More

    ಗುರುಗಳ ಸ್ಮರಣೆ ಶ್ರೇಷ್ಠ ಕಾರ್ಯ

    ತೆಲಸಂಗ ಬೆಳಗಾವಿ: ಜೀವನದ ಕೊನೆವರೆಗೆ ಕೈಹಿಡಿದು ಮುನ್ನಡೆಸುವ ಶಿಕ್ಷಣ ನೀಡಿದ ಗುರುಗಳನ್ನು ಸ್ಮರಿಸುವುದು ಶ್ರೇಷ್ಠ ಕಾರ್ಯ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

    ಗ್ರಾಮದ ಬಿವಿವಿ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ 2008-09ನೇ ಸಾಲಿನ ವಿದ್ಯಾರ್ಥಿಗಳು ಹಿರೇಮಠದಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ವಾತನಾಡಿ, ಜೀವನದಲ್ಲಿ ಗುರಿಯಿದ್ದು, ಗುರುವಿನ ಆಶೀರ್ವಾದ ಇದ್ದರೆ, ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಅಕ್ಷರ ಕಲಿಸಿದ ಗುರುಗಳು, ತಂದೆ-ತಾಯಿ, ಭೂಮಿ ಋಣ ತೀರಿಸುವುದು ಸುಲಭವಲ್ಲ ಎಂದರು. ಬಿಇಒ ಬಿ.ಎಸ್. ತಳವಾರ ಮಾತನಾಡಿ, ಶಿಕ್ಷಕರು ದೇವರ ಸ್ವರೂಪಿಯಾಗಿದ್ದು, ಬದುಕಿಗೆ ನಂದಲಾರದ ದೀಪ ಬೆಳಗಿಸುತ್ತಾರೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ಶಿಕ್ಷಣ ನೀಡುವ ಶಿಕ್ಷಕ ಸ್ಥಾನದ ಗೌರವ ಕಾಪಾಡಿ ಎಂದರು. ಉಪವಿಭಾಗಾಧಿಕಾರಿ ಮಲಗೌಡ ಝರೆೆ ಮಾತನಾಡಿ, ಇತರ ಕಾರಣಗಳಿಂದ ಹಳ್ಳಿ ಬಿಟ್ಟು ಬೇರೆಡೆಗೆ ಹೋಗಿ ಪಾಲಕರು, ಕಲಿಸಿದ ಗುರುಗಳನ್ನು ಸ್ಮರಿಸಲಾಗದ ಸ್ಥಿತಿಗೆ ಇಂದಿನ ಯುವಕರು ತಲುಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಲಿಸಿದ ಗುರುಗಳನ್ನು ಸ್ಮರಿಸುವ ಕಾರ್ಯ ಅದ್ಭುತವಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ ಸುಭಾಷ ರೋಡಗಿ, ಚನ್ನಪ್ಪ ದಶಮಾ, ಮಹಾಂತೇಶ ಅವಟಿ, ಮಹೇಶ ಕುಂಬಾರ ಸೇರಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುರೇಶ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts