More

    ಚುಂಚೇಗೌಡನ ದೊಡ್ಡಿಯಲ್ಲಿ ಚಿರತೆ ಪ್ರತ್ಯಕ್ಷ

    ಮದ್ದೂರು: ತಾಲೂಕಿನ ಚುಂಚೇಗೌಡನ ದೊಡ್ಡಿ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.


    ಶನಿವಾರ ಮಧ್ಯಾಹ್ನ ಕಟ್ಟೆ ಆಂಜನೇಯಸ್ವಾಮಿ ದೇಗುಲದ ಬಳಿಯಲ್ಲಿ ಕುರಿ, ಮೇಕೆಗಳನ್ನು ಮೇಯಿಸುತ್ತಿದ್ದಾಗ ದಿಢೀರ್ ದಾಳಿ ಮಾಡಿದ ಚಿರತೆ ಚುಂಚೇಗೌಡನದೊಡ್ಡಿ ಗ್ರಾಮದ ಗಾರೆ ಮರಿಯಣ್ಣ ಅವರಿಗೆ ಸೇರಿದ 30 ಕೆ.ಜಿ. ತೂಕದ ಕುರಿಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಕುರಿಯನ್ನು ಹೊತ್ತೊಯ್ಯಲು ಸಾಧ್ಯವಾಗದಿದ್ದಾಗ ಕುತ್ತಿಗೆಯ ಭಾಗದಲ್ಲಿ ಬಲವಾಗಿ ಕಚ್ಚಿ ರಕ್ತ ಕುಡಿಯಲು ಪ್ರಾರಂಭಿಸಿದಾಗ ಗ್ರಾಮಸ್ಥರು ಕಿರುಚಾಡಿಕೊಂಡು ದೊಣ್ಣೆಗಳನ್ನು ಹಿಡಿದುಕೊಂಡು ಗದರಿಸಿದಾಗ ಚಿರತೆ ಓಡಿ ಹೋಗಿದೆ ಎನ್ನಲಾಗಿದೆ.


    ಕುರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಮೃತಪಟ್ಟರೆ ಅರಣ್ಯ ಇಲಾಖೆಯಿಂದ ಪರಿಹಾರ ಒದಗಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಅರಣ್ಯ ಇಲಾಖೆಯ ಸಿಬ್ಬಂದಿ ಚುಂಚೇಗೌಡನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆಯ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ. ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆ ಚಲನವಲನಗಳನ್ನು ತಿಳಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts