More

    ಗ್ರಾಮೀಣ ಭಾಗದಲ್ಲೇ ಸ್ವ ಉದ್ಯೋಗ ಕೈಗೊಳ್ಳಿ

    ಶಿರಸಿ: ಗ್ರಾಮೀಣ ಭಾಗದ ವಿದ್ಯಾವಂತರು ತರಬೇತಿ ಪಡೆದು ಗ್ರಾಮೀಣ ಭಾಗದಲ್ಲಿಯೇ ಸ್ವ ಉದ್ಯೋಗ ಕೈಗೊಳ್ಳುವಂತಾಗಬೇಕು ಎಂದು ಆಳ್ವಾ ಫೌಂಡೇಷನ್​ನ ಟ್ರಸ್ಟಿ ನಿವೇದಿತ್ ಆಳ್ವಾ ಹೇಳಿದರು.

    ತಾಲೂಕಿನ ಬೆಳಲೆಯ ಸಭಾಭವನದಲ್ಲಿ ಇತ್ತೀಚೆಗೆ ಆಳ್ವಾ ಫೌಂಡೇಷನ್ ಪ್ರಾಯೊಜಕತ್ವ ಹಾಗೂ ಅರುಣೋದಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರುದ್ಯೋಗಿ ಯುವತಿಯರು ಮತ್ತು ಮಹಿಳೆಯರಿಗಾಗಿ ಜೀವನಕೌಶಲ ಮತ್ತು ವೃತ್ತಿ ತರಬೇತಿ ನೀಡುವ ಸ್ವಾವಲಂಬಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಯುವತಿಯರು ಮತ್ತು ಮಹಿಳೆಯರು ವೃತ್ತಿ ತರಬೇತಿಗಾಗಿ ದೂರದ ನಗರಗಳಿಗೆ ಅಲೆದಾಟ ಮತ್ತು ಪರದಾಟ ಮಾಡುವುದು ತಪ್ಪಿಸಲು ಅವರಿರುವಲ್ಲಿಯೇ ಸ್ವಾವಲಂಬಿ ಕಾರ್ಯಕ್ರಮದ ತರಬೇತಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ ಮಾತನಾಡಿ, ಇಂದಿನ ದಿನಗಳಲ್ಲಿ ಜೀವನ ನಿರ್ವಹಣೆಯು ಅನೇಕ ಒತ್ತಡಗಳಿಂದ ಕೂಡಿದೆ. ದುಡಿಯುವ ಕೈಗಳು ಹೆಚ್ಚಾಗುವುದರಿಂದ ಮಾತ್ರ ಸಂಸಾರವನ್ನು ಸರಿದೂಗಿಸಿ ಒತ್ತಡಗಳಿಂದ ಹೊರಬರಬಹುದಾಗಿದ್ದು, ಯುವತಿಯರು ಮತ್ತು ಮಹಿಳೆಯರು ಇಂತಹ ತರಬೇತಿಗಳಲ್ಲಿ ಪಾಲ್ಗೊಂಡು ಸ್ವ ಉದ್ಯೋಗಿಗಳಾಗುವುದು ಅತ್ಯವಶ್ಯಕ ಎಂದು ಹೇಳಿದರು.

    ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ವಿನಾಯಕ ಭಟ್ಟ, ಅರುಣೋದಯ ಸಂಸ್ಥೆಯ ವ್ಯವಸ್ಥಾಪಕ ಸತೀಶ ನಾಯ್ಕ, ಸಾಮಾಜಿಕ ಕಾರ್ಯಕರ್ತ ಎಲ್.ಎಂ. ಹೆಗಡೆ, ಸಂಪನ್ಮೂಲ ವ್ಯಕ್ತಿ ಸವಿತಾ ಮುಂಡೂರ ಮುಂತಾದವರು ಉಪಸ್ಥಿತರಿದ್ದರು.

    ಬೆಳಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಅಧ್ಯಕ್ಷೆ ಗೌರಿ ಗೌಡ ವಂದಿಸಿದರು. ತರಬೇತಿಯಲ್ಲಿ 47 ಶಾಲೆಬಿಟ್ಟ ಕಿಶೋರಿಯರು ಮತ್ತು ಮಹಿಳೆಯರು ತರಬೇತಿಯ ಉಪಯೋಗ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts