More

    ಗಿರಿ ಜಿಲ್ಲಾದ್ಯಂತ ಉತ್ತಮ ವರ್ಷಧಾರೆ

    ಯಾದಗಿರಿ : ಪ್ರಸಕ್ತ ಮುಂಗಾರು ಜಿಲ್ಲೆಯಲ್ಲಿ ಅತ್ಯಂತ ದುರ್ಬಲಗೊಂಡು ಅನ್ನದಾತರಲ್ಲಿ ತೀವ್ರ ಆತಂಕ ಮೂಡಿಸಿತ್ತಾದರೂ ಮೂರು ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆ ಹತ್ತಿ ಬೆಳೆಗೆ ಚೈತನ್ಯ ನೀಡಿದೆ.

    ಜಿಲ್ಲೆಯಲ್ಲಿ ವಾಡಿಕೆ ಮಳೆ ೧೬೭ ಮಿಮೀ ಪೈಕಿ ೧೧೯ ಮಿಮೀ ಸುರಿದಿದೆ. ಇನ್ನು ೪,೦೧,೬೩೮ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಮಳೆ ಕೊರತೆಯಿಂದ ಇದುವರೆಗೆ ಕೇವಲ ೧,೩೩,೯೦೨ ಹೆಕ್ಟೇರ್ ಬಿತ್ತನೆಯಾಗಿದೆ.

    ಜಿಟಿಜಿಟಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶುಕ್ರವಾರ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದು, ಗ್ರಾಮೀಣ ಭಾಗದಲ್ಲಿ ೨೬ ಮನೆಗಳು ನೆಲಕಚ್ಚಿವೆ. ಇದರಲ್ಲಿ ಯಾದಗಿರಿ ತಾಲೂಕಿನಲ್ಲೇ ಅತಿ ಹೆಚ್ಚು ೧೫ ಮನೆ ಪ್ರಾಯಶಃ ಬಿರುಕು ಬಿಟ್ಟಿವೆ.
    ಇನ್ನು ಜಿಲ್ಲಾ ಕೇಂದ್ರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದುರ್ಗಾ ನಗರ, ವಾಲ್ಮೀಕಿ ನಗರ, ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಗಳ ಹಲವು ಮನೆಗ¼ಲ್ಲಿ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.

    ನಗರಸಭೆಯಿಂದ ಹಲವು ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಮುಂದುವರಿಸಲಾಗಿದೆ. ಪುನರ್ವಸು ಮಳೆಯಿಂದ ಗ್ರಾಮೀಣ ಭಾಗ ಕಳೆಗಟ್ಟಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಕೊಂಚ ಕಳೆ ಬಂದAತಾಗಿದೆ. ಹತ್ತಿ ಬೆಳೆಗೆ ಈ ಮಳೆ ಲಾಭದಾಯಕ ಎನಿಸಿದೆ.

    ಕೆಂಭಾವಿ: ಎರಡು ದಿನದಿಂದ ಪಟ್ಟಣ ಸೇರಿ ವಿವಿಧೆಡೆ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಪುನರ್ವಸು ಮಳೆ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಕಳೆ ಮೂಡಿಸಿದೆ. ಸಾಲ ಮಾಡಿ ಬೀಜ ಮತ್ತು ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಸಕಾಲಕ್ಕೆ ಮಳೆಯಾಗದೆ ಆಗಸದತ್ತ ಮುಖ ಮಾಡಿದ್ದರು. ಕೆಲವರು ಸರಿಯಾಗಿ ಮಳೆಯಾಗದ ನಂತರ ಬಿತ್ತುವ ಯೋಚನೆಯಲ್ಲಿದ್ದರು. ಮಳೆಗಾಗಿ ಹಲವೆಡೆ ಪೂಜೆ ಸಹ ಮಾಡಲಾಗಿತ್ತು. ಎಲ್ಲೆಡೆ ಪ್ರಾರ್ಥನೆ ಫಲದಿಂದ ಕೊನೆಗೂ ಮಳೆರಾಯ ಧರೆಗಿಳಿದಿರುವುದು ಖುಷಿ ತಂದಿದೆ. ತಾಲೂಕಿನಲ್ಲೇ ಅತಿ ಹೆಚ್ಚು ಕೆಂಭಾವಿಯಲ್ಲಿ ೪೩ ಮಿಮೀ ಮಳೆಯಾಗಿದ್ದು, ಶುಕ್ರವಾರ ರಸಗೊಬ್ಬರ ಅಂಗಡಿಗಳ ಎದುರು ರೈತರು ಬೀಜ ಖರೀದಿಸಲು ಜಮಾಯಿಸಿದ ದೃಶ್ಯ ಕಂಡಿತು.

    ಕೊಡೇಕಲ್ : ಹೆಸರು, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮೂರು ದಿನದ ಮಳೆ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಗುರುವಾರ ದಿನವಿಡೀ ಉತ್ತಮ ಮಳೆಯಾಗಿ ಭೂಮಿ ಬಿತ್ತನೆಗೆ ಯೋಗ್ಯವಾದಷ್ಟು ಹಸಿಯಾಗಿದೆ. ಒಣಗುವ ಹಂತಕ್ಕೆ ಬಂದಿದ್ದ ಬೆಳೆಗಳಿಗೆ ಈ ಮಳೆ ಜೀವಕಳೆ ನೀಡಿದೆ. ಬತ್ತಿ ಹೋಗಿದ್ದ ಹಳ್ಳ -ಕೊಳ್ಳಗಳಲ್ಲಿ ನೀರು ಸಂಗ್ರಹಗೊAಡಿದ್ದು, ಕೃಷಿ ಹೊಂಡಗಳು ಭರ್ತಿಯಾಗಿವೆ. ಕೊಡೇಕಲ್‌ನಲ್ಲಿ ೨೭ ಮಿಮೀ, ನಾರಾಯಣಪುರದಲ್ಲಿ ೧೩.೬ ಮಿಮೀ ಮಳೆಯಾಗಿದೆ. ಹಸಿರು ಹುಲ್ಲು ಚಿಗುರೊಡೆದು ಜಾನುವಾರುಗಳಿಗೆ ಮೇವು ಸಿಗುವ ಭರವಸೆ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts