More

    ಛಲದಿಂದ ಮುನ್ನಡೆದರೆ ಸಾಧನೆ ಸಾಧ್ಯ

    ಚನ್ನರಾಯಪಟ್ಟಣ: ಕ್ಷೇತ್ರ ಯಾವುದೇ ಇರಲಿ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ಛಲದಿಂದ ಮುನ್ನಡೆದರೆ ಸಾಧನೆ ಎಂಬುದು ಹೂ ಎತ್ತಿದಷ್ಟು ಹಗುರವಾಗಲಿದೆ ಎಂದು ನಿವೃತ್ತ ಉಪನ್ಯಾಸಕಿ ಎನ್.ಎಸ್.ಉಮಾದೇವಿ ಹೇಳಿದರು.


    ತಾಲೂಕಿನ ಕಬ್ಬಾಳು ಗ್ರಾಮದ ಕನಕ ಸಮುದಾಯ ಭವನದಲ್ಲಿ ಚನ್ನರಾಯಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನ 1999-2000 ನೇ ಸಾಲಿನ ಕಲಾ ವಿಭಾಗದ ಹಳೇ ವಿದ್ಯಾರ್ಥಿಗಳ ಸಂಘದಿಂದ ಬುಧವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಯಾರೊಬ್ಬರ ಕೊಡುಗೆಯೂ ಅಲ್ಲ. ಪ್ರತಿಭಾನ್ವಿತ ವ್ಯಕ್ತಿಯ ಪರಿಶ್ರಮ ಹಾಗೂ ಗುರಿಯು ಸಾಧನೆಗೆ ಮೂಲ ಅಸ್ತ್ರವಾಗಲಿದೆ. ಶೈಕ್ಷಣಿಕ ಹಂತದಿಂದಲೇ ಯಾವ ಕ್ಷೇತ್ರದ ಮೇಲೆ ಆಸಕ್ತಿ ಇದೆಯೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


    ಪಾಲಕರು ಮಕ್ಕಳ ಮನಸು ಹಾಗೂ ಪ್ರತಿಭೆಯನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು. ಈಗ ಸರ್ಕಾರದಿಂದಲೂ ಸಾಕಷ್ಟು ಸೌಲಭ್ಯಗಳಿವೆ. ಸಮಯಕ್ಕೆ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


    ಯಾರು ಯಾವುದೇ ಕ್ಷೇತ್ರದಲ್ಲಿ ಅದೆಷ್ಟೇ ಎತ್ತರಕ್ಕೆ ಬೆಳೆದರೂ ಶಿಕ್ಷಣ ಪಡೆದ ಶಾಲೆ, ವಿದ್ಯೆ ಕಲಿಸಿದ ಗುರು ಹಾಗೂ ಸಹಪಾಠಿಗಳನ್ನು ಮರೆಯಬಾರದು. ತಮ್ಮ ದುಡಿಮೆಯಲ್ಲಿ ಶೇ.10 ರಷ್ಟು ಹಣವನ್ನು ಸಮಾಜ ಸೇವೆಗೆ ಬಳಕೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


    ಮಾಜಿ ಸೈನಿಕ ಎಸ್.ಕೆ.ಗಣೇಶ್, ಎಸ್.ಕೆ.ರಘು(ಕೃಷಿ ಕ್ಷೇತ್ರ), ಕೆ.ನವೀನ್(ಉದ್ಯಮ), ವತ್ಸಲಾ ಸುರೇಶ್(ಸಾಹಿತ್ಯ), ಸುನೀಲ್ ಕುಂಭೇನಹಳ್ಳಿ(ಮಾಧ್ಯಮ) ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜೆ.ಎಸ್.ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ನಿವೃತ್ತ ಉಪನ್ಯಾಸಕರನ್ನು ಅಭಿನಂದಿಸಲಾಯಿತು.


    ನಿವೃತ್ತ ಪ್ರಾಂಶುಪಾಲ ಒ.ಆರ್.ರಂಗೇಗೌಡ, ನಿವೃತ್ತ ಉಪನ್ಯಾಸಕರಾದ ಕೆ.ಜಿ.ನಾಗರಾಜ್, ಜೆ.ಎನ್.ನಾಗರಾಜ್, ಎಂ.ಕೆ.ಶಿವರಾಮ್, ಎ.ಚಿದಂಬರ್, ಎಂ.ಎನ್.ನಂಜೇಶ್, ಜಿ.ಕಾಟಪ್ಪ, ಎಚ್.ಕೆ.ಪ್ರಕಾಶ್, ಕೆ.ಆರ್.ಶಿವಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts