More

    ಚರ್ಮಗಂಟು ರೋಗ ತಡೆಗೆ ಕ್ರಮಕ್ಕೆ ಆಗ್ರಹ

    ಬೈಲಹೊಂಗಲ, ಬೆಳಗಾವಿ: ಜಾನುವಾರುಗಳಿಗೆ ಬಂದಿರುವ ಲಿಂಪಿ (ಚರ್ಮಗಂಟು ರೋಗ) ರೋಗ ತಡೆಗೆ ಕ್ರಮ ಕೈಗೊಳ್ಳಬೇಕು, ಜಾನುವಾರು ಸಾವಿನಿಂದ ಕಂಗೆಟ್ಟಿರುವ ಮಾಲೀಕರಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದ ಪಶು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟಿಸಿದರು. ಬಳಿಕ ತಹಸೀಲ್ದಾರ್ ಬಸವರಾಜ ನಾಗರಾಳ, ಪಶು ವೈದ್ಯಾಧಿಕಾರಿ ಐ.ಎಸ್.ಕೋಲಾರಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ತಾಲೂಕಾಧ್ಯಕ್ಷ ರಾಜು ಬೋಳಣ್ಣವರ ಮಾತನಾಡಿ, ತಾಲೂಕಿನಲ್ಲಿ ಲಿಂಪಿ ರೋಗವು ತೀಕ್ಷ್ಣವಾಗಿ ಹರಡಿದ್ದು, ಅನೇಕ ರೈತರ ಮನೆಯಲ್ಲಿರುವ ಜಾನುವಾರು ಸಾವನ್ನಪ್ಪುತ್ತಿವೆ. ಇಲ್ಲಿಯವರೆಗೂ ಸರ್ಕಾರದಿಂದ ಸೂಕ್ತ ಔಷಧ ಕಂಡು ಹಿಡಿಯಲು ಆಗಿಲ್ಲ. ರೈತರ ಕಷ್ಟವನ್ನು ಆಲಿಸಬೇಕಿರುವ ಸರ್ಕಾರ, ಪಶು ಇಲಾಖೆ ಕೈಕಟ್ಟಿ ಕುಳಿತಿವೆ. ಪಶು ವೈದ್ಯಾಧಿಕಾರಿಗಳು ಪಂಚಾಯಿತಿಗೆ ಸೀಮಿತ ಎಂಬಂತೆ ಕೆಲಸ ನಿರ್ವಹಿಸುತ್ತಿರುವುದು ಖೇದಕರ ಸಂಗತಿ. ಜಾನುವಾರು ರಕ್ತ ತಪಾಸಣೆ ಕೇಂದ್ರ, ಆಂಬುಲೆನ್ಸ್ ಸೇವೆ, ಉತ್ತಮ ಗುಣಮಟ್ಟದ ಔಷಧ, 24/7 ಉಚಿತ ಸೇವೆ, ಔಷಧ ಸಂಗ್ರಹ, ಸಮರ್ಪಕ ಸಿಬ್ಬಂದಿ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು.

    ಮೇಲಧಿಕಾರಿಗಳು, ಶಾಸಕರು ಇತ್ತ ಗಮನ ಹರಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯದಿದ್ದರೆ ಕರವೇ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಲ್ಲಪ್ಪ ಗೋಣಿ, ಕಿರಣ ಬೆಳಗಾವಿಮಠ, ಸೋಮು ತೋಟಗಿ, ಅನಿಲ ದೊಡವಾಡ, ಶಿವಾನಂದ ಕುರಬೇಟ, ಮಹಾಂತೇಶ ಕರೀಕಟ್ಟಿ, ಬಸವರಾಜ ಮಾಡಮಗೇರಿ, ಈರಣ್ಣ ಮುನವಳ್ಳಿ, ಶೋಯೆಬ್ ಬಾಗೇವಾಡಿ, ಸಂತೋಷ ಬಡಸದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts