More

    ಚಿರತೆ ಬಗ್ಗೆ ಸಿಲ್ಕಲ್‌ಪುರದಲ್ಲಿ ಜಾಗೃತಿ

    ಕೊಳ್ಳೇಗಾಲ: ತಾಲೂಕಿನ ಸಿಲ್ಕಲ್‌ಪುರ ಗ್ರಾಮದ ಬಳಿ ಕಳೆದ ನಾಲ್ಕೈದು ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅರಣ್ಯಾಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

    ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ನಂತರ, ಎಚ್ಚೆತ್ತ ಅರಣ್ಯ ಇಲಾಖೆ ಸೋಮವಾರ ಸಿಲ್ಕಲ್‌ಪುರ ಸಮೀಪದ ಚಾನೆಲ್ ರಸ್ತೆಯ ಸಮೀಪವಿರುವ ಜಮೀನೊಂದರಲ್ಲಿ ಬೋನ್ ಇರಿಸಿದೆ. ಮಂಗಳವಾರ ಗ್ರಾಮದಲ್ಲಿ ಇಲಾಖಾ ವಾಹನದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆ ಚಲನವಲನ ಇರುವುದರಿಂದ ತುರ್ತು ಪರಿಸ್ಥಿತಿ ಇದ್ದರೆ ಎಚ್ಚರಿಕೆಯಿಂದ ಸಂಚರಿಸಬೇಕು. ಎಲ್ಲಿಯಾದರೂ ಚಿರತೆ ಕಂಡರೆ ತಕ್ಷಣ ತಿಳಿಸುವಂತೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿದರು.

    ಸಿಲ್ಕಲ್‌ಪುರದಲ್ಲಿ ಚಿರತೆ ಹಿಡಿಯಲು ಬೋನು ಇರಿಸಿ, ಅದರ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದೆ. ಮುದುಮಲೆಗುಡ್ಡ ಸಮೀಪ ಚಿರತೆ ಕಾಣಿಸಿದೆ ಎಂಬ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗಿದೆ. ಆ ಸ್ಥಳದಲ್ಲೂ ಬೋನು ಅಳವಡಿಸಲು ಮುಂದಾಗಿದ್ದೇವೆ ಎಂದು ಅರಣ್ಯ ಇಲಾಖೆ ಡಿಆರ್‌ಎಫ್‌ಒ ದೀಪಕ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts