More

    ಗುಣಮಟ್ಟದ ಆಹಾರ ಹಾಗೂ ಅಗತ್ಯ ಚಿಕಿತ್ಸೆ ನೀಡಿ

    ಕಮಲಾಪುರ : ಹೊರ ರಾಜ್ಯ ಜಿಲ್ಲೆಗಳಿಂದ ಕಮಲಾಪುರ ಹಾಗೂ ಮತ್ತಿತರ ಗ್ರಾಮಗಳಿಗೆ ಆಗಮಿಸಿದವರನ್ನು ಗುರುತಿಸಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿದವರಿಗೆ ಗುಣಮಟ್ಟದ ಆಹಾರ ಹಾಗೂ ಚಿಕಿತ್ಸೆ ನೀಡಬೇಕು. ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಎನ್- 95 ಮಾಸ್ಕ್, ಗ್ಲೌಸ್ ಹಾಗೂ ಅಗತ್ಯ ಸಮವಸ್ತ್ರಗಳನ್ನು ಒದಗಿಸುವಂತೆ ತಹಸೀಲ್ದಾರ್ ಅವರಿಗೆ ಶಾಸಕ ಬಸವರಾಜ ಮತ್ತಿಮೂಡ ತಾಕೀತು ಮಾಡಿದರು.
    ಕಮಲಾಪುರ ಮತ್ತು ಕಲ್ಮೂಡನ ಕ್ವಾರಂಟೈನ್ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿದ ಅವರು, ಕರೊನಾ ನಿಯಂತ್ರಣಕ್ಕೆ ಮತ್ತು ನಿಮ್ಮ ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಕ್ವಾರಂಟೈನ್ ಮಾಡುವುದು ಅಗತ್ಯವಾಗಿದೆ. ಅವಧಿ ಮುಗಿಯುವವರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅವಧಿ ಮುಗಿದ ನಂತರ ನಿಮ್ಮ ನಿಮ್ಮಮನೆಗಳಿಗೆ ಕಳುಹಿಸಲಾಗುತ್ತದೆ ಎಂದರು.
    ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಮಾತನಾಡಿ, ಕಮಲಾಪುರ ಕ್ವಾರಂಟೈನ್ ಕೇಂದ್ರದಲ್ಲಿ 58 ಹಾಗೂ ಕಲ್ಮೂಡ ಕೇಂದ್ರದಲ್ಲಿ 24 ಜನರಿದ್ದು , ಎಲ್ಲರಿಗೂ ಸಾಮಾಜಿಕ ಅಂತರದಲ್ಲಿರಿಸಲು ಪ್ರತ್ಯೇಕ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
    ಲೋಕೇಶ ರೆಡ್ಡಿ, ಶಶಿಧರ ಮಾಕಾ, ಶಿವಕುಮಾರ ದೋಶೆಟ್ಟಿ, ಪಿಎಸ್ಐ ಪರಶುರಾಮ, ಪ್ರಕಾಶ ರೆಡ್ಡಿ, ರಘುನಂದನ ದ್ಯಾಮಣಿ, ವಿಕಾಸ ಸಜ್ಜನ್, ಸಂದೀಪ ಬಿರಾದಾರ್, ಬಸವರಾಜ ಕಟ್ಟೋಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts