More

    ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಹಕಾರಿ ಶಾಖೆ ವಿಸ್ತರಣೆ

    ಬೋರಗಾಂವ ಬೆಳಗಾವಿ: ಅರಿಹಂತ ಸಹಕಾರಿ ಸಂಸ್ಥೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿ ಒಟ್ಟು 48 ಶಾಖೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಗೋವಾ, ಮಹಾರಾಷ್ಟ್ರದಲ್ಲಿಯೂ ನೂತನ ಶಾಖೆ ಪ್ರಾರಂಭಿಸಲಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಸಹಕಾರಿ ರತ್ನ ರಾವಸಾಹೇಬ ಪಾಟೀಲ ತಿಳಿಸಿದರು.

    ಇಲ್ಲಿನ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 32ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಹಣಕಾಸಿನ ಸಾಲಿನಲ್ಲಿ 25 ಗ್ರಾಮಗಳಲ್ಲೂ ಶಾಖೆಗಳನ್ನು ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು. 1990ನೇ ಸಾಲಿನಲ್ಲಿ ಪ್ರಾರಂಭಿಸಿದ ಅರಿಹಂತ ಸಂಸ್ಥೆ 12,703 ಸದಸ್ಯರನ್ನು ಹೊಂದಿ, 4.54 ಕೋಟಿ ರೂ. ಷೇರು ಬಂಡವಾಳ, 56.58 ಕೋಟಿ ರೂ. ನಿಧಿಯೊಂದಿಗೆ 1,024.14 ಕೋಟಿ ರೂ. ಠೇವು ಸಂಗ್ರಹಿಸಿದೆ. 794.85 ಕೋಟಿ ರೂ. ಸಾಲ ವಿತರಿಸಿ, 19.18 ಕೋಟಿ ರೂ. ಗುಂತಾವಣೆ ಮಾಡಿ, ಒಟ್ಟು 8.52 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು. ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಅರಿಹಂತ ಸಂಸ್ಥೆಯೂ ಸಹಕಾರ ಕ್ಷೇತ್ರದ ಜತೆಗೆ ಸಾಮಾಜಿಕ, ಧಾರ್ಮಿಕ, ಸಂಸ್ಕೃತಿಕ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿದೆ. ಸದಸ್ಯರ ಅಭಿವೃದ್ಧಿಗೆ ವಿವಿಧ ಠೇವು ಹಾಗೂ ಸಾಲ ಯೋಜನೆ ರೂಪಿಸುತ್ತಿದೆ ಎಂದರು. ಅಕ್ಕೋಳ ಶಾಖೆಗೆ ಅತ್ಯುತ್ತಮ ಶಾಖೆ, ರಾಜೇಂದ್ರ ಬನ್ನೆಗೆ ಅತ್ತ್ಯುತ್ತಮ ವ್ಯವಸ್ಥಾಪಕ, ಸುನೀಲ ಮಿಲಗಿರೆ ಹಾಗೂ ಶಾಂತಿನಾಥ ಬೇಡಕಿಹಾಳೆ ಅವರಿಗೆ ಆದರ್ಶ ಸಿಬ್ಬಂದಿ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

    ಪ್ರಧಾನ ವ್ಯವಸ್ಥಾಪಕ ಅಶೋಕ ಬಂಕಾಪುರೆ ವಾರ್ಷಿಕ ವರದಿ ವಾಚಿಸಿದರು. ಆರ್.ಎಸ್.ಪಚಂಡಿ, ಅಭಯಕುಮಾರ ಮಗದುಮ್ಮ, ಮಾಜಿ ಶಾಸಕ ಸುಭಾಷ ಜೋಶಿ, ಉದ್ಯಮಿ ಅಭಿನಂದನ ಪಾಟೀಲ, ಮೀನಾಕ್ಷಿ ಪಾಟೀಲ, ಸುಜಯ ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಶೆಟ್ಟಿ, ಶರದಚಂದ ಪಾಠಕ, ಮಲಕಾರಿ ತೇರದಾಳೆ, ರಾಜು ಪಾಟೀಲ, ಚೇತನ ಸ್ವಾಮಿ, ಅಮೋಲ ನಾಯಿಕ್, ದಿಲೀಪ ಪಠಾಡೆ, ಕುಮಾರ ಪಾಟೀಲ, ನಿರಂಜನ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts