More

    ಛಬ್ಬಿ ಹಿರಿಮೆಗೆ ಮತ್ತೊಂದು ಗರಿ

    ಹುಬ್ಬಳ್ಳಿ: ಕೃಷ್ಣೇಂದ್ರ ಗುರುಗಳ ಆಶೀರ್ವಾದದೊಂದಿಗೆ ಸ್ಥಾಪಿತ ಚೌತಿಯ ಕೆಂಪು ಗಣಪತಿ, ಜೈನ ಮಠ, ಭಾವೈಕ್ಯ… ಹೀಗೆ ನಿರ್ದಿಷ್ಟ ಕಾರಣದಿಂದಾಗಿ ಪ್ರಸಿದ್ಧಿ ಹೊಂದಿರುವ ತಾಲೂಕಿನ ಛಬ್ಬಿ ಗ್ರಾಮಕ್ಕೆ ಈಗ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ ಹೆಮ್ಮೆ ಪ್ರಾಪ್ತವಾಗಿದೆ.

    ಮಲೆನಾಡ ಸೆರಗಿನಲ್ಲಿ, ಹೆದ್ದಾರಿಗೆ ಹೊಂದಿಕೊಂಡಿರುವ ಛಬ್ಬಿ, ಧಾರವಾಡ ಜಿಲ್ಲೆಯ ದೊಡ್ಡ ಗ್ರಾಮಗಳಲ್ಲಿ ಒಂದು. ಉತ್ತಮ ಸಂಪರ್ಕ, ಪ್ರಮುಖ ಹಿರೇ ಕೆರೆ ಮತ್ತಿತರ ಮೂಲಗಳಿಂದಾಗಿ ಸಮಾಧಾನಕರ ಜಲಸಮೃದ್ಧಿ ಹೊಂದಿರುವ ಊರಲ್ಲಿ ಸಚಿವ ಆರ್. ಅಶೋಕ ಅವರ ಗ್ರಾಮವಾಸ್ತವ್ಯ ಏರ್ಪಾಟಾಗಿದ್ದರಿಂದ ಒಂದಿಷ್ಟು ಅನುಕೂಲವಾಯಿತು.

    20 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಡಕಚೇರಿ ನಿರ್ವಣಕ್ಕೆ ಭೂಮಿಪೂಜೆ, ಅಂದಾಜು 24 ಕೋಟಿ ರೂಪಾಯಿ. ವೆಚ್ಚದ 6ರಿಂದ 10ನೇ ತರಗತಿಯ ಅಂಬೇಡ್ಕರ್ ವಸತಿ ಶಾಲೆ ಮಂಜೂರಿ, ಆರೋಗ್ಯ ಶಿಬಿರ, ಜಾನುವಾರುಗಳ ತಪಾಸಣೆ, ಗ್ರಾಮದ ಪಕ್ಕ ಹೆದ್ದಾರಿಗೆ ಫ್ಲೈಓವರ್ ನಿರ್ವಣದ ಬೇಡಿಕೆ ಕುರಿತು ಪರಿಶೀಲಿಸುವ ಭರವಸೆ, 396 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸಾಮಗ್ರಿ ಹಾಗೂ ಆದೇಶಪತ್ರ ವಿತರಣೆ, ಬಹು ದಿನಗಳಿಂದ ಬಾಕಿ ಇದ್ದ ಖಾತಾ ಬದಲಾವಣೆ, ಪೋತಿ ಖಾತಾಗಳಿಗೆ ಅಧಿಕಾರಿಗಳಿಂದ ಸ್ಪಂದನೆ, ಗ್ರಾಮದಲ್ಲಿ ಆಧಾರ ಕೇಂದ್ರ ಸ್ಥಾಪನೆ, ಗ್ರಾಮ ಲೆಕ್ಕಾಧಿಕಾರಿಗಳು ಮನೆಗೇ ಬಂದು ವೃದ್ಧಾಪ್ಯ ವೇತನ ಅರ್ಜಿ ಸ್ವೀಕರಿಸಿ ವಿತರಿಸುವ ವ್ಯವಸ್ಥೆ ಜಾರಿ… ಇವೆಲ್ಲ ಜನರಿಗೆ ಆದ ಲಾಭಗಳು. ಗ್ರಾಮದ ಸರ್ಕಾರಿ ಶಾಲೆ ಕೊಠಡಿಯಲ್ಲಿ ತಂಗಿದ್ದ ಸಚಿವರು ಭಾನುವಾರ ಬೆಳಗ್ಗೆ ಬೇಗ ಎದ್ದು ವಾಯುವಿಹಾರ ಮಾಡಿ ಮುಗಿಸಿದರು. ಸಚಿವರು, ಅಧಿಕಾರಿಗಳಿಗೆ ಗ್ರಾ.ಪಂ. ಸದಸ್ಯೆ ಪುಷ್ಪಲತಾ ಕಾಳೆ ಅವರ ಮನೆಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮನೆ ಹಿರಿಯರಾದ ಶೇಖವ್ವ ಕಾಳೆ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವರಿಗೆ ಜನರು ಪೇಟ ತೊಡಿಸಿ ಶುಭ ಕೋರಿ ಬೀಳ್ಕೊಟ್ಟರು. ಅಂದಾಜು 22 ತಾಸು ಛಬ್ಬಿಯಲ್ಲಿ ಮಂತ್ರಿಯೊಬ್ಬರು ಉಳಿದಿದ್ದು ಒಂದು ದಾಖಲೆಯಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts