More

    ಚೇತರಿಕೆ ಕಂಡ ಮೀನು ಮಾರಾಟ

    ರೋಣ: ಲಾಕ್​ಡೌನ್ ಅವಧಿಯಲ್ಲಿ ತಾಲೂಕಿನಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದ ಮೀನು ಮಾರಾಟ ಇದೀಗ ಚೇತರಿಸಿಕೊಳ್ಳುತ್ತಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಮಾಂಸಾಹಾರದ ಖಾದ್ಯಗಳಿಗೆ ಬೇಡಿಕೆ ಹೆಚ್ಚಿರುವುದು ಮೀನು ಮಾರಾಟಗಾರರಿಗೆ ನೆರವಾಗಿದೆ.

    ಬೇಡಿಕೆ ಹೆಚ್ಚಿದ ಪರಿಣಾಮ ಮೀನಿನ ದರವೂ ಹೆಚ್ಚಳವಾಗಿದೆ. ಸ್ಥಳೀಯವಾಗಿ ಕಟ್ಲಾ, ಜಿಲೇಬಿ, ಬಾಂಗ್ಡಾ ಮೀನು ಪ್ರತಿ ಕೆಜಿಗೆ 150 ರಿಂದ 175 ರೂ. ವರೆಗೆ ಮಾರಾಟವಾಗುತ್ತಿದೆ ಎಂದು ಮೀನು ಮಾರಾಟಗಾರ ಜಿ. ಧರ್ಮಪ್ಪ ಹೇಳಿದರು.

    ಮೀನುಗಾರರಿಗೆ ಸ್ವಂತ ಜಮೀನು ಇಲ್ಲ. ಬುಟ್ಟಿ ( ಹರಿಗೋಲು) ಬಲೆಯೇ ಆಸ್ತಿ. ಲಾಕ್​ಡೌನ್ ಸಮಯದಲ್ಲಿ ಎರಡು ತಿಂಗಳ ಕಾಲ ಬಹಳ ಕಷ್ಟ ಅನುಭವಿಸಿದ್ದೇವೆ. ಈವರೆಗೆ ಯಾರೂ ನಮ್ಮ ನೆರವಿಗೆ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಹುತೇಕ ಎಲ್ಲ ವರ್ಗದವರಿಗೆ ಪರಿಹಾರದ ಪ್ಯಾಕೇಜ್ ನೀಡಲಾಗಿದೆ. ಅದರಲ್ಲಿ ಎಲ್ಲಿಯೂ ಮೀನು ಮಾರಾಟಗಾರರ ಬಗ್ಗೆ ಪ್ರಸ್ತಾಪವಾಗಿಲ್ಲ ಎನ್ನುತ್ತಾರೆ ಮೀನು ಮಾರಾಟಗಾರ ದೇವಪ್ಪ ಅಂಬಿಗೇರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts