More

    ಚಿನ್ನಾಭರಣ ಪಾಲಿಶ್ ನೆಪದಲ್ಲಿ ನಿವೃತ್ತ ಶಿಕ್ಷಕಿಗೆ ವಂಚನೆ

    ನರೇಗಲ್ಲ: ಚಿನ್ನಾಭರಣ ತೊಳೆದು ಕೊಡುವುದಾಗಿ (ಪಾಲಿಶ್) ಹೇಳಿ ನಿವೃತ್ತ ಶಿಕ್ಷಕಿಯೊಬ್ಬರಿಂದ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಇಬ್ಬರು ಕಳ್ಳರು ಲಪಟಾಯಿಸಿದ ಘಟನೆ ಪಟ್ಟಣದ 10ನೇ ವಾರ್ಡ್​ನ ತೆಗ್ಗಿನಕೇರಿ ಓಣಿಯಲ್ಲಿ ಬುಧವಾರ ನಡೆದಿದೆ.

    ತೆಗ್ಗಿನಕೇರಿ ಓಣಿ ನಿವಾಸಿ, ನಿವೃತ್ತ ಶಿಕ್ಷಕಿ ಮಹಾಂತಮ್ಮ ಪರಶುರಾಮ ಬಸರಿಗಿಡದ (65) ವಂಚನೆಗೊಳಗಾದವರು. ಮನೆಯಲ್ಲಿ ಅತ್ತೆ, ಸೊಸೆ ಇಬ್ಬರೇ ಇದ್ದಾಗ ಈ ಘಟನೆ ನಡೆದಿದೆ.

    ‘ಹಿಂದಿಯಲ್ಲಿ ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳು ನಿಮ್ಮಲ್ಲಿರುವ ಚಿನ್ನ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ನಮ್ಮನ್ನು ನಂಬಿಸಿದರು. ಆಗ ನಾನು ಅವರಿಗೆ 40 ಗ್ರಾಂ ತೂಕದ ಎರಡು ಬಳೆಗಳು, 40 ಗ್ರಾಂ ತೂಕದ ಮಾಂಗಲ್ಯ ಸರ, ಎರಡು ಉಂಗುರಗಳನ್ನು ಕೊಟ್ಟೆ. ಅವುಗಳನ್ನು ತಮ್ಮೊಂದಿಗೆ ತಂದಿದ್ದ ಪುಡಿ ಸಮೇತ ನಮ್ಮ ಮನೆಯಲ್ಲಿನ ಕುಕ್ಕರ್​ನಲ್ಲಿ ಹಾಕಿದಂತೆ ಮಾಡಿದರು. ನಂತರ ಕುಕ್ಕರ್ ಒಂದು ಸೀಟಿ ಹೊಡೆಯುವವರೆಗೆ ಚೆನ್ನಾಗಿ ಕಾಯಿಸಿ ಎಂದರು. ಆದರೆ, ಕುಕ್ಕರ್ ಸೀಟಿ ಹೊಡೆಯದಿದ್ದಾಗ ಒಬ್ಬ ಕುಕ್ಕರ್ ಪರಿಶೀಲಿಸಿದ. ಇನ್ನೂ 15 ನಿಮಿಷ ತಡೆದು, ಸೀಟಿ ಹೊಡೆದ ಮೇಲೆ ತೆಗೆಯಿರಿ ಎಂದು ಹೇಳಿ ಹೋದರು. ಅವರು ಹೇಳಿದಂತೆ ಕುಕ್ಕರ್ ತೆಗೆದು ನೋಡಿದರೆ ಚಿನ್ನಾಭರಣಗಳು ಇರಲಿಲ್ಲ. ತಕ್ಷಣ ನಾನು ನರೇಗಲ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ’ ಎಂದು ಮಹಾಂತಮ್ಮ ಬಸರಿಗಿಡದ ಹೇಳಿದರು.

    ನರೇಗಲ್ಲ ಠಾಣೆ ಸಿಬ್ಬಂದಿ ಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts