More

    ಗುಣಮಟ್ಟದ ಪನ್ನೀರ್‌ಗೆ ಶ್ರೀಮತಿ ಲಲಿತಾ ಸಂಕೇಶ್ವರ ಮೆಚ್ಚುಗೆ

    ಬೆಳಗಾವಿ: ನಮ್ಮ ರಾಜ್ಯದ ಎಲ್ಲ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರೈತರಿಂದ ಶೇಖರಿಸಿದ ಪರಿಶುದ್ಧ ಹಾಲಿನಿಂದ ತಯಾರಿಸಿರುವ ಪನ್ನೀರ್ ತುಂಬಾ ತನ್ನ ರುಚಿಯ ಮೂಲಕ ಹೆಸರುವಾಸಿಯಾಗಿದೆ ಎಂದು ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ ಹೇಳಿದ್ದಾರೆ.

    ಆದಿತ್ಯ ಮಿಲ್ಕ್‌ನ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಆರಂಭಿಸಲಾಗಿರುವ ಪನ್ನೀರ್ ಘಟಕಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು, ಮಾತನಾಡಿದರು. ಆದಿತ್ಯ ಮಿಲ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕಾಂತ ಸಿದ್ನಾಳ ಅವರು ಕ್ಷೀರ ಉದ್ಯಮದಲ್ಲಿ ‘ಆದಿತ್ಯ ಮಿಲ್ಕ್’ನ ಬ್ರಾೃಂಡ್‌ನ ಹಾಲು ಹಾಲಿನ ವಿವಿಧ ಉತ್ಪನ್ನಗಳ ಮೂಲಕ ಜನತೆಯ ಮನ ಗೆದ್ದಿದ್ದಾರೆ.

    ಆದಿತ್ಯ ಮಿಲ್ಕ್ ಬ್ರಾೃಂಡ್ ಅಡಿ 15 ವರ್ಷಗಳಿಂದ ಜನತೆಗೆ ವಿವಿಧ ಸೇವೆ ನೀಡುತ್ತಿರುವ ನಮ್ಮ ಕಂಪನಿಯೂ ಕರ್ನಾಟಕದ ಜತೆಗೆ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರಾೃಂಡ್ ಆಗಿದೆ ಎಂದರು. ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಕಾಲಕಾಲಕ್ಕೆ ಗ್ರಾಹಕರಿಗೆ ನೀಡುತ್ತ ಬಂದಿದೆ.

    ಈಗ ಜನತೆಯ ಬೇಡಿಕೆಯಿಂದಾಗಿ, ಪರಿಶುದ್ಧ ಹಾಲಿನಿಂದ ತಯಾರಿಸಿದ ಪನ್ನೀರ್‌ನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಜರ್ಮನ್ ತಂತ್ರಜ್ಞಾನವುಳ್ಳ ಸ್ವಯಂಚಾಲಿತ ಮಷೀನ್‌ಗಳ ಮೂಲಕ ಪನ್ನೀರ್ ತಯಾರಿಸಲಾಗುತ್ತಿದೆ. ಈ ಹೈಟೆಕ್ ಪನ್ನೀರ್ ಘಟಕ ವೀಕ್ಷಿಸಿದ ಬಳಿಕ ತುಂಬಾ ಖುಷಿಯಾಯಿತು ಎಂದು ಶ್ರೀಮತಿ ಲಲಿತಾ ಸಂಕೇಶ್ವರ ಅವರು ಸಂತಸ ವ್ಯಕ್ತಪಡಿಸಿದರು.

    ಸ್ವಚ್ಛತೆ, ಗುಣಮಟ್ಟಕ್ಕೆ ಆದ್ಯತೆ: ಆದಿತ್ಯ ಮಿಲ್ಕನ್ ವ್ಯವಸ್ಥಾಪಕ ನಿರ್ದೇಶಕ ಶಿವಕಾಂತ ಸಿದ್ನಾಳ ಅವರು ಮಾತನಾಡಿ, ಕಳೆದ ಒಂದೂವರೆ ದಶಕದಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ನೀಡುತ್ತಿದ್ದೇವೆ. ಆದಿತ್ಯ ಮಿಲ್ಕ್‌ನ ಪೇಡೆ, ಕುಂದಾ, ಶುದ್ಧ ತುಪ್ಪದಿಂದ ಮೈಸೂರ ಪಾಕ್, ಬೆಣ್ಣೆ, ತುಪ್ಪ, ಲಸ್ಸಿ, ಮಜ್ಜಿಗೆ, ಶ್ರೀಖಂಡ, ಆಮ್ರಖಂಡ, ಐಸ್-ಕ್ರೀಮ್, ಬದಾಮ ಹಾಲು, ಮಲಾಯಿ ಸೇರಿ ಮತ್ತಿತರ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಮ್ಮ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ.

    ಗ್ರಾಹಕರ ಬೆಂಬಲ ಹಾಗೂ ಒತ್ತಾಸೆಯಿಂದಾಗಿ ಹೈಟೆಕ್ ಪನ್ನೀರ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು, ಗುಣಮಟ್ಟದಲ್ಲಿ ನಾವು ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅದಕ್ಕಾಗಿ ಗ್ರಾಹಕರು ತಮಗಿಷ್ಟವಾದ ಪನ್ನೀರ್‌ನ್ನು ನಮ್ಮ ಪಾರ್ಲರ್‌ಗಳಲ್ಲಿ ಖರೀದಿಸಬಹುದಾಗಿದೆ ಎಂದರು. ಆದ್ಯಿತ್ಯಮಿಲ್ಕ್ ನಿರ್ದೇಶಕಿ ಶ್ರೀಮತಿ ದೀಪಾ ಶಿವಕಾಂತ ಸಿದ್ನಾಳ, ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ಛಾಯಾ ಸಂಕೇಶ್ವರ, ರಾಜನ ಸೋನಿ, ನಿಯಾಜ್ ಸೈಯ್ಯದ್, ಜಿಎಂ ಗಣೇಶ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts