More

    ಗುಮ್ಮಟನಗರಿಯಲ್ಲಿ ಮಹಾತ್ಮರ ಸ್ಮರಣೆ

    ವಿಜಯಪುರ: ನಗರದ ವಿವಿಧ ಶಾಲೆ-ಕಾಲೇಜು, ಅನೇಕ ಸಂಘ-ಸಂಸ್ಥೆಗಳ ವತಿಯಿಂದ ಶಕ್ರವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ಬಹಾದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
    ಇಲ್ಲಿನ ಇಟ್ಟಂಗಿಹಾಳದ ಎಕ್ಸ್‌ಲಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬಸವ ಸೇವಾ ಪ್ರತಿಷ್ಠಾನ ಮತ್ತು ನೀಲಮ್ಮನ ಬಳಗದ ವತಿಯಿಂದ ನಡೆದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತ ನಿಲೇಶ ಬೇನಾಳ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ನೈತಿಕತೆಯ ಪ್ರತಿಬಿಂಬ, ಜಗತ್ತಿನ 184 ದೇಶಗಳು ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿವೆ ಎಂದರು.
    ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ರಕ್ತ ಪಿಪಾಸು ಜರ್ಮನಿ ದೇಶದ ಸರ್ವಾಧಿಕಾರಿ ಹಿಟ್ಲರ್ ಕೂಡ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ಧಾಂತಗಳಿಗೆ ತಲೆಬಾಗಿದವರು ಎಂದು ಸ್ಮರಿಸಿದರು.
    ನೀಲಮ್ಮನ ಬಳಗದ ವತಿಯಿಂದ ಸುಮಾ ಅಂಗಡಿ, ನೀತಾ ಸೂಳಿಭಾವಿ, ರಾಜೇಶ್ವರಿ ಮನಗೂಳಿ, ಗಂಗೂ ಕೊನ್ನ್ನೂರ, ಮಂಗಳಾ ಡೊಮನಾಳ, ಶಶಿಕಲಾ ಕೋಟಗಿ, ಆಡಳಿತಾಧಿಕಾರಿ ಸುನೀಲ ನಾವಲಗಿ, ಮುಖ್ಯಶಿಕ್ಷಕ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಮಕ್ಕಳು ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು.

    ಸತ್ಯ, ಅಹಿಂಸಾ ತತ್ವ ಪಾಲಿಸಿ

    ಇಲ್ಲಿನ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶಾಲೆ ಮುಖ್ಯಶಿಕ್ಷಕ ಎಂ.ಐ. ಬಿರಾದಾರ ಮಾತನಾಡಿ, ಗಾಂಧೀಜಿ ಹಾಗೂ ಶಾಸೀಜಿ ಅವರು ಭಾರತೀಯರ ಪಾಲಿಗೆ ಸದಾ ಆದರ್ಶಪ್ರಾಯರು. ಸಮಾಜದಲ್ಲಿ ಸಾಮರಸ್ಯ ಮೂಡಿಸಿ, ಸಹೋದರತೆ ಪ್ರೇರೇಪಿಸುವ ಮೂಲಕ ರಾಷ್ಟ್ರದಲ್ಲಿ ಏಕತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸಿದವರು. ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆ, ಶಾಸೀಜಿ ಅವರ ಪ್ರಾಮಾಣಿಕತೆ ಭಾರತೀಯರ ಪಾಲಿಗೆ ನಿತ್ಯ ಪೂಜ್ಯನೀಯವಾಗಿವೆ ಎಂದರು. ಎ.ಎನ್. ಕಂಬಾರ, ಸಿದ್ದಲಿಂಗಯ್ಯ ಹಿರೇಮಠ, ಶೋಭಾ ಹಿರೇಮಠ, ಕಲ್ಲಪ್ಪ ಹಡಪದ ಭಾಗವಹಿಸಿದ್ದರು.

    ಗಾಂಧೀಜಿ ಶಾಂತಿಯ ಸಂಕೇತ

    ನಗರದ ಸೈನಿಕ ಶಾಲೆಯಲ್ಲಿ ಗಾಂಧೀಜಿ ಅವರ ಜಯಂತಿ ಆಚರಿಸಲಾಯಿತು. ಶಾಲೆಯ ಪ್ರಾಚಾರ್ಯ, ಭಾರತಿಯ ನೌಕಾಪಡೆಯ ಕ್ಯಾಪ್ಟನ್ ವಿನಯ ತಿವಾರಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ಶಾಲೆಯ ಉಪ ಪ್ರಾಚಾರ್ಯ ಲೆಫ್ಟಿನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಮ್ ಸಿಂಗ್, ಮುಖ್ಯಶಿಕ್ಷಕ ಡಾ.ಸಿ. ರಾಮರಾವ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಗಾಂಧಿಮಾರ್ಗ ಅನುಸರಿಸಿ

    ಇಲ್ಲಿನ ಚೇತನಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಗಾಂಧೀಜಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಿ ಮಾತನಾಡಿದರು.
    ಸಂಸ್ಥೆ ಚೇರ್ಮನ್ ಡಾ.ದಯಾನಂದ ಜುಗತಿ ಮಾತನಾಡಿ, ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿ ಮೂಲಕ ಪ್ರಪಂಚದಾದ್ಯಂತ ಗಾಂಧೀಜಿ ಅವರು ಖ್ಯಾತಿಗಳಿಸಿದ್ದಾರೆ ಎಂದು ಸ್ಮರಿಸಿದರು.
    ಸಾಹಿತಿ ಪ್ರೊ.ಎ.ಎಚ್. ಕೊಳಮಲಿ, ಸಂಸ್ಥೆ ಉಪಾಧ್ಯಕ್ಷೆ ರಾಜಶ್ರೀ ಜುಗತಿ, ಕಾರ್ಯದರ್ಶಿ ಜಯಶ್ರೀ ಎಸ್ ಬುರ್ಲಿ, ನಿರ್ದೇಶಕ ಡಾ. ನಾಗರಾಜ ಹೇರಲಗಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

    ಯುವಜನತೆಗೆ ಮಾದರಿ

    ಇಲ್ಲಿನ ಶಿವಶರಣೆ ನಿಂಬೆಕ್ಕ ಪ್ರೌಢಶಾಲೆ ಹಾಗೂ ಡಿ.ಎಂ. ಕುಮಾನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗಾಂಧಿಜಯಂತಿ ಹಾಗೂ ಲಾಲ್‌ಬಹಾದೂರ್ ಶಾಸಿ ಜಯಂತಿ ಆಚರಿಸಲಾಯಿತು.
    ಶಿವಮೂರ್ತಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದರು. ಸಂಸ್ಥೆ ಅಧ್ಯಕ್ಷ ಎಸ್.ಡಿ. ಕುಮಾನಿ ಅಧ್ಯಕ್ಷತೆ ವಹಿಸಿದ್ದರು. ಅಪ್ಪಾಸಾಹೇಬ ಯರನಾಳ, ಎಸ್.ಎಂ. ಮಣಿಯಾರ, ಜಿ.ಕೆ. ಜಹಾಗೀರದಾರ, ಜೆ.ಎಂ. ಹೊನ್ನಳ್ಳಿ, ಬಿ.ಆರ್.ಲಾಳೆ, ಎಚ್.ಪಿ. ದೇಶಪಾಂಡೆ, ಬಿ.ಜೆ.ಗರೆಬಾಳ, ಎಸ್.ಎಂ.ಪಾಠಕ, ಪಿ.ಎಸ್. ಕುಮಾನಿ ಮತ್ತಿತರರಿದ್ದರು.

    ಅಪ್ಪಟ ದೇಶಪ್ರೇಮಿ

    ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ಬಹಾದೂರ್ ಶಾಸ್ತ್ರಿ ಅವರ ಜಯಂತಿ ಸರಳವಾಗಿ ಆಚರಿಸಲಾಯಿತು.
    ಪ್ರಾಚಾರ್ಯ ಡಾ.ಎಂ.ಎಸ್. ಹಿರೇಮಠ ಮಾತನಾಡಿದರು.
    ಡಾ. ಬಿ.ವೈ. ಖಾಸನಿಸ್, ಡಾ.ಎ.ವಿ. ಬಮಗೊಂಡ, ಡಾ.ಜೆ.ಎಸ್. ಪಟ್ಟಣಶೆಟ್ಟಿ, ಬಿ.ಎಸ್. ಹಿರೇಮಠ, ಪ್ರೊ.ಎಸ್.ಎಸ್. ಪಾಟೀಲ, ಪ್ರೊ.ಎಸ್.ಬಿ. ಕಂಬಾರ, ಪ್ರೊ.ಪಿ.ಡಿ. ಮುಲ್ತಾನಿ, ಪ್ರೊ.ಎ.ಎಸ್. ಮಸಳಿ, ಡಿ.ಎಸ್. ಪಾಟೀಲ, ತನುಜಾ ಪಾಟೀಲ ಮತ್ತಿತರರಿದ್ದರು.

    ಸ್ಕೌಟ್ಸ್, ಗೈಡ್ಸ್ ಕಚೇರಿಯಲ್ಲಿ

    ನಗರದ ಜಿಲ್ಲಾ ಸ್ಕೌಟ್ಸ್ , ಗೈಡ್ಸ್ ಕಾರ್ಯಾಲಯದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯಿತು.
    ಸ್ಕೌಟ್ಸ್ ಗೈಡ್ಸ್ ಉಪಾಧ್ಯಕ್ಷ ಜೆ.ಎಸ್.ಪೂಜಾರಿ ಮಾತನಾಡಿದರು. ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ, ಉಪಾಧ್ಯಕ್ಷೆ ನಿರ್ಮಲಾ ಕಲಶೆಟ್ಟಿ, ಡಾ.ಮಹಾನಂದ ಪಾಟೀಲ, ಎಸ್.ಎಲ್. ಇಂಗಳೆೇಶ್ವರ, ಪರಶುರಾಮ ಕುಂಬಾರ, ಶರಣು ಸಬರದ, ಎಸ್.ಎಸ್.ಬೊಮ್ಮನಹಳ್ಳಿ, ನಾಗೇಶ ಶಿವಪುರ, ರಾಜಶೇಖರ ಖೇಡಗಿ, ಗುಂಡಪ್ಪಗೌಡ ಪಾಟೀಲ, ಶರಣಪ್ಪ ಲಾಲನವರ, ಪ್ರೀತಿ ಕಾಳೆ, ಗಿರಿಗಾಂವಕರ, ಹಿರೆಕುರುಬರ ಮತ್ತಿತರರಿದ್ದರು.

    ಗುಮ್ಮಟನಗರಿಯಲ್ಲಿ ಮಹಾತ್ಮರ ಸ್ಮರಣೆ

    ಪರಿಸರ ಪ್ರೇಮ ಗಟ್ಟಿಗೊಳ್ಳಲಿ

    ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಸದೃಢ ದೇಶ ಕಟ್ಟಬೇಕೆಂದು ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ ಎಸ್. ಉಡುಪೀಕರ ಹೇಳಿದರು.
    ನಗರದ ವಿದ್ಯಾವರ್ಧಕ ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ಡಿ. ದರಬಾರ ಅಧ್ಯಕ್ಷತೆ ವಹಿಸಿದ್ದರು.
    ವಿದ್ಯಾವರ್ಧಕ ಸಂಘದ ಸಮನ್ವಯ ಅಧಿಕಾರಿ ಡಾ.ವಿ.ಬಿ. ಗ್ರಾಮಪುರೋಹಿತ ಮಾತನಾಡಿದರು. ನ್ಯಾಯವಾದಿ ಕೆ.ಬಿ. ಪಾಟೀಲ, ಆಡಳಿತ ಮಂಡಳಿ ಸದಸ್ಯ ರಾಕೇಶ ದರಬಾರ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಹಾಜರಿದ್ದರು.
    ಐದು ಕ್ವಿಂಟಾಲ್ ಪ್ಲಾಸ್ಟಿಕ್‌ನ್ನು ಸಂಗ್ರಹಿಸಿ, ಅದಕ್ಕೆ ಪ್ರತಿಯಾಗಿ 5 ಕ್ವಿಂಟಾಲ್ ಸಕ್ಕರೆಯನ್ನು ಹಂಚಲಾಯಿತು. ನಗರ ವಿವಿಧ ಬಡಾವಣೆಗಳಿಂದ ನಾಗರಿಕರು ಪ್ಲಾಸ್ಟಿಕ್ ನೀಡಿ ಸಕ್ಕರೆ ಪಡೆದುಕೊಂಡರು.

    ಮಹಾನೀಯರ ಕೊಡುಗೆ ಅಪಾರ

    ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ಗಾಂಧೀಜಿ ಅವರು ತಮ್ಮ ವಿಚಾರಧಾರೆಗಳಿಂದ ಇಡೀ ಜಗತ್ತಿಗೆ ಪರಿಮಳ ಹರಡಿದ್ದಾರೆ. ಗಾಂಧೀಜಿ ಮತ್ತು ಶಾಸೀಜಿ ಅವರ ಸರಳ ಜೀವನ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಂತವರ ಆದರ್ಶ ಹಾಗೂ ತತ್ವಗಳನ್ನು ಅನುಸರಿಸಬೇಕು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ನುಡಿದರು.
    ಪ್ರಾಚಾರ್ಯ ಶ್ರೀಧರ ಕುರಬೇಟ, ಶಿಕ್ಷಕಿಯರಾದ ಸವಿತಾ ಪಾಟೀಲ, ಭಾರತಿ ಪಾಟೀಲ, ದೈಹಿಕ ಶಿಕ್ಷಕ ಎ.ಎಚ್. ಸಗರ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಸಿದ್ದು ತೊರವಿ, ಅನೀಲ ಬಾಗೇವಾಡಿ ಮತ್ತಿತರರಿದ್ದರು.

    ಸರ್ವಶ್ರೇಷ್ಠ ಮಾನವತಾವಾದಿಗಳು

    ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸಿ ಅವರು ವಿಶ್ವಕಂಡ ಸರ್ವಶ್ರೇಷ್ಠ ಮಹಾನ್ ಮಾನವತಾವಾದಿಗಳು ಎಂದು ಸಾಹಿತಿ ವಿ.ಸಿ.ನಾಗಠಾಣ ಹೇಳಿದರು.
    ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಭಾರತ ಯುವ ವೇದಿಕೆ ಚಾರಿಟಬಲ್ ೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ-ಲಾಲ್ ಬಹಾದೂರ್ ಶಾಸಿ ಅವರ ಜಯಂತಿ ಆಚರಿಸಲಾಯಿತು.
    ಲೇಖಕ ಸಂತೋಷಕುಮಾರ ಎಸ್. ನಿಗಡಿ, ಉಪನ್ಯಾಸಕ ರೇವಣಸಿದ್ದ ಎಸ್. ಪಟ್ಟಣಶೆಟ್ಟಿ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಬಾದರಬಂಡಿ, ಸುನೀಲ ಜೈನಾಪೂರ, ರವಿ ಪವಾರ, ಶಂಕರ ಹಾಲಳ್ಳಿ, ಬೀರು ಗಾಡವೆ, ಸಂಜೀವ ಹೂಗಾರ, ಸಚಿನ್ ಹೂಗಾರ, ಕಿರಣ ರಾಠೋಡ, ಸತೀಶ ನಾಗಠಾಣ, ಜಗದೀಶ ಹಿರೇಮಠ, ಅಭಿಷೇಕ ಪವಾರ, ರೇವಣಸಿದ್ದೇಶ್ವರ ಮಠ, ಅಮೋಘಸಿದ್ದ ಘಾಟಗೆ, ಸಂದೀಪ ರಾಠೋಡ ಇತರರಿದ್ದರು.

    ಸತ್ಯದ ದಾರಿಯಲ್ಲಿ ನಡೆಯಿರಿ

    ಸತ್ಯದ ದಾರಿಯಲ್ಲಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಆರ್. ಪಾಟೀಲ (ಕುಚಬಾಳ) ಹೇಳಿದರು.
    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸತ್ಯದ ದಾರಿಯಲ್ಲಿ ನಡೆದು ಭಾರತಕ್ಕೆ ಸ್ವಾತಂತ್ರೃ ತಂದುಕೊಟ್ಟವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು. ಅವರ ಪ್ರೇರಣೆ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಸ್ವಚ್ಛ ಭಾರತ್ ಪರಿಕಲ್ಪನೆ ದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನದ ಮೂಲಕ ಗಾಂಧಿ ತತ್ವಕ್ಕೆ ಮನ್ನಣೆ ದೊರೆತಿದೆ ಎಂದರು.
    ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗೂರ, ರವಿಕಾಂತ ಬಗಲಿ, ಭೀಮಾಶಂಖರ ಹದನೂರ, ಗೋಪಾಲ ಘಟಕಾಂಬಳೆ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ರಾಜು ಮಗಿಮಠ, ಉಮೇಶ ವಂದಾಲ, ಸುರೇಶ ಬಿರಾದಾರ, ಕಾಂತು ಸಿಂಧೆ, ಅಶೋಕ ನ್ಯಾಮಗೊಂಡ, ಪಾಪುಸಿಂಗ ರಜಪೂತ, ಭರತ ಕೋಳಿ, ಗುರು ಗಚ್ಚಿನಮಠ, ಕೃಷ್ಣಾ ಗುನ್ನಾಳಕರ ಮತ್ತಿತರರಿದ್ದರು.

    ದ್ವೇಷದ ಭಾವನೆ ಬಿಡಿ

    ದ್ವೇಷದ ಭಾವನೆ ಬಿಟ್ಟು ಅಹಿಂಸೆ, ಸತ್ಯದ ಮಾರ್ಗದಲ್ಲಿ ನಡೆಯಿರಿ ಎಂದು ಸಿಕ್ಯಾಬ ಶಿಕ್ಷಣ ಸಂಸ್ಥೆ ನಿರ್ದೇಶಕ ಸಲಾಹುದ್ದೀನ್ ಅಯ್ಯುಬಿ ಪುಣೇಕರ ಹೇಳಿದರು.
    ಇಲ್ಲಿನ ಸಿಕ್ಯಾಬ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ ಗಾಂಧೀಜಿ ಹಾಗೂ ಶಾಸಿ ಅವರ ಜನ್ಮ ದಿನಾಚರಣೆ ಸಿಕ್ಯಾಬ ತಾಂತ್ರಿಕ ವಿದ್ಯಾಲಯದಲ್ಲಿ ಆಚರಿಸಲಾಯಿತು. ಕಾಲೇಜಿನ ಡೀನ್ ಡಾ. ನ್ಯಾಮತುಲ್ಲಾ, ಡಾ.ಸೈಯದ ಅಬ್ಬಾಸಅಲಿ, ಡಾ. ನೂರುಲ್ಲಾ ಶರೀಫ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts