More

    ಗೋವಾಕ್ಕೆ ಗುಳೆ ಹೊರಟ ವಿದ್ಯಾರ್ಥಿನಿ

    ಲಕ್ಷ್ಮೇಶ್ವರ: ತಾಲೂಕಿನ ಆದರಳ್ಳಿ ತಾಂಡಾದ ಸಂಗೀತಾ ಲಮಾಣಿ ಎಂಬ ವಿದ್ಯಾರ್ಥಿನಿ ಬಡತನ, ಹಣಕಾಸಿನ ತೊಂದರೆಯಿಂದ ಉನ್ನತ ವ್ಯಾಸಂಗ ಮಾಡಲಾಗದೇ ತಾಯಿಯೊಂದಿಗೆ ಗೋವಾಗೆ ಗುಳೆ ಹೋಗುವ ನಿರ್ಧಾರ ಕೈಗೊಂಡಿದ್ದಾಳೆ.

    ವಿದ್ಯಾರ್ಥಿನಿ ಸಂಗೀತಾ ಪಿಯುಸಿ (ಕಲಾ)ಯಲ್ಲಿ ಶೇ.90.66 ರಷ್ಟು ಅಂಕಗಳನ್ನು ಗಳಿಸಿದ್ದರೂ ಪದವಿ ಓದಲು ಹಣಕಾಸಿನ ಮುಗ್ಗಟ್ಟಿನಿಂದ ತಾಯಿಯೊಂದಿಗೆ ಗೋವಾಕ್ಕೆ ದುಡಿಯಲು ತೆರಳುತ್ತಿರುವುದು ಗ್ರಾಮೀಣ ವಿದ್ಯಾರ್ಥಿನಿ ಗುಳೆ ಹೋಗಲು ಕಾರಣ.

    ಸಂಗೀತಾಳದ್ದು ಬಡ ಕುಟುಂಬ. ತಂದೆ ಇಲ್ಲ. ತಾಯಿ, ಮೂವರು ಅಕ್ಕಂದಿರು, ಒಬ್ಬ ತಮ್ಮನಿದ್ದಾನೆ. ತಾಯಿ ಕೂಲಿ ಮಾಡಿ ಮಕ್ಕಳನ್ನು ಓದಿಸಿ ಮೂವರು ಮಕ್ಕಳ ಮದುವೆ ಮಾಡಿದ್ದಾರೆ. ಕಿರಿಯ ಮಗಳು ಸಂಗೀತಾ ಟ್ಯೂಷನ್ ಇಲ್ಲದೆ ಮನೆಯಲ್ಲಿಯೇ ಓದಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಾಳೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿನಿಯ ಉನ್ನತ ಶಿಕ್ಷಣಕ್ಕೆ ಶಿಕ್ಷಣಪ್ರೇಮಿಗಳು ಸಹಾಯ ಹಸ್ತ ನೀಡಿದರೆ ಉನ್ನತ ವ್ಯಾಸಂಗ ಮಾಡಲು ಅನುವಾಗುತ್ತದೆ ಎಂಬುದು ಅವರ ಅಪೇಕ್ಷೆಯಾಗಿದೆ.

    ಸಂಗೀತಾ ಓದಿನಲ್ಲಿ ಮುಂದಿದ್ದಾಳೆ. ಇದುವರೆಗೂ ಕೂಲಿ ಕೆಲಸದಿಂದಲೇ ಕುಟುಂಬ ನಿರ್ವಹಣೆ, ಮಕ್ಕಳಿಗೆ ಶಿಕ್ಷಣ, ಮದುವೆ ಮಾಡಿ ಸುಸ್ತಾಗಿದ್ದೇನೆ. ಈ ನಡುವೆ ಅವಳ ಪದವಿ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವದು ಕಷ್ಟ. ಆದಾಗ್ಯೂ ನಾನು ದುಡಿಯಲು ಸಿದ್ಧನಿದ್ದೇನೆ. | ಚಂದ್ರವ್ವ ಲಮಾಣಿ ಸಂಗೀತಾಳ ತಾಯಿ

    ಬಡತನದಲ್ಲಿಯೇ ಬೆಳೆದಿದ್ದೇನೆ, ತಾಯಿಯೊಂದಿಗೆ ಕೂಲಿ ಕೆಲಸ ಮಾಡುವ ಜತೆಗೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ತೃಪ್ತಿ ಇದೆ. ಪದವಿ ಪಡೆದು ಪೊಲೀಸ್ ಅಧಿಕಾರಿ ಆಗಬೇಕು. ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿದ್ದು ಜನ ಸೇವೆ ಮಾಡುವ ಆಸೆ ಇದೆ. ಆದರೆ, ತಾಯಿಯೊಬ್ಬಳ ಕೂಲಿಯಿಂದ ಇದು ಸಾಧ್ಯವಾಗುವುದೆ ಎಂಬ ಪ್ರಶ್ನೆ ಕಾಡುತ್ತಿದೆ. | ಸಂಗೀತಾ ಲಮಾಣಿ ಗೋವಾಗೆ ಗುಳೆ ಹೊರಟ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts