More

    ಗ್ರಾಪಂ ಅವ್ಯವಸ್ಥೆ ವಿರುದ್ಧ ಅಹೋರಾತ್ರಿ ಧರಣಿ

    ಖಾನಾಪುರ: ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ್ದರೂ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿರುವ ಶಿರೋಲಿ ಗ್ರಾಪಂ ಅವ್ಯವಸ್ಥೆಯ ಆಡಳಿತದ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಎದುರು ಕುಟುಂಬವೊಂದು ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ 70ವರ್ಷದ ತಾಯಿ, ನಾಲ್ಕು ವರ್ಷದ ಮಗಳು ಹಾಗೂ ಪತ್ನಿಯೊಂದಿಗೆ ಸುಶೀಲ ಕುಮಾರ ದೇಸಾಯಿ ಆರಂಭಿಸಿದ ಆಂದೋಲನ ಗ್ರಾಮ ಪಂಚಾಯಿತಿಯನ್ನು ಮುನ್ನೆಲೆಗೆ ತಂದಿದೆ. ಸುಶೀಲ ದೇಸಾಯಿ ಅವರ ಸಹೋದರ ಬಾಮನವಾಡ- ಶಿರೋಲಿಯಲ್ಲಿ ಹೊಸ ಜಾಗ ಪಡೆದಿದ್ದಾರೆ.

    ಈ ಜಾಗದಲ್ಲಿ 2006ರಲ್ಲಿ ಸೇನೆಯಲ್ಲಿರುವ ಸಹೋದರನ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆದು ಮನೆ ನಿರ್ಮಿಸಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಯ ನಿರ್ಮಾಣ ಶುಲ್ಕ, ಆಸ್ತಿ ತೆರಿಗೆ ಪಾವತಿಸಲಾಗಿದೆ.ಇತರ ಕಾಮಗಾರಿಗಳಿಗೆ ಅಗತ್ಯವಿರುವ ಗ್ರಾಪಂನ ನಿರಾಕ್ಷೇಪಣಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇನ್ನೂ ಪತ್ರ ನೀಡಿಲ್ಲ. ಸಮಸ್ಯೆ ಕುರಿತು ಶಿರೋಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗಮನಕ್ಕೆ ತರಲಾಗಿತ್ತು, . ಆದರೆ ಪ್ರಯೋಜನವಾಗಲಿಲ್ಲ. ಕೊನೆಗೂ ಜ.26ರ ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸುಶೀಲ ಕುಮಾರ ಕುಟುಂಬ ಸಮೇತರಾಗಿ ಧರಣಿ ಆರಂಭಿಸಿದ್ದಾರೆ. ಕೊರೆಯುವ ಚಳಿಯಲ್ಲೂ ಇಡೀ ಕುಟುಂಬ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts