More

    ಗುರುಗಳ ಮಾತು ಪ್ರಗತಿಗೆ ದಾರಿ ದೀಪ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಮನೆಯ ಕತ್ತಲೆ ಕಳೆಯಲು ದೀಪದ ಅಗತ್ಯವಿರುವಂತೆ, ಮನಸ್ಸಿನ ಕತ್ತಲು ದೂರವಾಗಲು ಗುರು ಕರುಣಿಸುವ ಜ್ಞಾನವೆಂಬ ಬೆಳಕಿನ ಅವಶ್ಯವಿದೆ ಎಂದು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
    ನಗರದ ಸದ್ಗುರು ಕಬೀರಾನಂದಾಶ್ರಮದ 94ನೇ ಮಹಾಶಿವರಾತ್ರಿ ಮಹೋತ್ಸವದ 4ನೇ ದಿನ ಗುರುವಾರದ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರುಗಳ ಮಾತನ್ನು ದಾರಿ ದೀಪ ಮಾಡಿಕೊಂಡರೆ ಪ್ರಗತಿ ಸಾಧ್ಯವಿದೆ ಎಂದರು.
    ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾಮಠದ ಶ್ರೀ ಮಂಗಳನಾಥ ಸ್ವಾಮೀಜಿ ಮಾತನಾಡಿ, ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಧರ್ಮ ಕಾರ್ಯಗಳನ್ನು ಮಾಡಬೇಕಿದೆ. ಲೌಕಿಕ ಪ್ರಪಂಚದ ಸುಖಗಳು ನೀಡುವ ಆನಂದ ಕ್ಷಣಿಕವಾಗಿದ್ದು, ಪರಮಾತ್ಮನನ್ನು ಧ್ಯಾನಿಸುವುದರ ಮೂಲಕ ಮುಕ್ತಿ ಪಡೆಯಬೇಕಿದೆ ಎಂದು ಹೇಳಿದರು.
    ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದು ಯಾವುದು ಇಲ್ಲ. ಅಧಾತ್ಮಿಕ ಜ್ಞಾನವನ್ನು ಗುರುವಿನ ಮೂಲಕ ಪಡೆಯಬೇಕಿದೆ. ಭಗವಂತ ನಮಗೆ ಕೊಟ್ಟಿರುವ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಹಿರಿಯರ ಮಾತನ್ನು ಕೇಳಬೇಕು ಎಂದರು.
    ಹೊಸದುರ್ಗ ಉಪ್ಪಾರ ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಆತ್ಮಜ್ಞಾನವೇ ಭಗವಂತ ಆಗಿದ್ದು, ಪುಣ್ಯದಿಂದ ದೊರೆಯುವ ಮಾನವ ಜನ್ಮವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳ ಬೇಕಿದೆ. ಉತ್ತಮ ಸಂಸ್ಕಾರದೊಂದಿಗೆ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.
    ಉತ್ಸವ ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜ, ಡಾ.ಶ್ರೀಧರ್‌ಮೂರ್ತಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಖಾ, ಕುಡಾ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ನಗರಸಭಾ ಸದಸ್ಯೆ ಪೂಜಾ, ಮದಕರಿ ಗ್ರಾಪಂ ಸದಸ್ಯ ರಂಜಿತ್, ವಿಜಯಕುಮಾರ್, ಸಿದ್ದವ್ವನಹಳ್ಳಿ ಪರಮೇಶ್ ಮತ್ತಿತರರು ಇದ್ದರು. ವಕೀಲ ಪ್ರತಾಪ್ ಜೋಗಿ ಸ್ವಾಗತಿಸಿದರು, ಶ್ರೀಕಾಂತ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts