More

    ಚುನಾವಣಾ ನಿಯಮ ಬದಲಾವಣೆಗೆ ಆಗ್ರಹ

    ದಾವಣಗೆರೆ: ಗ್ರಾಪಂ ಪಂಚಾಯ್ತಿಯಿಂದ ಲೋಕಸಭೆವರೆಗೆ ಪಾರದರ್ಶಕ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೆಲವು ನಿಯಮಗಳನ್ನು ಜಾರಿಗೊಳಿಸುವಂತೆ ನಗರದ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಆಗ್ರಹಿಸಿದರು.
    ಹಣಕ್ಕಾಗಿ ಮತ ಮಾರಿಕೊಳ್ಳುವ ಮತದಾರರ ಮತ್ತು ಆಮಿಷವೊಡ್ಡುವ ಅಭ್ಯರ್ಥಿಯ ಮತವನ್ನು ಸುಮಾರು 10 ವರ್ಷಗಳ ಕಾಲ ನಿಷೇಧಿಸಬೇಕು. ಸ್ಥಳೀಯ ಸಂಸ್ಥೆಯಿಂದ ಯಾವುದೇ ಹಂತದ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅನಿಸಿಕೆ ಹೇಳಿಕೊಂಡರು.
    ಅಭ್ಯರ್ಥಿ ಮತ ಕೇಳುವ ಹಂತದಲ್ಲಿ ಭಯದ ವಾತಾವರಣ ಮೂಡಿಸದಂತೆ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಿಧಾನಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಗೆ 40 ಲಕ್ಷ ರೂ. ವರೆಗೆ ಚುನಾವಣಾ ವೆಚ್ಚದ ಮಿತಿ ಹೇರಲಾಗಿದೆ. ಆದರೆ ಮೆರವಣಿಗೆ ವೇಳೆ ಭಾಗಿಯಾಗುವ ಜನರ ಕುರಿತಂತೆ ಪರವಾನಗಿ ಪಡೆಯಲು ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
    ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕುವಂತೆ ಭಾರತ ಹಾಗೂ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರವಿದೆ ಎಂದು ಹೇಳಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts