More

    ಗುಲಾಬಿ ಕೊಟ್ಟು ಪ್ರಾಣ ರಕ್ಷಣೆ ಪಾಠ

    ಚಿತ್ರದುರ್ಗ: ಮೋಟಾರು ದ್ವಿಚಕ್ರ ವಾಹನ ಸವಾರಿ ವೇಳೆ ಕಡ್ಡಾಯವಾಗಿ ಹೆಲ್ಟೆಟ್ ಧರಿಸುವಂತೆ ಸವಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾ ನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಬುಧವಾರ ಬೈಕ್ ಜಾಥಾ ನಡೆಸಿದರು. ಹೆಲ್ಮೆಟ್ ಧರಿ ಸದ ಸವಾರರಿಗೆ ಗುಲಾಬಿ ಕೊಟ್ಟು ಪ್ರಾಣ ಸುರಕ್ಷತೆಯ ಪಾಠಹೇಳಿದರು. ಮುಂದೆ ಇದೇ ರೀತಿ ಸವಾರಿ ಮುಂದುವರಿಸಿದರೆ ದಂಡ, ವಾಹನ ಚಾಲನಾ ಪರವಾನಗಿ ರದ್ದಿನಂಥ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
    ಅಧಿಕಾರಿ-ಸಿಬ್ಬಂದಿ ಸಹಿತ ನಲ್ವತ್ತಕ್ಕೂ ಹೆಚ್ಚಿದ್ದ ಜಾಥಾಕ್ಕೆ ಗಾಂಧಿ ಸರ್ಕಲ್‌ನಲ್ಲಿ ಡಿವೈಎಸ್ಪಿ ಎಸ್.ಪಾಂಡುರಂಗ ಚಾಲನೆ ನೀಡಿದರು. ಡಿಸಿ ಕಚೇರಿ,ತುರುವನೂರು ರಸ್ತೆ, ಜೆಸಿಆರ್ ಬಡಾವಣೆ, ಅಂಬೇಡ್ಕರ್ ವೃತ್ತದಿಂದ ಮೊದಲಾದ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಮರಳಿ ಗಾಂ ಧಿ ಸರ್ಕಲ್‌ನಲ್ಲಿ ಸಮಾಪನಗೊಂಡಿತು.

    ಇಂಥ ಜಾಥಾಗಳ ಮೂಲಕ ಒಂದೆರೆಡು ಬಾರಿ ಬೈಕ್,ಸ್ಕೂಟರ್ ಇತ್ಯಾದಿ ದ್ವಿಚಕ್ರ ವಾಹನ ಸವಾರರನ್ನು ಎಚ್ಚರಿಸವ ಕೆಲಸವನ್ನು ಇಲಾ ಖೆ ಮಾಡಲಿದೆ. ಬಳಿಕ ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸಲಾಗುವುದೆಂದು ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮದ್ ತಿಳಿಸಿದರು. ಕೋಟೆ ಸಿಪಿಐ ಪ್ರಕಾಶ್,ಟ್ರಾಫಿಕ್ ಪಿಎಸ್‌ಐ ರಘು,ಕೋಟೆ ಪಿಎಸ್‌ಐ ರುಕ್ಕಮ್ಮ, ಬಡಾವಣೆ ಠಾಣೆ ಪಿಎಸ್‌ಐ ಗೀತಾ ಮತ್ತಿತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts