More

    ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿ

    ಅಫಜಲಪುರ: ನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಉಪಯೋಗವಾಗುವಂತಹ ಕೆಲಸಗಳನ್ನು ಹೆಚ್ಚಾಗಿ ಮಾಡಬೇಕು. ಪ್ರತಿ ಗ್ರಾಮಗಳಲ್ಲಿ ಜನರಿಗೆ ಸ್ವಚ್ಛತೆ ಮತ್ತು ಶೌಚಗೃಹ ಬಳಕೆಯ ಅರಿವು ಮೂಡಿಸಬೇಕು. ಆಡಳಿತಾಧಿಕಾರಿಗಳು ಗ್ರಾಪಂಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಸೂಚನೆ ನೀಡಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಡಳಿತಧಿಕಾರಿಗಳು, ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಹಳ್ಳಿಗಳಲ್ಲಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಂಗನವಾಡಿ ಕಟ್ಟಡ ಇಲ್ಲದಿರುವ ಗ್ರಾಮಗಳನ್ನು ಪಟ್ಟಿ ಮಾಡಿ ಕೊಡಿ. ಪಿಡಿಒಗಳು ಪ್ರತಿ ಗ್ರಾಮಗಳಲ್ಲಿ ದನದ ಕೊಟ್ಟಿಗೆಗಳ ನಿಮರ್ಾಣ ಮಾಡಿ, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
    ತಾಪಂ ಇಒ ಅಬ್ದುಲ್ ನಬಿ ಮಾತನಾಡಿ, ನರೇಗಾ ಯೋಜನೆಯಡಿ ಬಾಕಿಯಿರುವ ಕೆಲಸಗಳ ಬಗ್ಗೆ ವರದಿ ನೀಡಿ, ನಾನು ಸಿಇಒ ಅವರಿಂದ ಅನುಮೋದನೆ ತೆಗೆದುಕೊಳ್ಳುತ್ತೇನೆ. ನೀರಿನ ವ್ಯವಸ್ಥೆಯಿಲ್ಲದ ಶಾಲೆ ಮತ್ತು ಅಂಗನವಾಡಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸಭೆಗೆ ಹಾಜರಾಗದ ಹಾಗೂ ಕೆಲಸ ಮಾಡದ ಕಂಪ್ಯೂಟರ್ ಆಪರೇಟರ್ಗಳ ಸಂಬಳ ತಡೆ ಹಿಡಿಯಲಾಗುತ್ತದೆ ಎಂದು ಎಚ್ಚರಿಸಿದರು.
    ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಗ್ರಾಪಂ ಆಡಳಿತಧಿಕಾರಿಗಳಾದ ಡಾ.ಎಂ.ಎಸ್.ಗಂಗನಳ್ಳಿ, ಚಿತ್ರಶೇಖರ ದೇಗಲಮಡಿ, ನರೇಗಾ ಎಡಿ ರಮೇಶ ಪಾಟೀಲ್, ಶರಣಪ್ಪ ಡೆಂಗಿ, ಧರ್ಮಣ್ಣ ಯಾಳ್ವಾರ, ಸಿದ್ದರಾಮ ಬಬಲೇಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts