More

    ಗುಟ್ಖಾ, ಸಿಗರೇಟ್ ನಿಷೇಧಕ್ಕೆ ಆಗ್ರಹ

    ಹುಬ್ಬಳ್ಳಿ ಕ್ಯಾನ್ಸರ್ ದಿನದ ಅಂಗವಾಗಿ ಶ್ರೀ ಕಾಳಿಕಾದೇವಿ ಪ್ರಸನ್ನ ಮಹಿಳಾ ಮಂಡಳ ವತಿಯಿಂದ ಗುಟ್ಖಾ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಕ್ಯಾನ್ಸರ್ ಮನುಕುಲವನ್ನು ಕಾಡುತ್ತಿರುವ ಗಂಭೀರ ಕಾಯಿಲೆಯಾಗಿದೆ. ಸಿಗರೇಟ್, ಗುಟ್ಖಾದಿಂದ ಶೇ. 81ರಷ್ಟು ಕ್ಯಾನ್ಸರ್ ರೋಗ ಹರಡುತ್ತದೆ. ಅವಳಿ ನಗರದಲ್ಲಿ 10 ವರ್ಷಗಳಲ್ಲಿ ಒಟ್ಟು 56530 ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಕ್ಯಾನ್ಸರ್​ಪೀಡಿತರ ಕುಟುಂಬಗಳ ಕಷ್ಟ ಹೇಳತೀರದಾಗಿದೆ. ಹಾಗಾಗಿ, ಸರ್ಕಾರ ಈ ಕೂಡಲೆ ತಂಬಾಕು, ಗುಟ್ಖಾ, ಸಿಗರೇಟ್ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಗೋಪನಕೊಪ್ಪದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ರ‍್ಯಾಲಿ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ರವಾನಿಸಿದರು.

    ಸಂಘದ ಅಧ್ಯಕ್ಷೆ ಆರತಿ ಮಾಚರೆ, ಮಾಸವ್ವ ಕಂಬಳಿ, ಅನ್ನಪೂರ್ಣಾ ಅಂಬ್ಲಿಕೊಪ್ಪ, ಸಲ್ಮಾ ಸನ್ನಿ, ನೀಲಮ್ಮ ಹೊಂಗಲ, ಬೀಬಿಜಾನ್ ನದಾಫ್, ಲಕ್ಷ್ಮೀ ಸಣ್ಣಕ್ಕಿ, ರಾಧಾ ಅಮರಚಿಂತಾ, ಶೋಭಾ ಅಂಬ್ಲಿಕೊಪ್ಪ, ವಿಜಯಲಕ್ಷ್ಮೀ ಸೈನಾಪುರ, ಮಧುಮತಿ ಕುಂಠೆ, ಮಲ್ಲವ್ವ ಭಜಂತ್ರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts