More

    ಚಿತ್ತಾಪುರದಲ್ಲಿ ಬೆಳೆ ನಾಶ

    ಚಿತ್ತಾಪುರ: ಪಟ್ಟಣದ ನಾಗಾವಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿ, ಸುರಿದ ಮಳೆಗೆ ಮಲ್ಲರೆಡ್ಡಿ ಗೋಪಶೇನ್ ಅವರು ಬೆಳೆದ ಬಾಳೆ ಹಾಗೂ ಕಬ್ಬು ಬೆಳೆ ಸಂಪೂರ್ಣ ಕಿತ್ತುಕೊಂಡು ಹೋಗಿ ಲಕ್ಷಾಂತರ ರೂ. ನಷ್ಟವಾಗಿದೆ. ಒಂದು ಎಕರೆ ಜಮೀನಿನಲ್ಲಿ ಬಾಳೆ, ಕಬ್ಬು ಬೆಳೆಯಲಾಗಿದೆ.
    ತರಕಾರಿ ಗೋಳು: ಇನ್ನಷ್ಟು ಎಕರೆಯಲ್ಲಿ ಸೌತೆಕಾಯಿ, ಹಿರೇಕಾಯಿ, ಬದನೆಕಾಯಿ ಸೇರಿ ವಿವಿಧ ತರಕಾರಿಗಳು ಬೆಳೆಯಲಾಗಿದೆ. ಕೆಲವರು ಬೆಳಗ್ಗೆ 4.30 ಕ್ಕೆ ಯಾದಗಿರಿಯಿಂದ ತರಕಾರಿ ತಂದು ಇಲ್ಲಿ ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ರೈತರ ತರಕಾರಿಗೆ ಯಾರು ಕೇಳದಂತಾಗಿದೆ. ಇದು ರೈತರನ್ನು ಚಿಂತಿತರನ್ನಾಗಿ ಮಾಡಿದೆ.

    ತಾಲೂಕಿನಲ್ಲಿ ಹಾನಿಗೊಳಗಾದ ಬಾಳೆ, ಕಬ್ಬು ಬೆಳೆಗಳ ಸಮೀಕ್ಷೆ ನಡೆಸಬೇಕು. ಸ್ಥಳೀಯ ತರಕಾರಿ ಬೆಳೆದ ರೈತರ ತರಕಾರಿ ಪಟ್ಟಣದಲ್ಲಿ ಸಮರ್ಪಕ ಬೆಲೆಗೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು.
    | ಮಲ್ಲರೆಡ್ಡಿ ಗೋಪಶೇನ್ ರೈತ ಚಿತ್ತಾಪುರ

    ಚಿತ್ತಾಪುರ, ಕೊಲ್ಲೂರು, ಗುಂಡಗುತರ್ಿ ಸೇರಿ ಅನೇಕ ಗ್ರಾಮಗಳಲ್ಲಿ ಬೆಳೆ ಹಾನಿಯಾದ ವರದಿಯಾಗಿದೆ. ಸಮೀಕ್ಷೆ ನಡೆಸಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಹಾನಿಯಾದ ರೈತರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು.
    | ಸಿದ್ದಣ್ಣ ಅಣಬಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಚಿತ್ತಾಪುರ

    ಮಲಕೂಡದಲ್ಲಿ ಬಿರುಗಾಳಿಗೆ ಹಾರಿದ ಪತ್ರಾಗಳು
    ಮಳಖೇಡ : ಮಲಕೂಡ ಗ್ರಾಮದಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಮನೆಯ ಮೇಲಿನ ಪತ್ರಾಗಳು ಹಾರಿ ಹೋಗಿ ದವಸ ಧಾನ್ಯ
    ಹಾನಿಯಾಗಿವೆ.
    ಶೋಭಾ ಸಾಲಳ್ಳಿಯವರಿಗೆ ಸೇರಿದ ಮನೆ ಇದಾಗಿದೆ. ಘಟನೆ ಸಂಭವಿಸಿದ ತಕ್ಷಣ ಭಯಭೀತರಾಗಿ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದು ಅಪಾಯ ತಪ್ಪಿದೆ. ಈ ವಿಷಯ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಹಾನಿಯಾದ ಕುಟುಂಬಕ್ಕೆ ಸಕರ್ಾರ ಸಹಾಯ ಮಾಡಬೇಕಾದ ಅವಶ್ಯಕತೆ ಇದೆ ಎಂದು ಗ್ರಾಪಂ ಉಪಾಧ್ಯಕ್ಷ ಶಂಕರ ಐನಾಪುರ ಮನವಿ ಮಾಡಿದ್ದಾರೆ.

    ಸಿಡಿಲು ಬಡಿದು ರೈತ ಸಾವು
    ಆಳಂದ: ತಾಲೂಕಿನ ನರೋಣಾ ಗ್ರಾಮದಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನಿಂದ ಸುರಿದ ಮಳೆಯಲ್ಲಿ ಸಿಡಿಲು ಬಡಿದು ರೈತ ಶಿವಕುಮಾರ ಸಾವಳಗಿ (38) ಮೃತಪಟ್ಟಿದ್ದಾನೆ. ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬರುತ್ತಿರುವಾಗ ಸಿಡಿಲು ಬಡಿದಿದೆ. ನರೋಣಾ ಠಾಣೆ ಪಿಎಸ್ಐ ಉದ್ದಂಡಪ್ಪ ಮಣ್ಣೂರಕರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts