More

    ಛಾಯಾಗ್ರಾಹಕರಿಗೆ ನೀಡಲಿ ಮಾಸಾಶನ  * ಸರ್ಕಾರಕ್ಕೆ ಓಂಕಾರ ಸ್ವಾಮೀಜಿ ಆಗ್ರಹ 

    ದಾವಣಗೆರೆ : ಛಾಯಾಗ್ರಾಹಕರನ್ನು ಕಲಾವಿದರು ಎಂದು ಪರಿಗಣಿಸುವ ಮೂಲಕ ಮಾಸಿಕ 6ರಿಂದ 7 ಸಾವಿರ ರೂ.ಗಳ ಮಾಸಾಶನ ನೀಡಬೇಕೆಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.

    ದಾವಣಗೆರೆ ತಾಲ್ಲೂಕು ಫೋಟೊ ಮತ್ತು ವಿಡಿಯೊಗ್ರಾಫರ್ಸ್ ಸಂಘದಿಂದ ರೋಟರಿ ಬಾಲಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಮೊಬೈಲ್ ಹಾವಳಿಯಿಂದಾಗಿ ಛಾಯಾಗ್ರಾಹಕರ ಬದುಕು ಸಂಕಷ್ಟದಲ್ಲಿದೆ. ಸರ್ಕಾರಕ್ಕೆ ಅನಗತ್ಯ ಕ್ಷೇತ್ರಗಳಿಗೆ ಹಣ ವಿನಿಯೋಗಿಸುವುದನ್ನು ಬಿಟ್ಟು ಛಾಯಾಗ್ರಾಹಕರಿಗೆ ಮಾಸಾಶನ ನೀಡಬೇಕು. ಅವರಲ್ಲಿ ಪ್ರಶಸ್ತಿ ನೀಡಿ, ಕ್ಯಾಮರಾ ಹಿಂದಿನ ಬದುಕನ್ನು ಗುರುತಿಸಿದಾದಲ್ಲಿ ಅವರಿಗೆ ಜೀವ ನೀಡಿದಂತಾಗಲಿದೆ ಎಂದು ಹೇಳಿದರು.
    ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಚ್.ಬಿ. ಮಂಜುನಾಥ್ ಮಾತನಾಡಿ, ಫೋಟೊಗ್ರಫಿಯಿಂದ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾರಂಭವಾಯಿತು. ನಂತರ ಸೃಜನಾತ್ಮಕ ಕಲೆಯಾಯಿತು. ಒಂದೆರಡು ದಶಕದಿಂದ ಡಿಜಿಟಲೀಕರಣದ ಫೋಟೊಗ್ರಫಿಯಲ್ಲಿ ಅನಿರೀಕ್ಷಿತ ಬೆಳವಣಿಗೆ ಜತೆಗೆ ಕಲ್ಪನೆಗೂ ಮೀರಿದ ಎಫೆಕ್ಟ್ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
    ವೀರ ಯೋಧರಾದ ಕೆ.ಪಿ. ಚಂದ್ರಪ್ಪ, ಕೆ.ಎಸ್. ಬೀರಪ್ಪ, ದಾನಪ್ಪ, ಹಿರಿಯ ಛಾಯಾಗ್ರಾಹಕರಾದ ಕುಮಾರ್, ಎ.ಎಲ್. ತಾರಾನಾಥ್, ಕಾಶಿನಾಥ್ ಅವರನ್ನು ಸನ್ಮಾನಿಸಲಾಯಿತು.
    ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಮನು, ಗೌರವ ಅಧ್ಯಕ್ಷ ಬಿ.ಮಂಜುನಾಥ್, ಎಂ.ಎಸ್.ಚನ್ನಬಸವ, ಮಾಲತೇಶ್ ಅರಸ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts