More

    ಗುಣಮಟ್ಟದ ಶಿಕ್ಷಣ, ಉತ್ತಮ ವೈದ್ಯರ ತಯಾರಿ ಗುರಿ

    ಧಾರವಾಡ: ಕುಲಪತಿ ಡಾ. ವೀರೇಂದ್ರೆ ಹೆಗ್ಗಡೆ ಅವರಿಂದ ದೊರೆತ ನಿರಂತರ ಪ್ರೋತ್ಸಾಹ ಮತ್ತು ಎಸ್​ಡಿಎಂ ಕುಟುಂಬದವರಿಂದ ದೊರೆತ ಪರಿಶ್ರಮದ ಫಲವಾಗಿ ವಿಶ್ವವಿದ್ಯಾಲಯ ಎರಡೇ ವರ್ಷಗಳಲ್ಲಿ ಅತ್ಯುನ್ನತ ಶ್ರೇಣಿ ಸಾಧಿಸಲು ಸಾಧ್ಯವಾಯಿತು. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುವುದು ನಮ್ಮ ಗುರಿ ಎಂದು ಎಸ್​ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ ಹೇಳಿದರು.

    ಎಸ್​ಡಿಎಂ ಆಸ್ಪತ್ರೆಯ ಈಶ್ಯಾವಾಸ್ಯಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎಸ್​ಡಿಎಂ ವಿಶ್ವವಿದ್ಯಾಲಯದ 2ನೇ ವಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಇದೇವೇಳೆ ಡಾ. ನಿರಂಜನ ಕುಮಾರ, ವಿಶ್ವವಿದ್ಯಾಲಯದ 2 ವರ್ಷದ ಸಾಧನೆಯ ವಿಡಿಯೋ ತುಣುಕನ್ನು ಬಿಡುಗಡೆಗೊಳಿಸಿದರು.

    ಪದ್ಮಲತಾ ನಿರಂಜನ ಕುಮಾರ, ಉಪ ಕುಲಪತಿಗಳಾದ ಡಾ. ಎಸ್.ಕೆ. ಜೋಶಿ ಹಾಗೂ ಜೀವಂಧರ ಕುಮಾರ, ಇತರರು ಪಾಲ್ಗೊಂಡಿದ್ದರು.

    ಕುಲಸಚಿವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಯು.ಎಸ್. ದಿನೇಶ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಅನಂತ ಆಚಾರ್ಯ ಪ್ರಾರ್ಥಿಸಿದರು. ಡಾ. ಬಲರಾಮ ಡಿ. ನಾಯ್ಕ ನಿರ್ವಹಿಸಿದರು. ಡಾ. ರತ್ನಮಾಲಾ ದೇಸಾಯಿ ವಂದಿಸಿದರು.

    ರಾಜ್ಯ ಸರ್ಕಾರದ ಕೋವಿಡ್- 19ರ ನೋಡಲ್ ಅಧಿಕಾರಿ, ಬೆಂಗಳೂರು ನಿಮ್ಹಾನ್ಸ್​ನ ನಿವೃತ್ತ ವೈರಾಲಜಿ ತಜ್ಞ ಡಾ. ವಿ. ರವಿ ಅವರು ‘ವೈರಸ್​ಗಳ ಜೊತೆಗೆ ಜೀವನ’ ವಿಷಯ ಕುರಿತು ವರ್ಚುವಲ್ ಮೂಲಕ (ಆನ್​ಲೈನ್) ಉಪನ್ಯಾಸ ನೀಡಿದರು.

    ಕಾರ್ಯಕ್ರಮದಲ್ಲಿ ಎಸ್​ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಧರ್ಮಸ್ಥಳದಿಂದ ವರ್ಚುವಲ್ ವೇದಿಕೆಯಲ್ಲಿ (ಆನ್​ಲೈನ್) ಭಾಗವಹಿಸಿದ್ದರು. ಡಾ. ಹೆಗ್ಗಡೆ ಮಾತನಾಡಿ, ಒಳ್ಳೆಯ ಮನಸ್ಸಿನಿಂದ ಮಾಡಿದ ಸಣ್ಣ ಕೆಲಸ ಮತ್ತು ಪ್ರತಿಯೊಬ್ಬರ ತ್ಯಾಗವು ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪವಿತ್ರ ಎಂದೆನಿಸುತ್ತದೆ ಎಂದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts