More

    ಗುರುಗಳು ಜ್ಞಾನವೆಂಬ ಬೆಳಕಿದ್ದಂತೆ

    ಚಿಕ್ಕಮಗಳೂರು: ಇತಿಹಾಸವನ್ನು ಸೃಷ್ಟಿಸುವ ಶಕ್ತಿ, ಸಾಮರ್ಥ್ಯ ಗುರು ಎನ್ನುವ ಎರಡಕ್ಷರಕ್ಕಿದೆ. ಹಾಗೆಯೇ ಅಜ್ಞಾನವೆಂಬ ಕತ್ತಲನ್ನು ದೂರವಾಗಿಸಲು ಜ್ಞಾನದ ಬೆಳಕು ಕೊಡುವ ಗುರು ಬೇಕೇ ಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

    ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕಲ್ಲು ಶಿಲ್ಪಿ ಕೈಗೆ ಸಿಕ್ಕರೆ ಶಿಲ್ಪವಾಗುತ್ತದೆ. ಅದರಂತೆ ಉತ್ತಮ ಗುರುವಿನ ಕೈಗೆ ಸಿಕ್ಕಿದ ಮಕ್ಕಳೂ ಇತಿಹಾಸ ಸೃಷ್ಟಿಸುವ ವ್ಯಕ್ತಿಗಳಾಗುತ್ತಾರೆ. ವೈದ್ಯ ರೋಗಕ್ಕೆ ಚಿಕಿತ್ಸೆ ನೀಡಬಹುದು. ಔಷಧ ಕಂಡುಹಿಡಿಯಬಹುದು. ವಿಜ್ಞಾನಿ ಹೊಸ ಸಂಶೋಧನೆ ಮಾಡಬಹುದು. ರಾಜಕಾರಣಿ ಜನ ನೆನಪಿನಡುವ ಕೆಲಸ ಮಾಡಬಹುದು. ಆದರೆ ಇವೆರೆಲ್ಲರನ್ನು ಸೃಷ್ಟಿಸುವ ಸಾಮರ್ಥ್ಯ ಇರುವುದು ಗುರುವಿಗೆ ಮಾತ್ರ ಎಂದರು.

    ಭಾರತದ ಸನಾತನ ಸಂಸ್ಕೃತಿಯು ಪ್ರಾರ್ಥನೆಯಲ್ಲಿ ದೇವರೆ ನನಗೆ ಒಳಿತು ಮಾಡು ಎನ್ನುವುದನ್ನು ಮಾತ್ರ ಕಲಿಸಲಿಲ್ಲ. ಸರ್ವೆಜನೋ ಸುಖಿನೋಭವಂತೂ ಎಂದು ಜಗತ್ತಿನ ಎಲ್ಲ ಜನ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳು ಸುಖವಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ನೈತಿಕ ಮೌಲ್ಯಗಳನ್ನು ಆಧರಿಸಿದ, ಆಧುನಿಕ ಸವಾಲುಗಳನ್ನು ವಿಜ್ಞಾನ, ತಂತ್ರಜ್ಞಾನದ ಮೂಲಕ ಎದುರಿಸುವ, ಸಮಾಜದ ಹಿತದಲ್ಲಿ ಸಂತೃಪ್ತಿ ಪಡೆಯುವ, ಜಾತಿಯತೆ, ಅಸ್ಪೃಶ್ಯತೆಯಿಂದ ಮುಕ್ತವಾಗಿರುವ ನವಸಮಾಜ ಶಿಕ್ಷಣದ ಮೂಲಕ ನಿರ್ವಣವಾದಾಗ ಅಮೃತ ಕಾಲವನ್ನು ಕಾಣಬಹುದು. ಅದನ್ನು ಕಾಣಲು ಎಲ್ಲ ಕ್ಷೇತ್ರಗಳಲ್ಲೂ ಗುರುವಿನ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ , ಪ್ರೌಢಶಾಲಾ ವಿಭಾಗಕ್ಕೆ ತಲಾ ಒಂದರಂತೆ ಜಿಲ್ಲೆಯ 8 ಶೈಕ್ಷಣಿಕ ಬ್ಲಾಕ್​ಗಳಿಂದ 24 ಶಿಕ್ಷಕರಿಗೆ 5 ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು. ಕೆ.ಎಂ.ರಸ್ತೆಯಿಂದ ಎಐಟಿ ಸಭಾಂಗಣದವರೆಗೂ ಡೊಳ್ಳು, ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನೆಡೆಸಿ ಶಿಕ್ಷಕ, ಶಿಕ್ಷಕಿಯರಾದಿಯಾಗಿ ನೃತ್ಯ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts