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಯ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಇದಕ್ಕೆ ಕಾರಣ, ಗಂಗಾವಳಿ ನದಿಯ ಉಪ್ಪು ಮಿಶ್ರಿತ ಕೃಷಿ ಭೂಮಿಗೆ ನುಗ್ಗುತ್ತಿತ್ತು. ಇದನ್ನು ತಡೆಯಲು ಮಾಡಿದ ಜಂತ್ರಡಿ (ಒಡ್ಡು)ಗೆ ಹಾಕಲಾಗಿತ್ತು. ಈ ಜಂತ್ರಡಿಗೆ ಹಾಕಲಾದ ಹಲಗೆ ಹಾಳಾಗಿತ್ತು. ಈಗ ಫಲವಾಗಿ ಚಿಕ್ಕ ನೀರಾವರಿ ಇಲಾಖೆ ಸಿಬ್ಬಂದಿ ಅಗತ್ಯ ಕಾಮಗಾರಿ ನಡೆಸಿ ಜಂತ್ರಡಿಗೆ ಹೊಸ ಹಲಗೆ ಜೋಡಿಸಿ, ಗೇಟ್ ದುರಸ್ತಿಗೊಳಿಸಿದ್ದಾರೆ. ಉಪ್ಪು ನೀರು ಗದ್ದೆಗಳಿಗೆ ನುಗ್ಗದಂತೆ ಮಾಡಿದ್ದಾರೆ. ಕೆಲವೆಡೆ ದುರ್ಬಲಗೊಂಡಿರುವ ತಡೆಗೋಡೆ ತಾತ್ಪೂರ್ತಿಕವಾಗಿ ಸರಿಪಡಿಸಲಾಗುತ್ತಿದೆ. ಇದರಿಂದಾಗಿ ರೈತರಲ್ಲಿ ಮೂಡಿದ್ದ ಬೆಳೆ ನಾಶದ ಆತಂಕ ದೂರಾದಂತಾಗಿದೆ.

    ಮನವಿಗೆ ಅಂತೂ ದೊರೆತ ಸ್ಪಂದನೆ: ನಾಡುಮಾಸ್ಕೇರಿ ಮತ್ತು ಅಗ್ರಗೋಣ ಗ್ರಾಮದಲ್ಲಿ ಗಂಗಾವಳಿ ನದಿಯ ಉಪ್ಪು ಮಿಶ್ರಿತ ಹಿನ್ನೀರು ಗದ್ದೆಗಳ ಒಳಸೇರಿ ಬೆಳೆ ಹಾಳಾಗದಂತೆ ಕಟ್ಟಲಾಗಿದ್ದ ಜಂತ್ರಡಿಗಳು ಕೆಲವೆಡೆ ದುರ್ಬಲವಾಗಿದ್ದವು. ಈ ಬಗ್ಗೆ ಕಳೆದ ಕೆಲ ವರ್ಷಗಳಿಂದ ಸರಿಪಡಿಸಲು ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಮನವಿ ಕೊಡುತ್ತ ಬಂದರೂ ಉಪಯೋಗವಾಗಿರಲಿಲ್ಲ.

    ಆಗಸ್ಟ್ ಎರಡನೇ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಜಂತ್ರಡಿಯೊಂದರ ಗೇಟ್ ಪೂರ್ಣ ಕೊಚ್ಚಿ ಹೋಗಿ ಉಪ್ಪು ನೀರು ನೂರಾರು ಎಕರೆ ಬೇಸಾಯದ ಭೂಮಿಯಲ್ಲಿ ತುಂಬಿ ರೈತರ ಸಂಕಷ್ಟಕ್ಕೆ ಕಾರಣವಾಗಿತ್ತು. ಈ ವೇಳೆ ರೈತರ ಮತ್ತು ಜನಪ್ರತಿನಿಧಿಗಳ ಆಗ್ರಹದ ಮೇರೆಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಸ್ಥಳ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ ಕೂಡಲೆ ಅಗತ್ಯ ಕಾಮಗಾರಿಗೆ ಆದೇಶಿಸಿ ಈ ಬಗ್ಗೆ ಸರ್ಕಾರದ ಸ್ತರದಲ್ಲಿ ಪ್ರಯತ್ನಿಸಿದರು.

    ಶಾಸಕ ದಿನಕರ ಶೆಟ್ಟಿ ಅವರ ಸಮಯೋಚಿತ ಪ್ರಯತ್ನದಿಂದಾಗಿ ಈ ಭಾಗದ ರೈತರು ಸಂಕಷ್ಟದಿಂದ ಪಾರಾಗಿದ್ದಾರೆ. ನಾಡುಮಾಸ್ಕೇರಿಯಿಂದ ಅಂಕೋಲಾ ತಾಲೂಕಿನ ಅಗ್ರಗೋಣ ಗ್ರಾಮದವರೆಗೆ ನಾಲ್ಕೈದು ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ತಡೆಗೋಡೆಯನ್ನು ಭದ್ರಪಡಿಸುವ ಕಾರ್ಯಕ್ಕೆ ಶಾಸಕರು ಮುಂದಾಗಿ ಈ ಭಾಗದ ಸಾವಿರಾರು ಎಕರೆ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ಮಹತ್ಕಾರ್ಯಕ್ಕೆ ಮುಂದಾಗಲಿ ಎಂಬ ಆಶಯ ಸ್ಥಳೀಯ ರೈತರದ್ದಾಗಿದೆ. | ರಾಜೇಶ ನಾಯಕ ತಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts