More

    ಚುನಾವಣೆ ಸಿದ್ಧತೆ ಪರಿಶೀಲಿಸಿದ ತಹಸೀಲ್ದಾರ್

    ಮುಂಡರಗಿ: ಪಟ್ಟಣದ ಜೆ.ಎ. ಕಾಲೇಜ್ ಮಸ್ಟರಿಂಗ್ ಕೇಂದ್ರದಲ್ಲಿನ ಚುನಾವಣೆ ಸಿದ್ಧತೆಗಳನ್ನು ತಹಸೀಲ್ದಾರ್ ಆಶಪ್ಪ ಪೂಜಾರಿ ಅವರು ಶನಿವಾರ ಪರಿಶೀಲಿಸಿದರು.

    ಈ ವೇಳೆ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಒಟ್ಟು 123 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ 78 ಸಾಮಾನ್ಯ, 20 ಸೂಕ್ಷ್ಮ ಹಾಗೂ 25 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಗೆ ಆರ್​ಒ, ಪಿಆರ್​ಒ, ಎಪಿಆರ್​ಒ, ಪಿಒ ಸೇರಿ 680 ಸಿಬ್ಬಂದಿ ನಿಯೋಜಿಸಲಾಗಿದೆ. ಡಿಎಸ್​ಪಿ, ಇಬ್ಬರು ಸಿಪಿಐ, ನಾಲ್ವರು ಪಿಎಸ್​ಐ, 17 ಎಎಸ್​ಐ, 49 ಎಚ್​ಸಿ ಹಾಗೂ 60 ಪೇದೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಫೋಟೋ-26ಎಂಡಿಜಿ1-ಮುಂಡರಗಿ ಜೆ.ಎ. ಕಾಲೇಜ್​ನ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣೆ ಸಿದ್ಧತೆಯನ್ನು ತಹಸೀಲ್ದಾರ್ ಆಶಪ್ಪ ಪೂಜಾರಿ ಶನಿವಾರ ಪರಿಶೀಲಿಸಿದರು. ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts