More

    ಚರ್ಮಗಂಟು ಕಾಯಿಲೆಗೆ ಚಿಕಿತ್ಸೆ ನೀಡಿ

    ಮುಂಡರಗಿ: ಚರ್ಮಗಂಟು ಕಾಯಿಲೆಯಿಂದ ಬಳಲುತ್ತಿರುವ ದನ-ಕರುಗಳಿಗೆ ಸೂಕ್ತ ಔಷಧೋಪಚಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ರೈತರು ಚರ್ಮಗಂಟು ಕಾಯಿಲೆಯಿಂದ ಬಳಲುತ್ತಿರುವ ಎತ್ತುಗಳೊಂದಿಗೆ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಇದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ದನ-ಕರುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು ತೀವ್ರ ತೊಂದರೆ ಅನುಭವಿಸುತ್ತಿವೆ. ಇದರಿಂದ ರೈತರು ಸಹ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಮತ್ತು ಪಶು ಸಂಗೋಪನ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸರ್ಕಾರ ಚಿಕಿತ್ಸೆಗಾಗಿ ರೈತರಿಗೆ 25 ಸಾವಿರ ರೂ. ತುರ್ತು ಪರಿಹಾರ ನೀಡಬೇಕು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಈ ಕಾಯಿಲೆ ಹರಡುತ್ತಿದ್ದು ಈ ಬಗ್ಗೆ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಎಎಪಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಸಂಯೋಜಕ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ಸತತ ಮೂರ್ನಾಲ್ಕು ತಿಂಗಳಿಂದ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ದನ ಕರುಗಳ ಆರೋಗ್ಯದಲ್ಲಿ ಏರುಪೇರಾಗಿದೆ. ದನ-ಕರುಗಳ ಈ ವಿಚಿತ್ರ ಕಾಯಿಲೆಯಿಂದ ರೈತರಲ್ಲಿ ಆತಂಕ ಮೂಡಿದೆ. ಎತ್ತುಗಳ ದೇಹದ ಮೇಲೆ ಗಡ್ಡೆಗಳಂತಾಗಿ ದೇಹದ ತುಂಬೆಲ್ಲ ಹರಡಿ ಮೈ ಎಲ್ಲ ತುರಿಕೆ ಪ್ರಾರಂಭವಾಗಿ ಜ್ವರ ಕಾಣಿಸಿಕೊಳ್ಳತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಔಷಧ ನೀಡಬೇಕು ಎಂದರು.

    ಸ್ಥಳಕ್ಕೆ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ತಾಲೂಕು ಪಶು ವೈದ್ಯಾಧಿಕಾರಿ ಎಸ್.ವಿ. ತಿಗರಿಮಠ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ ಎಂದರು. ರೈತರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಉಮೇಶ ಜೋಳದ, ಮುತ್ತು ಬಳ್ಳಾರಿ, ಕೋಟೆಪ್ಪ ಚಿಕ್ಕಣ್ಣವರ, ಬಸಪ್ಪ ಜೋಗಿನ, ಪರಸಪ್ಪ ಆರೇರ, ಮುತ್ತಪ್ಪ ಉಮಚಗಿ, ತಿರಕಪ್ಪ ಜೋಗಿನ, ಲಕ್ಷ್ಮಣ ಕುರಿ, ಸಿದ್ದಪ್ಪ ಹೂಗಾರ, ಕೊಟ್ರಪ್ಪ ಬಾಗಳಿ, ಶೇಖಪ್ಪ ಜೋಳದ, ಮಹಾಂತೇಶ ಚಿಂಚಲಿ, ಈರಪ್ಪ ಹಕ್ಕಂಡಿ, ಬೀರಪ್ಪ ಮಾದಣ್ಣವರ, ನಿಂಗಪ್ಪ ಚಿಕ್ಕಣ್ಣವರ, ಮರಿಯಪ್ಪ ಡೊಣ್ಣಿ, ಶರಣಪ್ಪ ಇಟಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts