More

    ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿ

    ಮುಂಡರಗಿ: ಇಂದಿನ ಗ್ರಾಮಗಳಲ್ಲಿ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನವಾಗಬೇಕಾದರೆ ನಾಯಕತ್ವ ಪಾತ್ರ ಮುಖ್ಯ. ಸ್ವಯಂ ಸೇವಕರು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಹೇಳಿದರು.

    ಪಟ್ಟಣದ ಕೃಷಿ ಇಲಾಖೆ ಸಭಾ ಭವನದಲ್ಲಿ ರಿಲಯನ್ಸ್ ಫೌಂಡೇಶನ್​ನಿಂದ ತಾಲೂಕು ಮಟ್ಟದ ಸ್ವಯಂ ಸೇವಕರಿಗೆ ನಾಯಕತ್ವ ಕುರಿತು ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಪನ್ಮೂಲ ವ್ಯಕ್ತಿ ಮಂಜುನಾಥ ಮುಧೋಳ ಮಾತನಾಡಿ, ಗ್ರಾಮೀಣ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಉದಾರತೆ, ತಾಳ್ಮೆ, ಸಹನೆ ಹೊಂದಿರಬೇಕು. ಗ್ರಾಮ ಸಭೆ, ವಾರ್ಡ್ ಸಭೆ, ಜನವಸತಿ ಸಭೆಗಳಲ್ಲಿ ಇಂದಿನ ಯುವಕರು ಪಾಲ್ಗೊಳ್ಳಬೇಕು ಎಂದರು.

    ಅಮೂಲ್ಯ ಸಾಕ್ಷರತಾ ಕೇಂದ್ರದ ಸಮಾಲೋಚಕ ಸಂದೀಪ ಕಟ್ಟಿ, ರಿಲಯನ್ಸ್ ಸಂಯೋಜಕ ಮಾರುತಿ ಕೊಡ್ಲಿ, ಪುಷ್ಪಾ ಓದಿಸೋಮಠ ಮಾತನಾಡಿದರು. ಕೃಷಿ ಅಧಿಕಾರಿ ರವಿಕುಮಾರ ಹಾವನೂರ, ವೀರೇಶ ಸೊಪ್ಪಿನ, ಶಂಕರಗೌಡ ಪಾಟೀಲ, ಸುಷ್ಮಿತಾ ಹೆಬಸೂರ, ಮಂಜುಳಾ ಕೊರವರ ಉಪಸ್ಥಿತರಿದ್ದರು. ರಿಲಯನ್ಸ್ ಫೌಂಡೇಶನ್ ಸಿಆರ್​ಪಿ ರಾಕೇಶಗೌಡ ಕದಾಂಪೂರ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts