More

    ಚೆಕ್ ಪೋಸ್ಟಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ

    ಕಲಬುರಗಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ಚೆಕ್ ಪೋಸ್ಟ್ ಹಾಗೂ ಕರೊನಾ ಸೋಂಕಿತರ ವಾರ್ಡಗಳ ಬ್ಯಾರಿಕೇಡ್ ಬಳಿ ಸಿಸಿ ಕ್ಯಾಮರಾ ಅಳವಡಿಸಲು ಸಂಸದ ಡಾ.ಉಮೇಶ ಜಾಧವ್ ಸೂಚನೆ ನೀಡಿದರು.
    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆ ಎಲ್ಲ ಚೆಕ್ ಪೋಸ್ಟ್ಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಹಾಬಾದ್ ಹಾಗೂ ಹುಮನಾಬಾದ್ ಹೊರತುಪಡಿಸಿ ಎಲ್ಲ ಚೆಕ್ಪೋಸ್ಟ್ಗಳು ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಕರೊನಾ ಕೇಸ್ಗಳು ಹೆಚ್ಚಾಗುತ್ತಿದ್ದು, ನಾವು ರೆಡ್ ಝೋನ್ನಲ್ಲಿದ್ದೇವೆ. ಹೀಗಾಗಿ ಇನ್ಮುಂದೆ ಎಲ್ಲರೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
    ಕರೊನಾ ಸೋಂಕಿತರ ಖಚಿತ ಮಾಹಿತಿಯನ್ನು ತ್ವರಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಮಾಹಿತಿ ಸಿಕ್ಕ 2 ಗಂಟೆಯೊಳಗೆ ಸೋಂಕಿತನ ಕಾಲನಿ ಸುತ್ತ ಬ್ಯಾರಿಕೇಡ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ತಾಕೀತು ಮಾಡಿದರು.
    ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಜಿಲ್ಲೆಯ ಪ್ರತಿ ವಾರ್ಡ ಎಲ್ಲ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಹೊರಗಡೆ ಹೋಗಲು ಒಂದೇ ದಾರಿಯ ವ್ಯವಸ್ಥೆ ಮಾಡಬೇಕು. ವಾರ್ಡಿನಿಂದ ಹೊರಗಡೆ ಹೋಗುವ ಪ್ರತಿ ವ್ಯಕ್ತಿ ಬಗ್ಗೆ ಮಾಹಿತಿ ಸಂಗ್ರಹಿಸಲು ಒಬ್ಬ ಪೇದೆ, ಪಾಲಿಕೆಯಿಂದ ಒಬ್ಬ ಇಂಜಿನಿಯರ್ ಹಾಗೂ ಆರೋಗ್ಯ ಇಲಾಖೆ ನೌಕರನನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು.
    ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಸಿಪಿ ಕಿಶೋರಬಾಬು ಇತರರಿದ್ದರು.

    ಪೊಲೀಸರಿಗೆ ಪಿಪಿಇ ಕಿಟ್ ವಿತರಣೆ
    ಕಲಬುರಗಿ ರೋಟರಿ ಕ್ಲಬ್ ಅಧ್ಯಕ್ಷ ಕಿರಣಕುಮಾರ ಶೆಟಕಾರ್ ಅವರು 10 ಪಿಪಿಇ ಕಿಟ್ ಹಾಗೂ 1000 ಮಾಸ್ಕ್ಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೇಣಿಗೆಯಾಗಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts