More

    ಗುಡಿಸಲು ತೆರವಿಗೆ ತೀವ್ರ ವಿರೋಧ

    ಗಜೇಂದ್ರಗಡ: ಸರ್ಕಾರಿ ಆಸ್ಪತ್ರೆ ಎದುರಿನ ವಿವಾದಿತ ಬಯಲು ಜಾಗದಲ್ಲಿ ಹಲವು ದಶಕದಿಂದ ನಿರ್ವಿುಸಿಕೊಂಡಿರುವ ಗುಡಿಸಲುಗಳನ್ನು ಬುಧವಾರ ಬೆಳಗ್ಗೆ ಜೆಸಿಬಿ ಮೂಲಕ ತೆರವುಗೊಳಿಸಲು ಆಗಮಿಸಿದ ಪುರಸಭೆ ಸಿಬ್ಬಂದಿ, ತೀವ್ರ ಪ್ರತಿಭಟನೆ ಹಿನ್ನೆಲೆ ಅರ್ಧಕ್ಕೆ ಮೊಟಕುಗೊಳಿಸಿ ಮರಳಬೇಕಾಯಿತು.

    ಫೆ. 14ರಂದು ಪಟ್ಟಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಾಣ ಮಾಡಲು ಸ್ಥಳ ನಿಗದಿಯಾಗಿದೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ಬಯಲು ಜಾಗದಲ್ಲಿ ಹಾಕಿಕೊಂಡಿರುವ ಗುಡಿಸಲುಗಳ ತೆರವಿಗೆ ಪುರಸಭೆ ಅಧಿಕಾರಿಗಳು ಮುಂದಾಗಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲಾವಕಾಶ ನೀಡಿ ಗುಡಿಸಲು ತೆರವಿಗೆ ಸೂಚನೆ ನೀಡಿ ಅಧಿಕಾರಿಗಳು ವಾಪಸಾದರು.

    ಪ್ರತಿಭಟನೆ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ಗುಡಿಸಲು ನಿವಾಸಿಗಳು ತಮ್ಮ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಮಕ್ಕಳ ಶಾಲಾ ದಾಖಲಾತಿಗಳನ್ನು ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.

    ಕಳೆದ 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಗುರುತಿನ ಚೀಟಿ ಹೊಂದಿದ್ದೇವೆ. ಸರ್ಕಾರ ಗುಡಿಸಲು ಮುಕ್ತ ಮಾಡುತ್ತೇವೆ ಎಂದಿದ್ದು, ಮನೆ ನಿರ್ವಿುಸಿಕೊಡಲು ಪುರಸಭೆಗೆ ಮನವಿ ಮಾಡಿದರೆ ಮನೆ ನೀಡುತ್ತಿಲ್ಲ. ಪುರಸಭೆ ಹಾಗೂ ಖಾಸಗಿ ವ್ಯಕ್ತಿಯ ಜಾಗದಲ್ಲಿ ತಕರಾರು ಏರ್ಪಟ್ಟು ಹಲವು ದಶಕದಿಂದ ನ್ಯಾಯಾಲಯದಲ್ಲಿ ದಾವೆ ಇರುವ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದೇವೆ. ಏಕಾಏಕಿ ಜೆಸಿಬಿ ಮೂಲಕ ದಾಳಿ ನಡೆಸಿ ಗುಡಿಸಲು ಕೆಡವಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಶಾಸಕ ಕಳಕಪ್ಪ ಬಂಡಿ ಹೇಳಿದ್ದಾರೆ. ಅದಕ್ಕೆ ಕೆಡವುತ್ತಿದ್ದೇವೆ ಎಂದು ಸಮರ್ಥಸಿಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳು, ಮಹಿಳೆಯರು ಒಳಗೊಂಡ ನಾವು ಹೋಗುವುದಾದರೂ ಎಲ್ಲಿಗೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

    ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ಇಲ್ಲಿ 30 ವರ್ಷಗಳಿಂದ ವಾಸ ಮಾಡುತ್ತಿರುವ ಗುಡಿಸಲು ನಿವಾಸಿಗಳಿಗೆ ಮೊದಲು ವಸತಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

    ಮುಖ್ಯಾಧಿಕಾರಿ ಮಾತಿಗೊಪ್ಪದ ಮುಖಂಡರು

    ಪುರಸಭೆ ಸಭಾಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಮುಖಂಡರು ಹಾಗೂ ನಿವಾಸಿಗಳ ಜೊತೆಗೆ ಸಭೆ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಎಪಿಎಂಸಿ ಎದುರಿನ ಬಯಲು ಜಾಗೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣವಿದೆ. ಯುವಜನ ಮೇಳಕ್ಕೆ ವೇದಿಕೆ ನಿರ್ಮಾಣ ಮಾಡಬೇಕಿರುವ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ಸ್ಥಳಾಂತರವಾಗುವಂತೆ ಗುಡಿಸಲುವಾಸಿಗಳಿಗೆ ಸೂಚಿಸಲಾಗಿತ್ತು. ನಿವಾಸಿಗಳು ತೆರವು ಮಾಡದ ಹಿನ್ನೆಲೆಯಲ್ಲಿ ತೆರವಿಗೆ ಮುಂದಾಗಿದ್ದೇವು. ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿರುವುದರಿಂದ ಇನ್ನೆರಡು ದಿನ ಕಾಲಾವಕಾಶ ನೀಡಲಾಗುವುದು ಎಂದು ಮನವಿ ಮಾಡಿದರು. ಇದಕ್ಕೆ ಗುಡಿಸಲು ವಾಸಿಗಳು ಹಾಗೂ ಮುಖಂಡರು ಒಪ್ಪಲಿಲ್ಲ. ಹೀಗಾಗಿ ಈ ವಿಷಯ ಕುರಿತು ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

    ದುರಗವ್ವ ಚನ್ನದಾಸರ, ಉಮೇಶ ರಾಠೋಡ, ಹುಸೇನಪ್ಪ ಶಿದೋಳ್ಳಿ, ಹುಲ್ಲಪ್ಪ ಜಾಲಗಾರ, ಎಫ್.ಎಸ್. ಕರಿದುರಗನವರ, ರಾಘವೇಂದ್ರ ಮಂತಾ, ಪಿ.ಎನ್. ದೊಡ್ಡಮನಿ, ರಾಜು ನಿಶಾನದಾರ, ಡಿ.ವೈ. ಹೊಸಮನಿ, ಲಕ್ಷ್ಮಣ ಮಾಳೊತ್ತರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts