More

    ಗುಣ ಹೊಂದಿದ 110 ಜನ

    ಕಾರವಾರ: ಜಿಲ್ಲೆಯ 59 ಜನರಿಗೆ ಕರೊನಾ ಸೋಂಕು ಇರುವುದು ಭಾನುವಾರ ಖಚಿತವಾಗಿದ್ದು, 110 ಜನ ಗುಣ ಹೊಂದಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ.

    ಕಾರವಾರದಲ್ಲಿ 23, ಅಂಕೋಲಾದಲ್ಲಿ 1, ಕುಮಟಾದಲ್ಲಿ 5, ಹೊನ್ನಾವರದಲ್ಲಿ 7, ಭಟ್ಕಳದಲ್ಲಿ 8, ಶಿರಸಿ ಮತ್ತು ಯಲ್ಲಾಪುರದಲ್ಲಿ ತಲಾ 3, ಹಳಿಯಾಳ ಮತ್ತು ದಾಂಡೇಲಿ ಸೇರಿ 5, ಮುಂಡಗೋಡಿನಲ್ಲಿ 4 ಜನರಿಗೆ ಕರೊನಾ ಇರುವುದು ಖಚಿತವಾಗಿದೆ.

    ಕಾರವಾರದಲ್ಲಿ 11, ಶಿರಸಿಯಲ್ಲಿ 6, ಮುಂಡಗೋಡಿನಲ್ಲಿ 37, ಹಳಿಯಾಳದಲ್ಲಿ 46, ಜೊಯಿಡಾದಲ್ಲಿ 10 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

    ಅಂಕೋಲಾ ಹಾಗೂ ಹಳಿಯಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 32 ಕ್ಕೇರಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 3279 ಆಗಿದ್ದು, 2381 ಜನ ಗುಣ ಹೊಂದಿದ್ದಾರೆ. ಇದುವರೆಗೆ 29759 ಜನರ ಗಂಟಲ ದ್ರವ ಪರಿಶೀಲಿಸಲಾಗಿದ್ದು, ಅದರಲ್ಲಿ 24561 ಜನರ ವರದಿ ನೆಗೆಟಿವ್ ಬಂದಿದೆ. 866 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts