More

    ಗುಣಮಟ್ಟದ ಬೆಳೆಯಿಂದ ಆರೋಗ್ಯ: ಬಾಬಿಜಾರ್ಜ್

    ತುಮಕೂರು: ಆಹಾರ ಸೇವನೆ ವೈವಿಧ್ಯದ ಕೊರತೆಯಿಂದ ಉತ್ತಮ ಆರೋಗ್ಯ ಹೊಂದಲು ಅಡ್ಡಿಯಾಗಿದೆ, ಆದ್ದರಿಂದ ಕಡಿಮೆ ಖರ್ಚಿನಲ್ಲಿ ಆಹಾರ ಉತ್ಪಾದನೆ ವಾಡಬೇಕು. ಅದು ಕಡಿಮೆ ದರದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬಾಬಿಜಾರ್ಜ್ ಸಲಹೆ ನೀಡಿದರು.

    ನಗರದ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹಜ ಬೇಸಾಯ ನೀತಿ ಕುರಿತ ರಾಜ್ಯ ಸವಾವೇಶ ಉದ್ಘಾಟಿಸಿ ವಾತನಾಡಿದರು. ಕ್ರೀಡಾಪಟುಗಳಿಗೆ ಸ್ಥಳೀಯ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಆದರೆ, ವಿದೇಶದಿಂದ ಆಹಾರ ತರಿಸಿಕೊಳ್ಳಬೇಕೆಂಬ ಮನೋಭಾವ ನಮ್ಮಲ್ಲಿದೆ, ಇದು ಹೋಗಬೇಕು ಎಂದ ಬಾಬಿಜಾರ್ಜ್, ನಮ್ಮ ವಂಶವಾಹಿನಿಯಲ್ಲೇ ಸ್ಥಳೀಯ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿದ್ದು ಕ್ರೀಡಾ ಪ್ರಾಧಿಕಾರ ಕ್ರೀಡಾಪಟುಗಳಿಗೆ ವೈವಿಧ್ಯಮಯ ಆಹಾರ ಒದಗಿಸಬೇಕು ಎಂದ ಅವರು, ಆಹಾರಧಾನ್ಯಗಳು ನೀಡುವ ಪ್ರೋಟೀನ್‌ನಿಂದ ಸಾಮರ್ಥ್ಯ ವೃದ್ಧಿಸುತ್ತದೆ, ಬೆಳೆ ಗುಣಮಟ್ಟ ಕುಸಿದರೆ ಜನಸಾವಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

    ಇಂದು ವಾನವ ಜಗತ್ತು ಅಸಹಜತೆಯಲ್ಲಿ ಜೀವನ ನಡೆಸುತ್ತಿರುವುದೇ ಕೃಷಿಯ ಅಸ್ಥಿರತೆಗೆ ಕಾರಣವಾಗಿದೆ, ಮನುಷ್ಯನಲ್ಲಿ ಸುಸ್ಥಿರ ಆಲೋಚನೆ ಮತ್ತು ವಿಚಾರಗಳಲ್ಲಿ ಬದಲಾವಣೆ ಆಗಬೇಕು ಎಂದು ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.

    ಕೃಷಿ ಇಂದು ಸಹಜವಾಗಿಲ್ಲ, ರಾಸಾಯನಿಕ ಗೊಬ್ಬರವನ್ನು ಹೆಚ್ಚು ಬಳಕೆ ವಾಡಲಾಗುತ್ತಿದೆ. ನೇಯ್ಗೆಯವರು, ಕುಂಬಾರಿಕೆ, ಬಡಿಗ, ಚವ್ಮಾರಿಕೆ ವಾಡುವವರು ಎಲ್ಲರೂ ಕೃಷಿ ಅವಲಂಬಿಸಿದ್ದರು. ಪರಸ್ಪರ ನೆಮ್ಮದಿಯಿಂದ ಬದುಕುತ್ತಿದ್ದರು. ಇಂತಹ ಪರಿಸ್ಥಿತಿ ಈಗ ಇಲ್ಲ. ವಾನವ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ವಾಜಿ ಶಾಸಕ ನಾಡಗೌಡ, ಶಿವಮೊಗ್ಗ ಜಿಪಂ ಅಧ್ಯಕ್ಷ ತೇಜಸ್ವಿ ಪಟೇಲ್, ಸಹಜ ಬೇಸಾಯ ಶಾಲೆಯ ಸಿ.ಯತಿರಾಜು, ವಿಜ್ಞಾನ ಕೇಂದ್ರದ ಟಿ.ಎಸ್. ನಿತ್ಯಾನಂದ, ಟಿ.ಜಿ.ಶಿವಲಿಂಗಯ್ಯ, ಪಂಡಿತ್ ಜವಾಹರ್, ರಾಮಕೃಷ್ಣಪ್ಪ ಎಂ.ಹನುಮದಾಸ್, ಕೆ.ನಾಗರಾಜರಾವ್ ಇತರರು ಇದ್ದರು.

    ಸಾಮ್ಯತೆ ಇದೆ…: ವರ್ಷಪೂರ್ತಿ ದುಡಿಯುವ ರೈತರು ಮತ್ತು ಕ್ರೀಡಾಪಟುಗಳು ಜೀವನದಲ್ಲಿ ಸೋಲು ಕಂಡರೂ ಪ್ರಯತ್ನಗಳನ್ನು ಮಾತ್ರ ನಿಲ್ಲಿಸುವುದಿಲ್ಲ, ನಿರಂತರ ಪ್ರಯತ್ನಗಳ ಮೂಲಕವೇ ಶ್ರಮವಹಿಸಿ ಸಾಧನೆ ವಾಡುತ್ತಾರೆ, ಆದ್ದರಿಂದ ರೈತರಿಗೆ ಮತ್ತು ಕ್ರೀಡಾಪಟುಗಳಿಗೆ ಸಾಕಷ್ಟು ಸಾಮ್ಯತೆಯಿದೆ ಎಂದು ಬಾಬಿಜಾರ್ಜ್‌ಬಣ್ಣಿಸಿದರು.

    ಕೃಷಿಯಿಂದ ಸುಸ್ಥಿರತೆ: ಪ್ರತಿ ಹಳ್ಳಿಯಲ್ಲೂ ಕೃಷಿ ವಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ, ಕೃಷಿ ಬಿಡಲು ನಗರಗಳ ಆಕರ್ಷಣೆಯೇ ಕಾರಣವಾಗಿದೆ, ಹಳ್ಳಿಗಳಲ್ಲಿ ರೈತರಿಗೆ ಬರ ಇದ್ದರೆ, ನಗರಗಳಲ್ಲಿ ಕೊಳಗೇರಿಗಳು ಹೆಚ್ಚುತ್ತಿವೆ, ಗ್ರಾಮೀಣ ಕಸುಬುಗಳು ವಾಯವಾಗುತ್ತಿವೆ, ಕಸುಬು ಆಧಾರಿತ ಕೃಷಿಯಿಂದ ವಾತ್ರ ಸುಸ್ಥಿರತೆ ಸಾಧ್ಯ ಎಂದು ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts